ಯೋಗದಿಂದ ಆರೋಗ್ಯ ಜ್ಞಾನದಿಂದ ಮನಶುದ್ಧಿ:ಪ್ರತಿಮಾ ಬಹೆನಜಿ

ಬೀದರ: ಜೂ.12:ಯೋಗದಿಂದ ಆರೋಗ್ಯ ಸುಧಾರಣೆ ಹಾಗೂ ಜ್ಞಣದಿಂದ ಮನಸ್ಸು ಶುದ್ಧಿಯಾಗುತ್ತದೆ ಎಂದು ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ರಾಜಯೋಗ ಕೇಂದ್ರ ಪಾವನದಾಮದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೆನಜಿ ತಿಳಿಸಿದ್ದರು.
ನಗರದ ಜನವಾಡಾ ರಸ್ತೆಯಲ್ಲಿರುವ ಬ್ರಹ್ಮಾಕುಮಾರಿ ಕೇಂದ್ರ ಪಾವಧಮದಲ್ಲಿ ಗುರುವಾರ ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ಗೋಪಿಚಂದ ತಾಂದಳೆಯವರ ಸುಪತ್ರಿ ಕು. ದಿವ್ಯಮಣಿ ತಾಂದಳೆಯವರಿಗೆ ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಮಾತನಾಡಿದವರು.
ಪ್ರತಭೆ ಕುಮಾರಿ ದಿವ್ಯಮಣಿ ಬಗ್ಗೆ ಮಾತನಾಡಿದ ಬಹೆನಜಿ ಅವರು ಇಂದು ಯೋಗಿಕ ಕೃಷಿ ಬಗ್ಗೆ ಎಲ್ಲರೂ ಆಸಕ್ತಿ ತೋರಬೇಕಿದೆ, ವಿಷಕಾರಿ ಆಹಾರ ಪದ್ದತಿಯಿಂದ ವಿಮೂಖರಾಗಲು ಯೋಗಿಕ ಕೃಷಿ ಪದ್ದತಿ ಅಗತ್ಯ ಈ ನಿಟ್ಟಿ£ಲ್ಲಿ ಕುಮಾರಿ ದಿವ್ಯಮಣಿ ಕೃಷಿ ಪದವಿ ಆಯ್ಕೆ ಮಾಡಿರುವುದು ಸಂತಸದ ಸಂಗತಿ ಎಂದು ಪ್ರತಿಮಾ ಬಹೆನಜಿ ತಿಳಿಸಿದ್ದರು.
ಸನ್ಮಾನ ಸ್ವಿಕರಿಸಿದ ಕು. ದಿವ್ಯಮಣಿ ಈ ಸಂದರ್ಭದಲ್ಲಿ ಮಾತನಾಡಿ ಇಂದು ಆಹಾರ, ನೀರು ಹಾಗೂ ಸೇವಿಸುವ ವಾಯು ವಿಷಪೂರಿತವಾಗಿದೆ ಸಾವಯವ ಹಾಗೂ ಯೋಗಿಕ ಕೃಷಿ ಪದ್ಧತಿ ಅನುಸರಿವದರಿಂದ ಬೇಳೆ ಫಲಪ್ರದವಾವುದರ ಜೊತೆಗೆ ವಿನಾಶದ ಅಂಚಿನಲ್ಲಿರುವ ಮನುಷ್ಯನ ಆರೋಗ್ಯ ಹಾಗೂ ಮನಸ್ಸು ಬಲಿಷ್ಠವಾಗಲಿದೆ ಇದರಿಂದ ಪರಿಸರದ ಮೇಲೂ ಘನಾನ್ಮಕ ಪರಿಣಾಮ ಬೀರಲಿದೆ, ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಉಪಕರಣಗಳು ಮತ್ತು ಜೈವಿಕ ಶಕ್ತಿಯನ್ನು ಬಳಸುವುದರ ಜೊತೆಗೆ, ಕೃಷಿ ಮತ್ತು ರೈತರ ಜೀವನವನ್ನು ಸುಧಾರಿಸಲು ರಾಜಯೋಗ ಧ್ಯಾನದ ಮೂಲಕ ಮಣ್ಣು, ಬೀಜ ಮತ್ತು ಸಸ್ಯಗಳಿಗೆ ಶಾಂತಿ, ಶುದ್ಧತೆ, ಪ್ರೀತಿ ಮತ್ತು ಕಾಳಜಿಯ ಸಕಾರಾತ್ಮಕ ಕಂಪನಗಳನ್ನು ಒದಗಿಸುವ ಧ್ಯಾನ ತಂತ್ರವನ್ನು ಬಳಸಿಕೊಳ್ಳುವ ಅವಶ್ಯಕತೆಯಿದೆ ಎಂದು ಮಾತನಾಡಿದಳು.

ಕೇಂದ್ರದ ಹೀರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಅಕ್ಕನವರು ಸ್ವಾಗತಿಸಿ ಕಾರ್ಯಕ್ರಮ ನೀರೂಪಸಿದ್ದರು. ಕೇಂದ್ರದ ಎಲ್ಲಾ ಸಹೋದರ ಹಾಗೂ ಸಹೋದರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.