ಆರೋಗ್ಯ ತಪಾಸಣಾ ಶಿಬಿರ


ಹುಬ್ಬಳ್ಳಿ,ಜ.೧೭:ಸಂಜೀವಿನಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹೃದ್ರೋಗ ಚಿಕಿತ್ಸಾ ಕೇಂದ್ರ ಹಾಗೂ ಕೆಜಿಪಿ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕೆಜಿಪಿ ಫೌಂಡೇಶನ್ ಕುಟುಂಬ ಆರೋಗ್ಯ ಕಾರ್ಡ್ ಉಚಿತವಾಗಿ ವಿತರಿಸಲಾಗುವುದು ಎಂದು ಕೆಜಿಪಿ ಫೌಂಡೇಶನ್ ಅಧ್ಯಕ್ಷರಾದ ಶ್ರೀಗಂಧ ಶೇಟ್ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕುಟುಂಬಕ್ಕೆ ಆರೋಗ್ಯ ಕಾರ್ಡ್ ಗರಿಷ್ಠ ನಾಲ್ಕು ಸದಸ್ಯರಿಗೆ ಮಾನ್ಯವಾಗಿರಲಿದೆ.
ಉಚಿತ ಆರೋಗ್ಯ ಶಿಬಿರದಲ್ಲಿ ಬಿಪಿ ತಪಾಸಣೆ, ಶುಗರ್ ತಪಾಸಣೆ, ಹೃದಯ ತಪಾಸಣೆ, ಎಲುಬು ಮತ್ತು ಕೀಲುಗಳ ತಪಾಸಣೆ, ಕಣ್ಣಿನ ತಪಾಸಣೆ, ಸ್ತಿçÃರೋಗ ತಜ್ಞರು ಹೀಗೆ ಸೌಲಭ್ಯ ದೊರಕಲಿವೆ
ಕುಟುಂಬ ಆರೋಗ್ಯ ಕಾರ್ಡ್ ವಿಶೇಷವೆನೆಂದರೆ ಓಪಿಡಿ ಸೌಲಭ್ಯಗಳು, ಒಳ ರೋಗಿಗಳ ಸೌಲಭ್ಯಗಳು ಹಾಗೂ ರಕ್ತ ಪರೀಕ್ಷಾ ಶುಲ್ಕಗಳ ಮೇಲೆ ಶೇ ೨೦% ರಷ್ಟು ರಿಯಾಯಿತಿ ಇರಲಿದೆ. ಒಂದು ಕುಟುಂಬದಲ್ಲಿ ನಾಲ್ವರಿಗೆ ಮಾತ್ರ ಈ ಕಾರ್ಡ್ ಮಾನ್ಯವಾಗಿರುತ್ತದೆ ಎಂದರು.


ಜ. ೧೮ ರಂದು ನೇಕಾರನಗರದಲ್ಲಿ, ಜ. ೨೫ ರಂದು ಗೋಕುಲ್ ನಗರದಲ್ಲಿ, ಜ. ೨೭ ರಂದು ಜನ್ನತ್ ನಗರದಲ್ಲಿ, ಫೆ. ೧ ರಂದು ಗಣೇಶ್ ಪೇಟ್ ದಲ್ಲಿ, ಫೆ. ೮ ರಂದು ಗಾಮನಗಟ್ಟಿಯಲ್ಲಿ, ಫೆ. ೧೫ ರಂದು ಎಸ್.ಎಂ. ಕೃಷ್ಣನಗರ, ಫೆ. ೨೨ ರಂದು ಕೆಳಗೇರಿಯಲ್ಲಿ, ಮಾ. ೧ ರಂದು ಸುತಗಟ್ಟಿಯಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದರು.


ಸೌಲಭ್ಯಗಳನ್ನು ಪಡೆಯಲು ಒಪಿಡಿ ಹಾಗೂ ಆಸ್ಪತ್ರೆ ಭೇಟಿ ಸಮಯದಲ್ಲಿ ಆರೋಗ್ಯ ಕಾರ್ಡ್ ನ್ನು ಕಡ್ಡಾಯವಾಗಿ ತೋರಿಸಬೇಕು, ಗುರುತಿನ ಚೀಟಿ ಅಗತ್ಯವಾಗಿರುತ್ತದೆ. ಈ ಕಾರ್ಡ್ ನೋಂದಣಿ ದಿನಾಂಕದಿAದ ೧ ವರ್ಷದವರೆಗೆ ಮಾನ್ಯವಾಗಿರುತ್ತದೆ. ಭಾನುವಾರ ಒಪಿಡಿ ಸೇವೆ ಇರುವುದಿಲ್ಲ ಜೊತೆಗೆ ತುರ್ತು ಚಿಕಿತ್ಸೆ ಲಭ್ಯವಿರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಅಭಿಷೇಕ ಪಾಟೀಲ್, ಶೋಭಾ, ಪ್ರಕಾಶ್ ನಾಯ್ಕ್, ಶಿರೀಲ್ ಉಪಸ್ಥಿತರಿದ್ದರು.