ಟೆಕ್ಸಾಸ್‌ನಲ್ಲಿ ಭಾರೀ ಮಳೆ-೨೪ ಮಂದಿ ಸಾವು

ಟೆಕ್ಸಾಸ್, ಜು.೫- ಅಮೇರಿಕಾದ ಟೆಕ್ಸಾಸ್‌ನಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ೨೪ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ೨೫ಕ್ಕೂ ಅಧಿಕ ಮಕ್ಕಳು ಕಾಣೆಯಾಗಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.
ಗ್ವಾಡಾಲುಪೆ ನದಿಯ ಉದ್ದಕ್ಕೂ ಪ್ರವಾಹ ಉಂಟಾಗಿದ್ದು ಹತ್ತಿರದ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಪ್ರವಾಹದಿಂದ ಸಾವಿರಾರು ಮಂದಿ ಸಮಸ್ಯೆಗೆ ಸಿಲುಕಿದ್ದಾರೆ. ಕಾಣೆಯಾದವರ ಹುಡುಕಾಟ ನಡೆದಿದೆ. ಇತ್ತೀಚೆಗೆ ನಡೆದ ಬಾರಿ ನೈಸರ್ಗಿಕ ವಿಕೋಪ ಇದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್, ರಕ್ಷಣಾ ಕಾರ್ಯ ಭರದಿಂದ ಸಾಗಿದೆ, ಕಾಣೆಯಾದವರ ಹುಡುಕಾಟ ನಡೆದಿದೆ. ಸಂಕಷ್ಠದಲ್ಲಿರುವ ಮಂದಿಯನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಈವರೆಗೆ ೨೪ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಮಕ್ಕಳೂ ಸೇರಿದ್ಧಾರೆ. ಕ್ಯಾಂಪ್ ಮಿಸ್ಟಿಕ್ ಪ್ರದೇಶದ ಬೇಸಿಗೆ ಶಿಬಿರದಲ್ಲಿದ್ದ ಸುಮಾರು ೨೩ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ
ಲೆಫ್ಟಿನೆಂಟ್ ಗವರ್ನರ್ ಡಾನ್ ಪ್ಯಾಟ್ರಿಕ್ ಪ್ರತಿಕ್ರಿಯೆ ನೀಡಿ ಟೆಕ್ಸಾಸ್ ಪ್ರವಾಹದ ನಂತರ ಲೆಕ್ಕಕ್ಕೆ ಸಿಗದ ಜನರ ಸಂಖ್ಯೆಯ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ. ಈ ಬಗ್ಗೆ ಅಂದಾಜು ಮಾಡುವ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ವಾರಾಂತ್ಯದ ರಜೆಯಲ್ಲಿ ಅನೇಕ ಮಂದಿ ಶಿಬಿರಾರ್ಥಿಗಳು ಬೇಸಿಗೆ ಶಿಬಿರದಲ್ಲಿ ಭಾಗಿಯಾಗಿದ್ದರು.ಅದರಲ್ಲಿ ಕನಿಷ್ಠ ೨೫ ಮಂದಿ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ಅವರಿಗೆ ಹುಡುಕಾಟ ನಡೆದಿದೆ ಎಂದು ತಿಳಿಸಿದ್ದಾರೆ
ಟೆಕ್ಸಾಸ್ ಸೇರಿದಂತೆ ಇನ್ನಿತರೆ ಭಾಗಗಳಲ್ಲಿ ಬಾರಿ ಪ್ರವಾಹದಿಂದ ಜನರು ಸಮಸ್ಯೆಗೆ ಸಿಲುಕುವಂತಾಗಿದೆ, ಸಂಕಷ್ಠದಲ್ಲಿ ಸಿಲುಕಿದ ಮಂದಿಯನ್ನು ರಕ್ಷಿಸುವ ಕೆಲಸ ಭರದಿಂದ ಸಾಗಿದೆ, ಬಾರಿ ಮಳೆ ಮತ್ತು ಪ್ರವಾಹದಿಂದ ಸಮಸ್ಯೆಗೆ ಸಿಲುಕಿದ ಮಂದಿಯನ್ನು ರಕ್ಷಣೆ ಮಾಡುವ ಕೆಲಸ ನಡೆದಿದೆ ಎಂದು ಹೇಳಿದ್ದಾರೆ.

  • ಟೆಕ್ಸಾಸ್‌ನಲ್ಲಿ ಬಾರಿ ಪ್ರವಾಹ ೨೪ಕ್ಕೂ ಅಧಿಕ ಮಂದಿ ಸಾವು
  • ೨೫ಕ್ಕೂ ಹೆಚ್ಚು ಮಕ್ಕಳು ನಾಪತ್ತೆ, ಪರಿಹಾರ ಕಾರ್ಯ ಚುರಕು
  • ಬಾರಿ ಮಳೆಯಿಂದ ಪ್ರವಾಹ, ಬಹುತೇಕ ಕಡೆ ಜಲಾವೃತ
  • ಬೇಸಿಗೆ ಶಿಬಿರದಲ್ಲಿ ಭಾಗಿಯಾಗಿದ್ದ ಹಲವರು ಕಾಣೆ, ಹುಡುಕಾಟ
  • ರಕ್ಷಣಾ ತಂಡಗಳಿಂದ ಮುಂದುವರಿಧ ಶೋಧ