Home ಜಿಲ್ಲೆ ಹಿಂದೂ ಸಮಾಜೋತ್ಸವ: ಧರ್ಮಸಭೆ

ಹಿಂದೂ ಸಮಾಜೋತ್ಸವ: ಧರ್ಮಸಭೆ

ಲಕ್ಷ್ಮೇಶ್ವರ,ಫೆ25: ಪ್ರತಿಯೊಬ್ಬ ಹಿಂದೂಗಳು ತಮ್ಮ ಜಾತಿ-ಉಪಜಾತಿಗಳನ್ನು ಮರೆತು ನಾವೆಲ್ಲ ಒಂದು ನಾವೆಲ್ಲ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಂಡು ಅದರಂತೆ ಬಾಳಿದಾಗ ಮಾತ್ರ ನಮ್ಮ ಒಗ್ಗಟ್ಟಿನ ಶಕ್ತಿಗೆ ಯಾವ ದುಷ್ಟಶಕ್ತಿಗಳೂ ಎನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಯುವ ವಾಗ್ಮಿ, ಹಿಂದುತ್ವವಾದಿ ಕು. ಹಾರಿಕಾ ಮಂಜುನಾಥ ಹೇಳಿದರು.


ಅವರು ತಾಲೂಕಿನ ಪು. ಬಡ್ನಿ ಗ್ರಾಮದಲ್ಲಿ ನಡೆದ ಹಿಂದೂ ಸಮಾಜೋತ್ಸವದ ಧರ್ಮಸಭೆಯಲ್ಲಿ ಮಾತನಾಡುತ್ತ, ಎಲ್ಲ ಹಿಂದೂಗಳ ಒಳಜಾತಿ ವಿಷಯ ಮನೆಯ ದೇವರ ಕೋಣೆಗೆ ಮಾತ್ರ ಸೀಮಿತವಾಗಬೇಕು. ಮನೆಯಿಂದ ಹೊರಗೆ ಜಾತಿ, ಮತ, ಪಕ್ಷ ಬೇಧ ಮರೆತು ನಾವೆಲ್ಲ ಹಿಂದೂ ನಾವೆಲ್ಲ ಹಿಂದೂ ಎಂಬ ಮನೋಭಾವ ಅಂತರ್ಗತವಾಗಬೇಕು. ಹಿಂದೂ ಧರ್ಮದ ವೈಭವಕ್ಕೆ ಧಾರ್ಮಿಕ ಕ್ಷೇತ್ರಗಳೇ ಕಾರಣ. ಸನಾತನ ಹಿಂದೂ ಧರ್ಮ ಸಂರಕ್ಷಣೆ ಆದಾಗ ಮಾತ್ರ ದೇಶ ಸುರಕ್ಷಿತವಾಗಿರುತ್ತದೆ.


ಹೊಸರಿತ್ತಿಯ ಶ್ರೀ ಗುದ್ದಲಿ ಶಿವಯೋಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಹಿಂದೂ ಎಂದರೆ ಹಿಂಸೆಯಿಂದ ದೂರ ಇರುವುದು. ಅನ್ಯ ಪಂತದವರು ಅದನ್ನೇ ದೌರ್ಬಲ್ಯ ಎಂದು ತಿಳಿದುಕೊಂಡಿವೆ. ಕೆಲವರು ಆರ್‍ಎಸ್‍ಎಸ್ ಬ್ಯಾನ್ ಮಾಡುವ ಕುರಿತು ಮಾತನಾಡುತ್ತಿರುವುದು ಕೇವಲ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಇವರಲ್ಲಿ ದೇಶ, ಧರ್ಮದ ಬಗ್ಗೆ ಚಿಂತನೆಯಿಲ್ಲ. ಭಾರತ ದೇಶದ ಮೇಲೆ ಲೆಕ್ಕವಿಲ್ಲದ?À್ಟು ದಾಳಿಯಾದರೂ ಹಿಂದೂ ಧರ್ಮ ನಶಿಸಿ ಹೋಗಿಲ್ಲ.ಹಿಂದೂ ಧರ್ಮ ಎಲ್ಲ ಧರ್ಮದವರನ್ನು ಅಪ್ಪಿಕೊಳ್ಳುತ್ತದೆ.ಎಂದು ಹೇಳಿದರು.


ಸಂಕದಾಳದ ಹಾಲಸ್ವಾಮಿಮಠದ ವಾಗೀಶ ಪಂಡಿತಾರಾದ್ಯ ಹಾಲಶಿವಾಯೋಗಿಗಳು ಮಾತನಾಡಿ. ಪ್ರತಿಯೊಬ್ಬ ಹಿಂದೂಗಳು ತಮ್ಮ ಮಕ್ಕಳಿಗೆ ಧರ್ಮದ ಸಂಸ್ಕಾರ ಬೆಳೆಸಬೇಕು.,ಈ ನಿಟ್ಟನಲ್ಲಿ ಪಾಲಕರು, ಹಿಂದೂಪರ ಸಂಘಟನೆಗಳು, ಮಠಮಾನ್ಯಗಳ ಪಾತ್ರ ಮಹತ್ವದ್ದಾಗಿದೆ ಎಂದರು.


ಧರ್ಮಸಭೆಗೂ ಮೊದಲು ಗ್ರಾಮದಲ್ಲಿ ಅದ್ದೂರಿಯಾಗಿ ಶೋಭಾಯಾತ್ರೆ ನಡೆಯಿತು. ಭಾರತಮಾತೆ, ಶ್ರೀ ರಾಮನ ಭಾವಚಿತ್ರದೊಂದಿಗೆ ಸಾಗಿದ ಮೆರವಣಿಗೆಗೆ ಪೂರ್ಣ ಕುಂಭ, ಭಜನೆ, ಡೊಳ್ಳು, ಜಾಂಜ್ ವಿವಿಧ ವಾದ್ಯಗಳು ಮೆರಗು ಹೆಚ್ಚಿಸಿದ್ದವು.