
ಕಲಬುರಗಿ:ಮೇ.27:ಕಲಬುರಗಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಭಾರಿ ಮಳೆ/ ಪ್ರವಾಹ ಕುರಿತು ಜಿಲ್ಲಾ/ತಾಲೂಕು/ಹೋಬಳಿ/ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನೀಡಲಾದ ಈ ಕೆಳಕಂಡ ಮುನ್ನೇಚ್ಚರಿಕೆ ಕ್ರಮಕೈಗೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಬಿ. ಫೌಜಿಯಾ ತರನ್ನುಮ್ ಅವರು ಸೂಚಿಸಿದ್ದಾರೆ.
ಹವಾಮಾನ ಇಲಾಖೆಯ ವರದಿಯನ್ವಯ ದಿನಾಂಕ: 24-05-2025ರಂದು ನೈಋತ್ಯ ಮಾನ್ಸೂನ್ (ಮುಂಗಾರು ಹಂಗಾಮು) ಕೇರಳ ಪ್ರವೇಶಿಸಿದ್ದು, ಈ ವರ್ಷ ವಾಡಿಕೆಗಿಂತ 8 ದಿನಗಳ ಮುಂಚಿತವಾಗಿ ಕೇರಳ ಪ್ರವೇಶಿಸಿದೆ. ಜಿಲ್ಲೆಯಲ್ಲಿ ಭಾರಿ ಮಳೆ/ಪ್ರವಾಹ ಕುರಿತು ಮುಂಜಾಗೃತ ತೆಗೆದುಕೊಳ್ಳುವುದು ಅವಶ್ಯಕತೆಯಿದ್ದು, ಜಿಲ್ಲಾ/ ತಾಲೂಕು/ ಹೋಬಳಿ/ ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿ/ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿದ್ದು, ಪ್ರವಾಹ/ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನೇಚ್ಚರಿಕೆ ವಹಿಸಬೇಕು.
ಸಾರ್ವಜನಿಕರು ನದಿ, ಹಳ್ಳ, ಕೆರೆ ದಡದಲ್ಲಿ ಬಟ್ಟೆ ತೊಳೆಯಬಾರದು, ಈಜಾಡಬಾರದು, ಧನ/ಕರುಗಳನ್ನು ಮೇಯಿಸಬಾರದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸಬಾರದು ಹಾಗೂ ಇತರೆ ಚಟುವಟಿಕೆಗಳು ನಡೆಸದಂತೆ ಕ್ರಮವಹಿಸಬೇಕು. ನಿರಂತರ ಮಳೆಯಿಂದ ಅಪಾಯವಿರುವ ಮನೆ ಗೋಡೆ, ಶಾಲೆಗಳು ಹಾಗೂ ಇತರೆ ಕಟ್ಟಡಗಳ ಕುಸಿಯುವ ಸಾಧ್ಯತೆ ಇದ್ದು, ಇದರಿಂದ ಸಾವು ನೋವುಗಳು ಸಂಭವಿಸುವ ಸಂದರ್ಭವಿದ್ದು, ಆದ್ದರಿಂದ ಸಾರ್ವಜನಿಕರಿಗೆ ಸುರಕ್ಷತೆಯ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ.
ಭಾರಿ ಮಳೆ/ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರುವುದು/ಮೈಕ್ ಮೂಲಕ ಜಾಗೃತಿ ಮುಡಿಸಬೇಕು. ಭಾರಿ ಮಳೆ/ಪ್ರವಾಹದಿಂದ ಹಾನಿಯಾದ ಬಗ್ಗೆ ಪ್ರಾಥಮಿಕ ವರದಿಯನ್ನು ಪ್ರತಿ ದಿನ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಕಲಬುರಗಿ ಜಿಲ್ಲೆಯ ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿ/ಸಿಬ್ಬಂಧಿಗಳಿಗೆ ಪ್ರವಾಹ/ಭಾರಿ ಮಳೆಯಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನೇಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಇತರೆ ಸಮಸ್ಯೆ ಹಾಗೂ ತುರ್ತು ಪರಿಹಾರಕ್ಕಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಈ ಕೆಳಕಂಡಂತೆ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ಈ ಸಹಾಯವಾಣಿ ಕೇಂದ್ರದ ಸಂಖ್ಯೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಸಂಪರ್ಕಿಸಬೇಕು.
ಜಿಲ್ಲಾ ವಿಪತ್ತು ತುರ್ತು ನಿರ್ವಾಹಣಾ ಕೇಂದ್ರದ ದೂರವಾಣಿ ಸಂಖ್ಯೆ 08472-278677 ಅಥವಾ 1077 (ಕಲಬುರಗಿ ಜಿಲ್ಲಾಧಿಕಾರಿಗಳ ಕಛೇರಿ) ಹಾಗೂ ಕಲಬುರಗಿ ಮಹಾನಗರಪಾಲಿಕೆ ಸಹಾಯವಾಣಿ ಸಂಖ್ಯೆ 08472-241364, 6363544601 ಗಳಿಗೆ ಸಂಪರ್ಕಿಸಬೇಕು.
ತಾಲೂಕುವಾರು ಸ್ಥಾಪಿಸಲಾದ ಸಹಾಯವಾಣಿ ಸಂಖ್ಯೆಯ ವಿವರ ಇಂತಿದೆ. ಆಳಂದ ತಹಸೀಲ್ದಾರರ ಕಾರ್ಯಾಲಯ ಸಹಾಯವಾಣಿ ಸಂಖ್ಯೆ-9448135593, ಅಫಜಲಪೂರ ತಹಸೀಲ್ದಾರರ ಕಚೇರಿ-7760208044, ಚಿತ್ತಾಪೂರ ತಹಸೀಲ್ದಾರರ ಕಚೇರಿ-9448652111, ಚಿಂಚೋಳಿ ತಹಸೀಲ್ದಾರರ ಕಚೇರಿ-9591499501, ಕಾಳಗಿ ತಹಸೀಲ್ದಾರರ ಕಚೇರಿ-9980034461 ಹಾಗೂ ಕಲಬುರಗಿ ತಹಸೀಲ್ದಾರರ ಕಚೇರಿ-9731631298.
ಕಮಲಾಪೂರ ತಹಸೀಲ್ದಾರರ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ-9986324648, ಜೇವರ್ಗಿ ತಹಸೀಲ್ದಾರರ ಕಚೇರಿ-7019270898, ಯಡ್ರಾಮಿ ತಹಸೀಲ್ದಾರರ ಕಚೇರಿ-9538559509, ಶಾಹಾಬಾದ ತಹಸೀಲ್ದಾರರ ಕಚೇರಿ-8152093789 ಹಾಗೂ ಸೇಡಂ ತಹಸೀಲ್ದಾರರ ಕಚೇರಿ-6361376048 ಗಳಿಗೆ ಸಂಪರ್ಕಿಸಬೇಕು.