ಪಾದಯಾತ್ರೆ :ಹಿಪ್ಪರಗಿಯಿಂದ ಗುಜರಾತ್ ಕಡೆಗೆ

ಕಲಬುರಗಿ,ನ. 10: ಇಲ್ಲಿಯವರೆಗೂ ಸುಮಾರು 12 ಸಾವಿರ ಕಿ.ಮೀ 360 ದಿನಗಳ ಕಾಲ ಪಾದಯಾತ್ರೆ ಮಾಡಿದ ಪಾದಯಾತ್ರೆಗೌಡರೆಂದೇ ಚಿರಪರಿಚಿತ ಕಲಬುರಗಿ ಜಿಲ್ಲೆಯ ಜೇವರಗಿ ತಾಲೂಕಿನ ಹಿಪ್ಪರಗಾ ಎಸ್.ಎನ್. ಗ್ರಾಮದ ಶ್ರೀ ಗೌರಿ ಶಂಕರ ದೇವಸ್ಥಾನದ ಅಧ್ಯಕ್ಷ ಮಡಿವಾಳಪ್ಪಗೌಡ ಮಾಲಿಪಾಟೀಲ ಅವರು ತಮ್ಮ ತಂಡದೊಂದಿಗೆ ಮುಂಬರುವ ಜನವರಿ ತಿಂಗಳಲ್ಲಿ ಪಾದಯಾತ್ರೆಗೆ ತೆರಳಲು ಸಜ್ಜಾಗುತ್ತಲಿದ್ದಾರೆ.50 ದಿನಗಳ 1800 ಕಿ.ಮೀ ದೂರದ ಪಾದಯಾತ್ರೆಗೆ ಸಿದ್ಧತೆ ನಡೆದಿದೆ
ಈ ತಂಡ ಮಂದೇವಾಲ ಹಿಪ್ಪರಗಿ ಗ್ರಾಮದಿಂದ ಅಕ್ಕಲಕೋಟೆ, ಸೊಲ್ಲಾಪೂರ, ಭೀಮಾಶಂಕರ ಜ್ಯೋತಿರ್ಲಿಂಗ, ನಾಶಿಕ, ತ್ರಯಂಬಕೇಶ್ವರ ಜೋತಿರ್ಲಿಂಗ ಗುಜರಾತ ರಾಜ್ಯದ ಸೂರತ್ , ವಡೋದರ, ಭಾವನಗರ, ಸೌರಾಷ್ಟ್ರ ಸೋಮನಾಥೇಶ್ವರ ಜ್ಯೋತಿರ್ಲಿಂಗ, ಪೆÇೀರಬಂದರ್ ,ದ್ವಾರಕ, ರುಕ್ಷ್ಮಿಣಿ ದೇವಿ ಮಂದಿರ, ನಾಗೇಶ್ವರ ಜ್ಯೋತಿರ್ಲಿಂಗ ಹೀಗೆ ಮಹಾರಾಷ್ಟ್ರ ಹಾಗೂ ಗುಜರಾತ ರಾಜ್ಯದ ಜ್ಯೋತಿರ್ಲಿಂಗಳ ಕ್ಷೇತ್ರ ದರ್ಶನಕ್ಕೆ ಪಾದಯಾತ್ರೆ ಮೂಲಕ ತೆರಳಲು ಸಜ್ಜಾಗುತ್ತಲಿದ್ದಾರೆ.ಇದರೊಂದಿಗೆ ಇವರು ಹನ್ನೆರಡು ಜ್ಯೋತಿರ್ಲಿಂಗಳು ಪಾದಯಾತ್ರೆ ಮೂಲಕವೇ ದರ್ಶನ ಪಡೆದಂತಾಗುವದು.ಇವರು ಕಾಶಿಗೆ ಪಾದಯಾತ್ರೆ ಮೂಲಕ ಮೂರು ಬಾರಿ ತೆರಳಿದ್ದರು. ಬಹುಶಃ ಅವರು ವಾಹನದಲ್ಲಿ ತೆರಳಿ ಪುಣ್ಯ ಕ್ಷೇತ್ರ ದರ್ಶನ ಪಡೆದಿದ್ದಕ್ಕಿಂತ ಹೆಚ್ಚು ಪಾದಯಾತ್ರೆ ಮೂಲಕವೇ ದೇವರ ದರ್ಶನ ಮಾಡಿದ್ದೇ ಹೆಚ್ಚು ಎಂದು ಗುರುರಾಜ.ಕೆ.ಪಟ್ಟಣಶೆಟ್ಟಿ ಅವರು ತಿಳಿಸಿದ್ದಾರೆ.