Home ಜಿಲ್ಲೆ ಕುತ್ತಾಬಾದ್‌ನಲ್ಲಿ ಮಾಜಿ ಸೈನಿಕನಿಗೆ ಹೃದಯಸ್ಪರ್ಶಿ ಸನ್ಮಾನ

ಕುತ್ತಾಬಾದ್‌ನಲ್ಲಿ ಮಾಜಿ ಸೈನಿಕನಿಗೆ ಹೃದಯಸ್ಪರ್ಶಿ ಸನ್ಮಾನ

ಬೀದರ್: ಮೇ.೫:ಭಾರತೀಯ ಸೇನೆಯ ಸೇವೆಯಿಂದ ನಿವೃತ್ತರಾದ ತಾಲ್ಲೂಕಿನ ಕುತ್ತಾಬಾದ್ ಗ್ರಾಮದ ಶ್ರೀಕಾಂತ ಕಂಟೆಪ್ಪ ಬಶೆಟ್ಟಿ ಅವರನ್ನು ಗ್ರಾಮದಲ್ಲಿ ಭಾನುವಾರ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ಗ್ರಾಮಸ್ಥರು ಶ್ರೀಕಾಂತ ಅವರನ್ನು ಬೀದರ್‌ನಿಂದ ಅಲಂಕೃತ ತೆರೆದ ಜೀಪ್‌ನಲ್ಲಿ ಮೆರವಣಿಗೆಯಲ್ಲಿ ಗ್ರಾಮಕ್ಕೆ ಕರೆ ತಂದರು. ಪಟಾಕಿ, ಹೂ ಮಳೆ ಸುರಿಸಿ ಭವ್ಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಬಳಿಕ ಅಭಿನಂದನಾ ಸಮಾರಂಭದಲ್ಲಿ ಶಾಲು ಹೊದಿಸಿ, ಬೃಹತ್ ಹೂಮಾಲೆ ಹಾಕಿ ಸನ್ಮಾನಿಸಿದರು.
ದೇಶ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗದು. ಆ ಭಾಗ್ಯ ದೊರೆತದ್ದು ನನ್ನ ಸೌಭಾಗ್ಯ. ನಮ್ಮ ಪೂರ್ವಜರ ಪುಣ್ಯದ ಫಲ ಎಂದು ಸನ್ಮಾನ ಸ್ವೀಕರಿಸಿದ ಶ್ರೀಕಾಂತ ಬಶೆಟ್ಟಿ ಹೇಳಿದರು.
ಭಾರತೀಯ ಸೇನೆಯಲ್ಲಿ ೨೪ ವರ್ಷ ಸಲ್ಲಿಸಿದ ಸೇವೆ ನನಗೆ ತೃಪ್ತಿ ತಂದಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿದ ಹೆಮ್ಮೆ ಹಾಗೂ ಅಭಿಮಾನ ನನಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ದೇಶ ಪ್ರೇಮ, ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶದ ಸುರಕ್ಷತೆ ಹಾಗೂ ಅಖಂಡತೆ ಕಾಪಾಡಲು ಸದಾ ಕಂಕಣ ಬದ್ಧರಾಗಿರಬೇಕು ಎಂದು ಹೇಳಿದರು.
ಯುವಕರು ಸೇನೆಯಲ್ಲಿ ಸೇವೆ ಮಾಡಲು ಮುಂದೆ ಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾಕರ ಬಶೆಟ್ಟಿ ಮಾತನಾಡಿ, ಶ್ರೀಕಾಂತ ಬಶೆಟ್ಟಿ ಅವರ ದೇಶಪ್ರೇಮ ಮಾದರಿಯಾಗಿದೆ ಎಂದು ತಿಳಿಸಿದರು.
ಪ್ರತಿಮಾ ಶ್ರೀಕಾಂತ ಬಶೆಟ್ಟಿ, ಓಂಕಾರ ಬಶೆಟ್ಟಿ, ದರ್ಶನ್ ಬಶೆಟ್ಟಿ, ಸಾಕ್ಷಿ ಬಶೆಟ್ಟಿ, ರೇಖಾ ಸಂತೋಷ್ ಬಶೆಟ್ಟಿ, ಮಾಜಿ ಸೈನಿಕ ಝರೆಪ್ಪ ಹವಾಲ್ದಾರ್, ಮುಖಂಡರಾದ ಮಲ್ಲಯ್ಯ ಸ್ವಾಮಿ, ಶಿವಕುಮಾರ ತುಂಗಾ, ಜಗನ್ನಾಥ ವಾಲ್ದೊಡ್ಡಿ, ಅಶೋಕ ತಮಗೊಂಡ, ಶಾದುಲ್ ನನ್ನುಮಿಯ, ಡಾ. ರಾಜಕುಮಾರ ರಾಂಪುರೆ, ಚಂದ್ರಕಾAತ ಶಿವಗೊಂಡ, ಶಿವಕುಮಾರ ಶಿವಗೊಂಡ, ಶಂಕರ ದಳಪತಿ, ಮಲ್ಲಿಕಾರ್ಜುನ ಧೂಳಾ, ರಾಜಕುಮಾರ ಐನಾಪುರೆ, ಶಿವಕುಮಾರ ಮಾಲಿಪಾಟೀಲ, ಜಗನ್ನಾಥ ಶಿವಗೊಂಡ, ದಿನೇಶ್ ಪಾಟೀಲ, ರಾಜಕುಮಾರ ಬಶೆಟ್ಟಿ, ಹಣಮಂತ ಬೆಳ್ಳೂರೆ, ನಾಗಶೆಟ್ಟಿ ಯಾಕತಪುರ, ಜಗನ್ನಾಥ ಸಲಬಾ, ಹಾವಪ್ಪ ಪಾಟೀಲ, ಭೀಮರಾವ್ ಪರೀಟ್, ಬಸಮ್ಮ, ಬಸವರಾಜ, ಶ್ರೀದೇವಿ ಓಂಕಾರ, ಶಿವಕುಮಾರ ಕರಬಸಪ್ಪ ಮತ್ತಿತರರು ಇದ್ದರು.
ವೀರೇಶ ರಾಜಗೀರೆ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಸಂತೋಷ್ ಬಶೆಟ್ಟಿ ವಂದಿಸಿದರು.
ಕುತ್ತಾಬಾದ್, ಯದಲಾಪುರ, ಅಯಾಸಪುರ, ಟಿ. ಮರ್ಜಾಪುರ ಸೇರಿದಂತೆ ವಿವಿಧೆಡೆಯ ಜನ ಪಾಲ್ಗೊಂಡಿದ್ದರು.