ಬಸವೇಶ್ವರ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ: ಶಶಿಲ್ ನಮೋಶಿ

ಕಲಬುರಗಿ, ನ.21: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ರೂ.5 ಕೋಟಿಗಿಂತಲೂ ಹೆಚ್ಚಿನ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಅಳವಡಿಸುವ ಮೂಲಕ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ ಎಂದು ಎಚ್.ಕೆ.ಇ ಅಧ್ಯಕ್ಷ ಶಶಿಲ್ ಜಿ.ನಮೋಶಿ ಹೇಳಿದರು.
ಇಲ್ಲಿನ ಬಸವೇಶ್ವರ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ ಆರಂಭವಾಗಿದೆ. ಗುಣಮಟ್ಟದ ಚಿಕಿತ್ಸೆ ದೊರಕುತ್ತಿದೆ ಎಂಬ ಕಾರಣಕ್ಕೆ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಯ 4ನೇ ಮಹಡಿಯಲ್ಲಿ ಇನ್ನೂ 40 ಸಾವಿರ ಚದರ ಮೀಟರ್ ಕಟ್ಟಡದಲ್ಲಿ ತುರ್ತು ಚಿಕಿತ್ಸಾ ಘಟಕ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಬಸವೇಶ್ವರ ಆಸ್ಪತ್ರೆಯು ಸಾರ್ವಜನಿಕರಿಗೆ ನೂರಕ್ಕೆ 95 ರಷ್ಟು ಉಚಿತ ಆರೋಗ್ಯ ಸೇವೆ ಒದಗಿಸುತ್ತಿದೆ. ಎಚ್.ಕೆ.ಇ ಆಡಳಿತ ಮಂಡಳಿಗೆ ಬಸವೇಶ್ವರ ಆಸ್ಪತ್ರೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸುವ ಮೂಲಕ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಚಿಕಿತ್ಸೆ ಲಭಿಸುವಂತೆ ಅಗತ್ಯ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಅತ್ಯಾಧುನಿಕ ಆಪರೇಷನ್ ಟೇಬಲ್‍ಗಳು, ಅತ್ಯಾಧುನಿಕ ಎಲೆಕ್ಟ್ರೋಸರ್ಜಿಕಲ್ ಜೆನರೇಟರ್‍ಗಳು, ಆಪರೇಷನ್ ಥಿಯೇಟರ್ ದೀಪಗಳು, ಮಿನಿಮಲಿ ಇಂಡ್ಯುಸಿವ್ ಮಾಡ್ಯುಲರ್ ಆಪರೇಷನ್ ಥಿಯೇಟರ್ ವರ್ಕ್‍ಸ್ಟೇಶನ್, ಮಲ್ಟಿಪ್ಯಾರಾ ಮಾನಿಟರ್‍ಗಳು, ತುರ್ತು ವರ್ಕ್‍ಸ್ಟೇಷನ್, ಇಅಉ ಮತ್ತು ಎ.ಬಿ.ಜಿ ಯಂತ್ರಗಳು, ವೆಂಟಿಲೇಟರ್‍ಗಳು, ಸಿರಿಂಜ್ ಪಂಪ್‍ಗಳು, ಅಲ್ಟ್ರಾಸೌಂಡ್ ಯಂತ್ರಗಳು ಮತ್ತು ಅತ್ಯಾಧುನಿಕ ಸ್ಟೆರೈಲೈಸೇಷನ್ ಉಪಕರಣಗಳನ್ನು ಇತ್ತೀಚೆಗೆ ಅಳವಡಿಸಲಾಗಿದೆ ಇವುಗಳ ಜೊತೆಗೆ, ದೃಷ್ಟಿ ಪರೀಕ್ಷಾ ಸಾಧನಗಳು, ಪ್ರಯೋಗಾಲಯ ಸೆಂಟ್ರಿಫ್ಯೂಜ್ ಮತ್ತು ಇಂಕ್ಯುಬೇಟರ್‍ಗಳು, ಡೀಪ್ ಫ್ರೀಝರ್, ಲ್ಯಾಮಿನಾರ್ ಏರ್‍ಫೆÇ್ಲೀ, ಮೈಕ್ರೋಸ್ಕೋಪ್, ಪೆÇೀರ್ಟಬಲ್ ಎಕ್ಸ್-ರೇ ಯಂತ್ರ, ರೇಡಿಯೋಫ್ರಿಕ್ವೆನ್ಸಿ ಯೂನಿಟ್, ರಕ್ತನಿಧಿ ಸಾಧನಗಳು ಹಾಗೂ ಸೆಂಟ್ರಲ್ ಮಾನಿಟರಿಂಗ್ ವ್ಯವಸ್ಥೆ ಮೂಲಕ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ನಮೋಶಿ ವಿವರಿಸಿದರು.
ಅತ್ಯಾಧುನಿಕ ವೈದ್ಯಕೀಯ ಪರಿಕರಗಳ ಕಾರಣಕ್ಕಾಗಿ ಆಸ್ಪತ್ರೆಯ ಶಸ್ತ್ರಚಿಕಿತ್ಸೆ, ಪರೀಕ್ಷಾ ಮತ್ತು ಕ್ರಿಟಿಕಲ್ ಕೇರ್ ಸಾಮಥ್ರ್ಯ ಹೆಚ್ಚಾಗಿದೆ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.
ಬಸವೇಶ್ವರ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ಸುಮಾರು ರೂ.50 ಲಕ್ಷ ಗಳನ್ನು ವಿನಿಯೋಗಿಸಲಾಗುತ್ತಿದೆ. ತಮ್ಮ ನೇತೃತ್ವದ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಎಂ.ಆರ್.ಎಂ.ಸಿಯಲ್ಲಿ 50 ಎಂ. ಬಿ.ಬಿ.ಎಸ್ ಸೀಟುಗಳನ್ನು ಹೆಚ್ಚಿಸಲಾಗಿದೆ. 100 ರಿಂದ 200 ನಸಿರ್ಂಗ್ ಸೀಟುಗಳನ್ನು ಹೆಚ್ಚಿಸಲಾಗಿದೆ. ಈಗಾಗಲೇ ಬಸವೇಶ್ವರ ಆಸ್ಪತ್ರೆಯಲ್ಲಿ 150 ನುರಿತ ನಸಿರ್ಂಗ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ನಸಿರ್ಂಗ್ ಸಿಬ್ಬಂದಿಯನ್ನು ತೆಗೆದುಕೊಳ್ಳುವ ಕೆಲಸ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ , ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ ಕೈಲಾಸ ಪಾಟೀಲ್, ಆಸ್ಪತ್ರೆಯ ಸಂಚಾಲಕ ಡಾ. ಕಿರಣ ದೇಶಮುಖ, ವೈದ್ಯಕೀಯ ಕಾಲೇಜಿನ ಸಂಚಾಲಕ ಡಾ. ಶರಣಬಸಪ್ಪ ಹರವಾಳ, ಆಡಳಿತ ಮಂಡಳಿ ಸದಸ್ಯರಾದ ಡಾ ನಾಗೇಂದ್ರ ಮಂಠಾಳೆ, ಡಾ ಅನಿಲಕುಮಾರ ಪಟ್ಟಣ, ನಾಗಣ್ಣ ಘಂಟಿ, ನಿಶಾಂತ್ ಎಲಿ, ಡಾ ಗುರುಲಿಂಗಪ್ಪ ಪಾಟೀಲ್, ಆಡಳಿತ ಮಂಡಳಿ ಸದಸ್ಯರು ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ದ ಡಾ ಮಲ್ಲಿಕಾರ್ಜುನ ತೆಗನೂರ, ಡೀನ್ ಡಾ ಶರಣಗೌಡ ಪಾಟೀಲ್, ಉಪ ಡೀನ್ ಡಾ ವಿಜಯಕುಮಾರ್ ಕಪ್ಪಿಕೇರಿ, ಡಾ ಎಂ. ಆರ್. ಪೂಜಾರಿ, ಡಾ ಸೋಹೈಲ್ ಉಪಸ್ಥಿತರಿದ್ದರು.


ಹೊಸ ಕ್ಯಾತಲ್ಯಾಬ್ ಶೀಘ್ರ
ಮುಂದಿನ ಏಳೆಂಟು ತಿಂಗಳಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ ಹೊಸ ಕ್ಯಾತಲಾಬ್ ಕಾರ್ಯಾರಂಭ ಮಾಡಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಎಚ್.ಕೆ.ಇ ಅಧ್ಯಕ್ಷ ಶಶಿಲ್ ನಮೋಶಿ ತಿಳಿಸಿದರು.