ಭಾರೀ ಮಳೆ: ವಿದ್ಯುತ್ಸ್ಪ ರ್ಶಕ್ಕೆ ಐವರ ಬಲಿ

ಕೋಲ್ಕತ್ತಾ,ಸೆ.೨೩– ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಗೂ ಮುನ್ನ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣ ಜವಾವೃತವಾಗಿದ್ದು ವಿದ್ಯುತ್ ಸ್ಪರ್ಶದಿಂದ ೫ ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಧ್ಯರಾತ್ರಿಯ ನಂತರ ಪ್ರಾರಂಭವಾದ ಮಳೆಯಿಂದ ರಸ್ತೆಗಳು ನೀರಿನಲ್ಲಿ ಮುಳುಗಿ ನಗರದಾದ್ಯಂತ ಅನೇಕ ಮನೆಗಳು ಮತ್ತು ವಸತಿ ಸಂಕೀರ್ಣಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿ ಇಡೀ ಜನರು ಜಾಗರಣೆ ಮಾಡುವಂತಾಗಿದೆ, ಜೊತೆಗೆ ಹಲವಾರು ಸ್ಥಳಗಳಲ್ಲಿ ಮೊಣಕಾಲು ಆಳದ ನೀರಿನಿಂದ ಮುಳುಗಿ ಸಂಚಾರ ಅಸ್ತವ್ಯಸ್ತವಾಗಿ ಜನರು ಪರದಾಡುವಂತಾಗಿದೆ.

ದುರ್ಗಾ ಪೂಜೆ ಆಚರಣೆಗೆ ಕೆಲವು ದಿನಗಳ ಮೊದಲು ಸುರಿದ ಮಳೆಯ ತೀವ್ರ ಪರಿಣಾಮ ಎದುರಿಸುವಂತಾಗಿದೆ. ಮಳೆಯಿಂದ ವಿದ್ಯುತ್ ಸ್ಪರ್ಶಿಸಿ ಐದು ಮಂದಿಸಾವನ್ನಪ್ಪಿದ್ಧಾರೆ. ನಗರದ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿವೆ, ರಸ್ತೆಗಳು ನೀರಿನಲ್ಲಿ ಮುಳುಗಿ ಅನೇಕ ಮನೆಗಳು ಮತ್ತು ವಸತಿ ಸಂಕೀರ್ಣಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ

ಭಾರತ ಹವಾಮಾನ ಇಲಾಖೆ ಪ್ರಕಾರ, ಅಲಿಪೋ?\ರ್ ನಲ್ಲಿ ಬೆಳಿಗ್ಗೆ ೫.೩೦ ರವರೆಗೆ ೨೩೯ ಮಿಮೀ,ಕೋಲ್ಕತ್ತಾದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಮಳೆಯ ತೀವ್ರತೆ ಅತ್ಯಧಿಕವಾಗಿತ್ತು. ಕೋಲ್ಕತ್ತಾ ಮುನ್ಸಿಪಲ್ ಕಾಪೆರ್ರೇಷನ್ (ಕೆಲವೇ ಗಂಟೆಗಳಲ್ಲಿ ಗರಿಯಾ ಕಾಮದಹರಿಯಲ್ಲಿ ೩೩೨ ಮಿಮೀ, ಜೋಧ್‌ಪುರ ಪಾರ್ಕ್‌ನಲ್ಲಿ ೨೮೫ ಮಿಮೀ, ಕಾಳಿಘಾಟ್‌ನಲ್ಲಿ ೨೮೦.೨ ಮಿಮೀ, ಟೋಪ್ಸಿಯಾದಲ್ಲಿ ೨೭೫ ಮಿಮೀ, ಬ್ಯಾಲಿಗಂಗೆಯಲ್ಲಿ ೨೬೪ ಮಿಮೀ ಮತ್ತು ಚೆಟ್ಲಾದಲ್ಲಿ ೨೬೨ ಮಿಮೀ ಮಳೆಯಾಗಿದೆ ಎಂದು ವರದಿ ಮಾಡಿದೆ.

ಮೋಮಿನ್‌ಪುರ ೨೩೪ ಮಿಮೀ, ಚಿಂಗ್ರಿಹತ ೨೩೭ ಮಿಮೀ, ಪಾಮರ್ ಬಜಾರ್ ೨೧೭ ಮಿಮೀ, ಧಾಪ ೨೧೨ ಮಿಮೀ, ಸಿಪಿಟಿ ಕಾಲುವೆ ೨೦೯.೪ ಮಿಮೀ, ಉಲ್ತಡಂಗ ೨೦೭ ಮಿಮೀ, ಕುಡ್ಘಾಟ್ ೨೦೩.೪ ಮಿಮೀ, ಪಗಲ್ಡಂಗ (ಟ್ಯಾಂಗ್ರಾ) ೨೦೧ ಮಿಮೀ, ಕುಲಿಯಾ (ಟ್ಯಾಂಗ್ರಾ) ೧೯೬ ಮಿಮೀ ಮತ್ತು ಥಂಥಾನಿಯಾ ೧೯೫ ಮಿಮೀ ಮಳೆಯಾಗಿದೆ.

ಜಲಾವೃತವಾದ ಹಿನ್ನೆಲೆಯಲ್ಲಿ ರೈಲ್ವೆ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದೆ ಧಾರಾಕಾರ ಮಳೆಯ ನಂತರ, ಹೌರಾ ನಿಲ್ದಾಣದ ಅಂಗಳ, ಸೀಲ್ಡಾ ದಕ್ಷಿಣ ನಿಲ್ದಾಣದ ಅಂಗಳ, ಚಿತ್ಪುರ ಉತ್ತರ ಕ್ಯಾಬಿನ್, ಹಲವಾರು ಕಾರ್ ಶೆಡ್‌ಗಳು ಮತ್ತು ಸೀಲ್ಡಾ ಯಾರ್ಡ್‌ನ ಅನೇಕ ಭಾಗಗಳಲ್ಲಿ ನೀರು ನಿಂತು ಪರದಾಡುವಂತಾಗಿದೆ.

ಹೌರಾ ಮತ್ತು ಸೀಲ್ಡಾ ವಿಭಾಗಗಳ ರೈಲ್ವೆ ಮಾರ್ಗಗಳಲ್ಲಿ ನೀರು ನಿಲ್ಲುವುದರಿಂದ ಅಧಿಕಾರಿಗಳು ಹಲವಾರು ಉಪನಗರ ರೈಲು ಸೇವೆಗಳನ್ನು ಸ್ಥಗಿತಗೊಳಿಸಲು ಮತ್ತು ಸ್ಥಗಿತಗೊಳಿಸಲಾಗಿದೆ.