Home ಜಿಲ್ಲೆ ಕಲಬುರಗಿ ಕೆಬಿಎನ ವಿವಿ ವತಿಯಿಂದ ವೃದ್ಧಾಶ್ರಮ, ಖಾಜಾ ಬಜಾರದಲ್ಲಿ ಆರೋಗ್ಯ ತಪಾಸಣೆ

ಕೆಬಿಎನ ವಿವಿ ವತಿಯಿಂದ ವೃದ್ಧಾಶ್ರಮ, ಖಾಜಾ ಬಜಾರದಲ್ಲಿ ಆರೋಗ್ಯ ತಪಾಸಣೆ

ಕಲಬುರಗಿ : ಅಂತಾರಾಷ್ಟ್ರೀಯ ಹಿರಿಯರ ದಿನದ ಅಂಗವಾಗಿ ಗುರುವಾರ ಸ್ಥಳೀಯ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಮೆಡಿಕಲ ನಿಕಾಯದ ಕಮ್ಯುನಿಟಿ ಮೆಡಿಸಿನ್ ಹಾಗೂ ಜೆನೆರಲ್ ಮೆಡಿಸಿನ್ ವಿಭಾಗದ ವತಿಯಿಂದ ಮಹಾದೇವಿ ವ್ರದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದ ಎಲ್ಲ ವೃದ್ಧರಿಗೆ ಹಣ್ಣುಗಳನ್ನು ವಿತರಿಸಿ, ಬಿ ಪಿ, ಶುಗರ ಚೆಕ ಒಳಗೊಂಡಂತೆಆ ರೋಗ್ಯ್ ತಪಾಸಣೆ ಮಾಡಲಾಯಿತು. ಅಲ್ಲದೇ ಅವರೆಲ್ಲರಿಗೆ ಉಚಿತವಾಗಿ ಮಾತ್ರೆಗಳನ್ನು ಹಂಚಲಾಯಿತು.
ಇಂಟರ್ನ ಡಾ ಸಂಗಮೇಶ ಅವರಿಂದ ಸಾಮಾನ್ಯ ಆರೋಗ್ಯ ಕುರಿತು ಜಾಗ್ರತಿ ಉಪನ್ಯಾಸ ನಡೆಯಿತು. ಸುಮಾರು 39 ವೃದ್ದಾದಿಗಳಿಗೆ ತಪಾಸಣೆ ನಡೆಸಲಾಯಿತು.

ಖಾಜಾ ಬಜಾರ ಆರೋಗ್ಯ ಕೇಂದ್ರದಲ್ಲೂ ಕೂಡ ವೃದ್ಧರಿಗೆ ತಪಾಸಣೆ ನಡೆಯಿತು. ಅಲ್ಲದೇ ಖಾಜಾ ಬಜಾರ್,ದರ್ಗಾ ಏರಿಯಾ, ಗ್ಯಾರಹ ಸೀಡಿ, ಆಟೋ ನಿಲ್ದಾಣಗಳಲ್ಲಿ ಇದ್ದ ವೃದ್ಧರಿಗೆ ಅಲ್ಲಿಯೇ ಹೋಗಿ ತಪಾಸಣೆ ಮಾಡಲಾಯಿತು.
ವೃದ್ಧರಿಗೆ ಅವಶ್ಯಕವಿದ್ದಲ್ಲಿ ಮುಂದಿನ ಚಿಕೆತ್ಸೆಗಾಗಿ ಕೆಬಿಎನ್ ಆಸ್ಪತ್ರೆಗೆ ಆಹ್ವಾನಿಸಲಾಗಿದೆ.

ಈ ಶಿಬಿರದಿಂದ ಇಂದು ಸುಮಾರು 100 ಜನ ವೃದ್ಧರಿಗೆ ಚಿಕೆತ್ಸೆ ದೊರೆಯಿತು. ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ ಶೇಹನಾಜ ಮತ್ತು ಜೆನೆರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ ವಹೀದ ಸೇರಿದಂತೆ ಸುಮಾರು 15 ಜನರ ವೈದ್ಯರ ತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾದರು.