
ರೋಣ,ನ12: ರೋಣ/ಗಜೇಂದ್ರಗಡ ತಾಲೂಕ ಪಂಚಾಯತ ಹಾಗೂ ತಾಲೂಕ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಆರ್‍ಡಿಪಿಆರ್ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ತಾಲೂಕ ಪಂಚಾಯತ ಆವರಣದಲ್ಲಿ ನಡೆಯಿತು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಸಿಬ್ಬಂದಿ, ತಾಲೂಕ ಪಂಚಾಯತ್ ಸಿಬ್ಬಂದಿ, ನರೇಗಾ, ಎನ್‍ಆರ್‍ಎಲ್‍ಎಂ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು..
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಜಿ. ಪಾಟೀಲ (ಮಿಥುನಗೌಡ ಪಾಟೀಲ), , ವಹಿಸಿ ಮಾತನಾಡಿ, “ಆರೋಗ್ಯ ಕಾಪಾಡಿದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ಗ್ರಾಮ ಮಟ್ಟದ ಸಿಬ್ಬಂದಿಗಳ ಆರೋಗ್ಯ ಹಿತ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಿದೆ. ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಅವರು ಇಂತಹ ಕಾರ್ಯಕ್ರಮ ಮಾಡಿದ್ದಕೆ ಅಭಿನಂದನೆಗಳು.ಪ್ರತಿ ವರ್ಷ ಇಂತಹ ಕಾರ್ಯಕ್ರಮ ನಡೆಯಲಿ ಎಂದರು.
ರೋಣ ಹಾಗೂ ಗಜೇಂದ್ರಗಡ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ. ಕಂದಕೂರ ಮಾತನಾಡಿ, “ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಸಿಬ್ಬಂದಿಗಳ ಆರೋಗ್ಯ ಹಿತ ದೃಷ್ಟಿಯಿಂದ ಈ ಶಿಬಿರ ಆಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಒತ್ತಡದಿಂದ ಬಳಲುತ್ತಿರುವವರು ಹೆಚ್ಚಾಗಿದ್ದಾರೆ. ಹಣವೊಂದೇ ಜೀವನವಲ್ಲಾ, ಆರೋಗ್ಯವೇ ಮುಖ್ಯ ಬಂಡವಾಳ ಎಂದರು.
ಗದಗದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಪ್ತ ಸಮಾಲೋಚಕರಾದ ಎಸ್.ಬಿ. ಪಾಟೀಲ ರಕ್ತದಾನದ ಬಗ್ಗೆ ತಿಳಿಸಿದರು.
ರೋಣ ತಾಲೂಕ ಆಸ್ಪತ್ರೆಯ ಹೃದಯರೋಗ ತಜ್ಞ ಡಾ. ಪ್ರವೀಣ ಅಣಗೌಡ್ರ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ತಾಲೂಕ ವೈದ್ಯಾಧಿಕಾರಿ ಡಾ. ಬಿ.ಎಸ್. ಭಜಂತ್ರಿ, ಪ್ಯಾಥಾಲಾಜಿಸ್ಟ್ ಡಾ. ಹರೀಶ್ ಪೆರಮಿ, ಸಿಎಂಓ ಡಾ. ಶಕೀಲ ಅಹ್ಮದ್ ದುಂದರಗಿ , ಡಾ. ರಘು ಹೊಸೂರ, ಡಾ. ದಾನಮ್ಮ ಹುಲಕುಂದ, ಡಾ. ಶಿವಪ್ರಸಾದ್ ಹಿರೇಮಠ, ಡಾ. ಸಂತೋಷ ಗಚ್ಚಿನಮನಿ ತಾಲೂಕಾಸ್ಪತ್ರೆ ವೈದ್ಯಾಧಿಕಾರಿಗಳು, ಜಿಲ್ಲಾ ವ್ಯವಸ್ಥಾಪಕರು, ಎನ್‍ಆರ್‍ಎಲ್‍ಎಂ ಬಸವರಾಜ ಮೂಲಿಮನಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ತಾಲೂಕ ಪಂಚಾಯತ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು, ಎನ್‍ಆರ್ ಎಲ್ ಎಮ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಹಾಗೂ ತಾಲೂಕ ಮಟ್ಟದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
ಗಜೇಂದ್ರಗಡ ತಾಲೂಕ ಪಂಚಾಯತ ಐಇಸಿ ಕೋ ಆರ್ಡಿನೇಡರ್ ಸುರೇಶ ಬಾಳಿಕಾಯಿ ಸ್ವಾಗತಿಸಿದರು. , ತಾಪಂ ಆಡಳಿತ ಸಹಾಯಕರಾದ ಅರುಣ ಶಿಂಗ್ರಿ ನಿರೂಪಣೆ ಮಾಡಿ ವಂದಿಸಿದರು.

























