ಹಿಂದಿ ಭಾಷೆಗಿದೆ ಜಾಗತಿಕ ಮನ್ನಣೆ

ಕಲಬುರಗಿ:ಜ.೧೧: ಹಿಂದಿ ಭಾಷೆಯು ನಮ್ಮ ದೇಶದ ಅತಿ ಹೆಚ್ಚು ಜನರು ಮಾತನಾಡುವ, ಸುಲಭವಾಗಿ ಅರ್ಥವಾಗುವ, ಭಾಷೆಯಾಗಿದೆ. ಇದು ದೇಶದ ಉದ್ದಗಲಕ್ಕೂ ವ್ಯಾಪಿಸಿದೆ. ಹಿಂದಿ ಭಾಷೆಯು ನಮ್ಮ ದೇಶದ ಸಂಸ್ಕೃತಿ, ಪರಂಪರೆಯ ರಾಯಭಾರಿಯಾಗಿ ಪ್ರತಿನಿಧಿಸುತ್ತದೆ. ನಮ್ಮ ದೇಶವಲ್ಲದೆ ಯುಕೆ, ಫಿಜಿ, ಸಿಂಗಾಪುರ, ನೇಪಾಳ, ಮೌರಿಷಶ್, ಸುರಿನಾಮಾ, ಗುಯಾನಾ, ಟ್ರೆöÊನೈಡ್, ಟ್ಯೋಬಾಗೋ, ಕೆನೆಡಾ, ಯುಎಇ, ಸೌದಿ ಅರೇಬಿಯಾ, ಕುವೈತ್,ಮಲೇಷಿಯಾ, ಬಾಂಗ್ಲಾದೇಶ ಸೇರಿದಂತೆ ವಿಶ್ವದ ಅನೇಕ ರಾಷ್ಟçಗಳಲ್ಲಿ ಹಿಂದಿ ಭಾಷೆಯು ಬಳಕೆಯಲ್ಲಿದ್ದು, ಇದಕ್ಕೆ ಜಾಗತಿಕ ಮನ್ನಣೆ ದೊರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹಿಂದಿ ಲೇಖಕ ಸುನಿಲ್ ಚೌಧರಿ ಹೇಳಿದರು.
ನಗರದ ಶಹಬಾಜಾರ ಮಹಾದೇವ ನಗರದಲ್ಲಿನ ‘ಸ್ವಾತಿ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಹಿಂದಿ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು.
ಪ್ರತಿವರ್ಷ ಜ-೧೦ರಂದು ‘ವಿಶ್ವ ಹಿಂದಿ ದಿವಸ್’ವನ್ನಾಗಿ ಆಚರಿಸಲಾಗುತ್ತದೆ. ಹಿಂದಿಯನ್ನು ಜಾಗತಿಕ ಭಾಷೆಯನ್ನಾಗಿ ಉತ್ತೇಜಿಸುವುದು ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ. ೧೯೭೫ರಲ್ಲಿ ಮೊದಲ ವಿಶ್ವ ಹಿಂದಿ ಸಮ್ಮೇಳನ ನಾಗಪೂರ್‌ನಲ್ಲಿ ಜರುಗಿತು. ೨೦೦೬ರಲ್ಲಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ಈ ದಿನವನ್ನು ಅಧಿಕೃತವಾಗಿ ಘೋಷಿಸಿದರು. ಹಿಂದಿಯು ದೇಶದಸಾಂಸ್ಕೃತಿಕ ಏಕತೆ ಮತ್ತು ಅಭಿವ್ಯಕ್ತಿಗೆ ಸೇತುವೆಯಾಗಿದೆ ಎಂದರು.
ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಭಾಷೆಯಲ್ಲಿ ಮೇಲು-ಕೀಳು ಸಲ್ಲದು. ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ. ಹಿಂದಿಯು ದೇವನಾಗರಿ ಲಿಪಿಯನ್ನು ಹೊಂದಿದೆ. ಇದು ಸರಳ ಹಾಗೂ ಜನ ಸಾಮಾನ್ಯರಿಗೆ ತಿಳಿಯುತ್ತದೆ. ನಮ್ಮ ಮಾತೃಭಾಷೆಯನ್ನು ಹೃದಯಾಂತರಾಳದಿAದ ಪ್ರೀತಿಸಿ, ಅನ್ಯ ಭಾಷೆಗಳನ್ನು ಗೌರವಿಸುವ ಗುಣ ನಮ್ಮದಾಗಬೇಕು. ಅದಕ್ಕಾಗಿ ಭಾಷಾ ಸಾಮರಸ್ಯ ಮೈಗೂಡಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಚಿಂತಕ ರವಿ ಬಿರಾಜಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ, ಶಿಕ್ಷಕಿಯರಾದ ಕಾಶಮ್ಮ ಚಿನಮಳ್ಳಿ, ಶಿಲ್ಪಾ ಖೇಡ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲೆಯ ಹಿಂದಿ ಭಾಷಾ ಶಿಕ್ಷಕಿ ವರ್ಷಾರಾಣಿ ಪಾಟೀಲ್ ನಿರೂಪಣೆ ಮಾಡಿ, ವಂದಿಸಿದರು.