
ವಿಜಯಪುರ,ಜು.4 : ವಿಜಯಪುರ ಪೊಲೀಸ್ ಉಪವಿಭಾಗಾಧಿಕಾರಿ ಬಸವರಾಜ ಯಲಿಗಾರ ಅವರು ತಮ್ಮ ವೃತ್ತಿಜೀವನದ ಜೊತೆಗೆ ಸಾಹಿತ್ಯಿಕ ಅಭಿರುಚಿಯನ್ನು ಬೆಳೆಸಿಕೊಂಡಿರುವುದು ಶ್ಲ್ಯಾಘನೀಯವೆಂದು ವಾಹನ ಚಾಲಕ ಸಂಘದ ಅಧ್ಯಕ್ಷÀ ಎಸ್. ಎಲ್ ಖಜಾಪೂರ ಅವರು ಹೇಳಿದರು.
ನಗರದ ಸೊಲ್ಲಾಪುರ ರಸ್ತೆ ಹತ್ತಿರ ಇರುವ ಪೊಲೀಸ್ ಉಪ ವಿಭಾಗಾಧಿಕಾರಿ ಕಛೇರಿಗೆ ತೆರಳಿ “ನನ್ನೊಳಗಿನ ನಾನು ನೀನು” ಕೃತಿ ರಚಿಸಿ ಲೋಕಾರ್ಪಣೆಗೊಳಿಸಿದ ಹಿನ್ನೆಲೆ ಅವರನ್ನು ಜಿಲ್ಲಾ ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಅಥವಾ ಸಾಹಿತ್ಯ ರಚಿಸುವ ವ್ಯಕ್ತಿ. ಅವರು ತಮ್ಮ ವೃತ್ತಿಜೀವನದ ಜೊತೆಗೆ ಸಾಹಿತ್ಯಿಕ ಅಭಿರುಚಿಯನ್ನು ಬೆಳೆಸಿಕೊಂಡಿರುವ ಕಾನೂನು ಪಾಲನೆ ಮಾಡುವ ವಿಜಯಪುರ ಹೆಮ್ಮೆಯ ಯಲಿಗಾರ ಅವರು ನಮ್ಮಂತವರಿಗೆ ಸ್ಪೂರ್ತಿ ಎಂದರು.
ಜಿಲ್ಲಾ ವಾಹನ ಚಾಲಕರ ಸಂಘದ ಅಧ್ಯಕ್ಷ ಎಸ್.ಎಲ್. ಖಜಾಪುರ, ರಾಜಕುಮಾರ, ಪ್ರಕಾಶ ಕೌಲಗಿ, ಮನೊಜ, ಆರೀಫ್ ಇನಾಮದಾರ ಮತ್ತು ಶುಶ್ರೂμÁ ಅಧಿಕಾರಿಗಳಾದ ಮಹ್ಮದ ಆರೀಫ್ ಹವಾಲ್ದಾರ, ವಿಠ್ಠಲ ಕಾರಜೋಳ ಮತ್ತಿತರರು ಉಪಸ್ಥಿತರಿದ್ದರು.