ಸೈಬರ್ ಅಪರಾಧ ತಡೆಯಲು ಸಹಕರಿಸಿ: ಸಿ.ಪಿ.ಐ ರಮೇಶ ಅವಜಿ

ವಿಜಯಪುರ, ಮೇ. 20: ನಗರದ ಎ.ಎಸ್ ಪಾಟೀಲ ವಾಣಿಜ್ಯ ಮಹಾವಿದ್ಯಾಲಯ ವತಿಯಿಂದ ಸಿದ್ದಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಪ್ರಯುಕ್ತ ಜಿಲ್ಲಾ ಪೆÇಲೀಸ್ ಇಲಾಖೆಯ ಸಹಯೋಗದೊಂದಿಗೆ ಶಿಬಿರಾರ್ಥಿಗಳಿಗೆ ‘ಮಾದಕದ್ರವ್ಯ ಪದಾರ್ಥಗಳ ದುರ್ಬಳಕೆ ಮತ್ತು ಸೈಬರ್ ಅಪರಾಧ ಕಾನೂನು’ ವಿಷಯದ ಬಗ್ಗೆ ಚರ್ಚೆ ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಜಯಪುರ ಗ್ರಾಮೀಣ ವೃತ್ತ ಸಿ.ಪಿ.ಐ ರಮೇಶ್ ಅವಜಿ ಮಾತನಾಡಿ, ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೆÇಲೀಸ್ ಇಲಾಖೆ ತೆಗೆದುಕೊಂಡ ಕಾನೂನು ಕ್ರಮಗಳ ಕುರಿತು ತಮ್ಮ ಅನುಭವ ಹಂಚಿಕೊಂಡರು. ಮಾದಕ ದ್ರವ್ಯಗಳ ದುರ್ಬಳಕೆ ಮತ್ತು ಅದರ ದುಷ್ಟಪರಿಣಾಮಗಳಿಗೆ ಸಂಬಂಧಿಸಿದ ಅಪರಾಧಗಳಿಗೆ ಭಾರತೀಯ ದಂಡ ಸಂಹಿತೆಯ ಬೇರೆ ಬೇರೆ ಸೆಕ್ಷನ್‍ಗಳು ಅನ್ವಯಿಸುತ್ತವೆ ಎಂದರು.
ಮಾದಕ ವಸ್ತುವಿನ ದುರ್ಬಳಕೆ, ರ್ಯಾಗಿಂಗ್ ಮತ್ತು ಸೈಬರ್ ಅಪರಾಧಗಳ ಹಾನಿ ತಡೆಯುವಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಹತ್ತರ ಜವಾಬ್ದಾರಿ ವಹಿಸಬೇಕು. ಮಾದಕ ವಸ್ತುಗಳ ವ್ಯಸನದಿಂದ ವಿದ್ಯಾರ್ಥಿಗಳ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ಆಗುವ ದುಷ್ಪಪರಿಣಾಮಗಳ ಬಗ್ಗೆ ಅವರು ಜಾಗೃತಿ ಮೂಡಿಸಿದರು.
ಅರಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀರಂಗ ಅವರು, ಪ್ರಸ್ತುತ ದಿನಗಳಲ್ಲಿ ಮಾದಕ ವ್ಯಸನಗಳ ವಿರುದ್ಧ ಹೋರಾಡುವ ಮನೋಧೈರ್ಯ ಹೊಂದಿರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎನ್.ಎಸ್.ಎಸ್ ಸಂಯೋಜನಾಧಿಕಾರಿ ಪ್ರೊ. ಪ್ರದೀಪ ಕುಂಬಾರ, ಮಾದಕ ವಸ್ತುವಿನ ದುರ್ಬಳಕೆ, ಆ್ಯಂಟಿ ರ್ಯಾಗಿಂಗ್ ಮತ್ತು ಸೈಬರ್ ಕ್ರೈಮ್ ದುಷ್ಪಪರಿಣಾಮಗಳ ವಿರುದ್ಧ ವಿದ್ಯಾರ್ಥಿಗಳನ್ನು ಒಗ್ಗೂಡಿಸಲು ಒತ್ತಾಯಿಸಿದರು. ಸೌಮ್ಯ ಕುಲಕರ್ಣಿ ಪ್ರಾರ್ಥನಾ ಗೀತೆ ಹಾಡಿದರು, ಪ್ರೀತಿ ಮೇತ್ರಿ ನಿರೂಪಿಸಿದರು ಹಾಗೂ ವಾಸಂತಿ ವಂದಿಸಿದರು. ಶಶಾಂಕ್ ದೇಸಾಯಿ, ವಿವೇಕ ತಮ್ಮದಡ್ಡಿ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಮತ್ತು ಎನ್.ಎಸ್.ಎಸ್ ಶಿಬಿರಾರ್ಥಿಗಳಿದ್ದರು.