ಹಿಂದಿ ಅಖಂಡ ಭಾರತ ಜೋಡಿಸುವ ಭಾಷೆ

ಬೀದರ್: ಸೆ.೧೭:ಹಿಂದಿ ಭಾಷೆಯು ದೇಸಿ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಅಖಂಡ ಭಾರತವನ್ನು ಜೋಡಿಸುವ ಭಾಷೆಯಾಗಿದೆ ಎಂದು ಬಿ.ವಿ. ಭೂಮರಡ್ಡಿ ಪದವಿಪೂರ್ವ ಕಾಲೇಜು ಪ್ರಾಚಾರ್ಯೆ ಡಾ. ದೀಪಾ ರಾಗಾ ಹೇಳಿದರು.
ನಗರದ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿ ದೇಶದ ಅನೇಕ ರಾಜ್ಯ, ದೇಶ, ವಿದೇಶದಲ್ಲಿ ಪ್ರಸಿದ್ಧಿ ಪಡೆದ ಭಾಷೆಯಾಗಿದೆ.
ಹಿಂದಿ ಕಲಿತವರಿಗೆ ಸಾಕಷ್ಟು ಉದ್ಯೋಗ ಅವಕಾಶಗಳು ಇವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಆರ್.ವಿ. ಗಂಗಶೆಟ್ಟಿ ಮಾತನಾಡಿ, ಯಾರೂ ಯಾವ ಭಾಷೆಯನ್ನೂ ದ್ವೇಷಿಸಬಾರದು. ಎಲ್ಲ ಭಾಷೆಗಳನ್ನು ಪ್ರೀತಿಸಬೇಕು ಎಂದು ಹೇಳಿದರು.
ಹಿಂದಿ ಸಾಹಿತ್ತಿಕ, ಸಾಂಸ್ಕೃತಿಕವಾಗಿ ಸಮೃದ್ಧ ಭಾಷೆಯಾಗಿದೆ. ದೇಶಕ್ಕೆ ಹಿಂದಿ ಕೊಡುಗೆ ಅಪಾರವಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ ತಿಳಿಸಿದರು.
ಹಿಂದಿ ಭಾಷೆಯನ್ನು ಉಳಿಸಿ ಬೆಳೆಸುವುದು ಅವಶ್ಯಕವಾಗಿದೆ ಎಂದು ಹಿಂದಿ ವಿಭಾಗದ ಮುಖ್ಯಸ್ಥ ನೆಹರೂ ಪವಾರ್ ಹೇಳಿದರು.
ಉಪನ್ಯಾಸಕರಾದ ಈಶ್ವರ ರೆಡ್ಡಿ, ಸಂಗಪ್ಪ ತೌಡಿ, ರಾಜಮ್ಮ ನೇಳಗೆ, ರಾಖಿ ಕಾಡಗೆ, ಶ್ವೇತಾ, ಮಂಗಲಾ, ಶ್ರೀಲತಾ, ಸಪ್ನಾ, ವಿಜಯಲಕ್ಷ್ಮಿ, ಅರ್ಚನಾ, ಆಕಾಶ್ ಇದ್ದರು.
ವಿದ್ಯಾರ್ಥಿನಿ ಗೀತಾ ಸ್ವಾಗತಿಸಿದರು. ರಾಧಿಕಾ ನಿರೂಪಿಸಿದರು. ಆರತಿ ವಂದಿಸಿದರು.