
ಅರಸೀಕೆರೆ, ಜ. ೨೪- ಹಿಂದೂಗಳ ಜಾಗೃತಿಗಾಗಿ ಹಿಂದೆ ವಿರಾಟ್ ಎಂಬ ಕಾರ್ಯಕ್ರಮ ಮಾಡಿದ್ದೆವು. ಈಗ ಅದರ ಹೆಸರು ಬದಲಾಗಿ ಹಿಂದೂ ಸಮಾಜೋತ್ಸವ ಎಂಬ ಕಾರ್ಯಕ್ರಮವನ್ನು ನಗರದ ಬಸವರಾಜೇಂದ್ರ ಪ್ರೌಢಶಾಲೆ ಆವರಣದಲ್ಲಿ ಜ. ೨೫ ರಂದು ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಮನು ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ ೩.೩೦ ಕ್ಕೆ ಪ್ರವಾಸಿ ಮಂದಿರದ ಹತ್ತಿರವಿರುವ ಗಣಪತಿ ದೇವಾಲಯದಿಂದ ಶೋಭಾ ಯಾತ್ರೆ ಆರಂಭವಾಗಿ ನಂತರ ಸಂಜೆ ೫ ಗಂಟೆಗೆ ವೇದಿಕೆ ಕಾರ್ಯಕ್ರಮವು ಬಸವರಾಜೇಂದ್ರ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿಕ್ಕಮಗಳೂರು ವಿಶ್ವಧರ್ಮ ಪೀಠದ ಜಯಬಸವಾನಂದ ತಪೋವನದ ಡಾ: ಶ್ರೀ ಜಯಬಸವಾನಂದ ಸ್ವಾಮೀಜಿ ವಹಿಸುವರು. ಶರಣ ಪಂಪ್‌ವೆಲ್ ಪ್ರಾಂತ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷತ್ತು ಇವರು ಇಲ್ಲಿ ಬೌದ್ಧಿಕನ್ನು ನೀಡುವರು ಎಂದು ತಿಳಿಸಿದರು.
ಅಗ್ಗುಂದ ಓಂಕಾರ್ ಮಾತನಾಡಿ, ಕಸಬಾ ಹೋಬಳಿಯ ಹಿಂದೂ ಸಮಾಜೋತ್ಸವ ಕಾರ್ಯಕ್ರಮವು ಡಿ. ೨೬ ಅಗ್ಗುಂದದಿಂದ ೧೦:೩೦ ಕ್ಕೆ ಆರಂಭವಾಗಿ ೧೨ ಗಂಟೆಗೆ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಜಯರಾಮ್ ಬಳ್ಳೊಜಿ ಬೌದ್ಧಿಕ ನೀಡಲಿದ್ದಾರೆ ಎಂದರು.
ಕಣಕಟ್ಟೆ ಹೋಬಳಿಯ ಕಾರ್ಯಕ್ರಮ ಜ. ೨೫ ರಂದು ನಡೆಯಲಿದ್ದು ರಮೇಶ್ ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು. ಜಾವಗಲ್ ಹೋಬಳಿಯ ಕಾರ್ಯಕ್ರಮ ಜ. ೩೧ ರಂದು ಮಧ್ಯಾಹ್ನ ೨ ಗಂಟೆಗೆ ಶೋಭಾ ಯಾತ್ರೆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಮಹಿಪಾಲ್ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳುವರು.
ಹಾರನಹಳ್ಳಿಯಲ್ಲಿ ಜ. ೩೧ ರಂದು ಸಂಜೆ ೫ ಗಂಟೆಗೆ ಚನ್ನಕೇಶವ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ಮಹಿಪಾಲ್ ಅವರು ಭಾಗವಹಿಸಲಿದ್ದಾರೆ
ಬಾಣವಾರದಲ್ಲಿ ಜ. ೩೧ರಂದು ಸಂಜೆ ಹನುಮಾನ್ ಕ್ಲಬ್ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಇಲ್ಲಿ ಗೋವಿಂದ್ ಜಿ ಅವರು ಮುಖ್ಯ ಭಾಷಣಕಾರರಾಗಿದ್ದಾರೆ ಎಂದು ತಿಳಿಸಿದರು.
ಹಿಂದೂ ಸಮಾಜೋತ್ಸವದ ಮಹಿಳಾ ಘಟಕದ ಸಹ ಸಂಚಾಲಕಿ ಸುಧಾ ಕಲ್ಯಾಣ ಮಾತನಾಡಿ, ಕೆಲವು ದೇಶಗಳಲ್ಲಿ ಹಿಂದೂಗಳ ಮೇಲೆ ಬಾಂಗ್ಲಾ ದೇಶದಂತ ದೇಶಗಳಲ್ಲಿ ಹಿಂದುಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹೋರಾಟ ನಡೆಯುತ್ತಿದೆ. ಹಿಂದೂಗಳು ಜಾಗೃತರಾಗಬೇಕು. ಇಂಥ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಮತ್ತು ಮಹಿಳೆಯರು ಭಾಗವಹಿಸಬೇಕು ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಪತ್ ಕುಮಾರ್, ಕೃಷ್ಣ, ಶ್ವೇತಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು


























