ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗೆ ಹೈಟೆಕ್ ಸ್ವರ್ಶ

ಆನೇಕಲ್.ಜು೬:ಖಾಸಗಿ ಶಾಲೆಗಳಲ್ಲಿ ಸಿಗುವಂತಹ ಎಲ್ಲಾ ರೀತಿಯಾದ ಸೌಲಭ್ಯಗಳು ಸರ್ಕಾರಿ ಶಾಲೆಯ ಮಕ್ಕಳಿಗೂ ಸಿಗಬೇಕು ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಮತ್ತು ಮಕ್ಕಳ ದಾಖಲಾತಿ ಪ್ರಮಾಣವನ್ನು ಹೆಚ್ಚಾಗಬೇಕು ಎಂಬುವ ಉದ್ದೇಶದಿಂದ ನೆರಳೂರು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ನೆರಳೂರು ಗ್ರಾಮಸ್ಥರು ಒಟ್ಟಿಗೆ ಸೇರಿ ಎನ್.ಜಿ.ಓ ಸಂಘ – ಸಂಸ್ಥೆಗಳ ಮೂಲಕ ನೆರಳೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಕನ್ನಡ ಮತ್ತು ಆಂಗ್ಲ ಪ್ರಾಥಮಿಕ ಪಾಠ ಶಾಲೆಗೆ ಹೈಟೆಕ್ ಸ್ವರ್ಶ ನೀಡಿದ್ದಾರೆ ಎಂದರೆ ತಪ್ಪಾಗಲಾರದು ಹೌದು.


ಈಗಾಗಲೇ ಎನ್.ಜಿ.ಓ. ಸಂಘ ಸಂಸ್ಥೆಗಳ ಮೂಲಕ ಮತ್ತು ನೆರಳೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನೆರಳೂರು ಸರ್ಕಾರಿ ಹಿರಿಯ ಕನ್ನಡ ಮತ್ತು ಆಂಗ್ಲ ಪ್ರಾಥಮಿಕ ಪಾಠ ಶಾಲೆಗೆ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ ಜೊತೆಗೆ ಕಂಪ್ಲೂಟರ್ ಲ್ಯಾಬ್. ವಿಜ್ಞಾನಕ್ಕೆ ಸಂಬಂದಿಸಿದ ಲ್ಯಾಬ್. ಕ್ರೀಡಾಂಗಣ ಸೇರಿದಂತೆ ಮಕ್ಕಳ ಕಲಿಕೆಗೆ ಬೇಕಾದ ಎಲ್ಲಾ ರೀತಿಯಾದ ವ್ಯವಸ್ಥೆಯನ್ನು ಮಾಡಿಕೊಡಲಾಗಿದ್ದು ಈ ಹಿನ್ನಲೆಯಲ್ಲಿ ಸುಮಾರು ೩೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ.


ಇಂದು ಕೂಡ ರಿಲ್ಯಾಂಟೋ ಗ್ಲೋಬಲ್ ಪ್ರವೇಟ್ ಇಂಡಿಯಾ ಲಿಮಿಟೆಡ್ ವತಿಯಿಂದ ಸುಮಾರು ೧೫ ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ನೂತನ ಗಣಕ ಯಂತ್ರದ ಕೊಠಡಿಯನ್ನು ಕಟ್ಟಿಸಿಕೊಟ್ಟಿದ್ದು ಇಂದು ನೂತನ ಗಣಕ ಯಂತ್ರದ ಕೊಠಡಿಗೆ ಗಣ್ಯರು ಮತ್ತು ಗ್ರಾಮಸ್ಥರು ಚಾಲನೆ ನೀಡಿ ಶುಭ ಹಾರೈಸಿದರು.


ನೆರಳೂರು ಸರ್ಕಾರಿ ಹಿರಿಯ ಕನ್ನಡ ಮತ್ತು ಆಂಗ್ಲ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಜೈ ಶ್ರೀರಾಮ್ ಕನ್ಸ್ಟ್ರಕ್ಷನ್ಸ್ ವತಿಯಿಂದ ಸ್ಕೂಲ್ ಬ್ಯಾಗ್ ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.


ರಿಲ್ಯಾಂಟೋ ಗ್ಲೋಬಲ್ ಪ್ರವೇಟ್ ಇಂಡಿಯಾ ಲಿಮಿಟೆಡ್ ನ ವಿನ್ ಸೆಂಟ್ . ಯಶವಂತ್. ರಾಜನ್, ಕ್ಷೇತ್ರ ಶಿಕ್ಷಣಾದಿಕಾರಿ ವೆಂಕಟೇಶ್. ನೆರಳೂರು ಗ್ರಾಮ ಪಂಚಾಯಿತಿ ಉಪಾದ್ಯಕ್ಷರಾದ ರತ್ನಮ್ಮ. ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಬಾಗ್ಯಮ್ಮ. ಮಂಜುಳ. ಭವ್ಯ. ಮಲ್ಲಿ ಕಾರ್ಜುನ. ನಂದ ಲೋಕೇಶ್. ಮುಖಂಡರಾದ ನೆರಳೂರು ಸತೀಶ್. ಶಶಿಕುಮಾರ್. ನೆರಳೂರು ರಂಜಿತ್. ಹರೀಶ್. ಗೌರಿ ಕಾಂತೇಶ್, ಎನ್.ಎಸ್ ಪ್ರಭು ಮತ್ತು ನೆರಳೂರು ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕರು. ವಿದ್ಯಾರ್ಥಿಗಳು ಬಾಗವಹಿಸಿದ್ದರು.