ಬಳ್ಳಾರಿ: ಹಾಸನದಲ್ಲಿ ನಿನ್ನೆ ಸಂಜೆ ಗಣೇಶ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿದ್ದ ಜನರ ಮೇಲೆ ಚಾಲಕನ ನಿಯಂರ್ರಣ ತಪ್ಪಿ ಕ್ಯಾಂಟರ್ ಲಾರಿ ಹರಿದ ಅಪಘಾತ ಪ್ರಕರಣದಲ್ಲಿ ನಗರದ ನಾಗಲಕೆರೆ ನಿವಾಸಿ ಇಂಜಿನಿಯರ್ ವಿದ್ಯಾರ್ಥಿ ಪ್ರವೀಣ್ ಸಾವನ್ನಪ್ಪಿದ್ದಾನೆ.
ಬಳ್ಳಾರಿಯಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಎಂಜಿನಿಯರಿಂಗ್ ಮಾಡಲು ಹಾಸನಕ್ಕೆ ತೆರಳಿದ್ದನು. ಎಲೆಕ್ಟ್ರಾನಿಕ ವಿಭಾಗದ ಕೊನೆ ಸೆಮೆಸ್ಟರ್ ನಲ್ಲಿ ಅಭ್ಯಾಸ ಮಾಡುತ್ತಿದ್ದ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡುಗೆ ಕೆಕಸ ಮಾಡಿಕೊಂಡಿದ್ದ ಸುಶೀಲಮ್ಮಳ ಪತಿ ಇಲ್ಲ. ಆದರೂ ತಮ್ಮ ಬಡತನದಲ್ಲೂ ಇದ್ದ ಒಬ್ಬ ಮಗನಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಕನಸುಕಂಡಿದ್ದರು. ಆದರೆ ವಿಧಿ ಆತನನ್ನು ತಾಯಿಯಿಂದ ಕಿತ್ತುಕೊಂಡಿದೆ.
ವಿಷಯ ತಿಳಿದು ಹಾಸನಕ್ಕೆ ತೆರಳಿದ ಸುಶೀಲಮ್ಮ ಮತ್ತು ಆಕೆಯ ಪುತ್ರಿ ಪ್ರವೀಣನ ಶವ ಕಂಡು ರೋದಿಸಿದ್ದಾರೆ.
ಇಂದು ಬೆಳಿಗ್ಗೆ ಹಾಸದಿಂದ ಬಳ್ಳಾರಿಗೆ ಪ್ರವೀಣನ ಮೃತದೇಹವನ್ನು ನಾಗಲಕೆರೆ ಪ್ರದೇಶಕ್ಕೆ ತಂದಾಗ ಇಲ್ಲಿನ ನಿವಾಸಿಗಳ ಕಣ್ಣಲ್ಲಿ ನೀರು ತುಂಬಿ ತುಳುಕುತ್ತಿತ್ತು.ಇಡೀ ನಾಗಲಕೇರಿ ಏರಿಯಾವೇ ಪ್ರವೀಣ್ ಸಾವಿಗೆ ಕಣ್ಣಿರು ಹಾಕಿತು.
ನಂತರ ಇಲ್ಲಿಯೇ ಅಂತ್ಯ ಸಂಸ್ಕಾರ ನಡೆಯಿತು. ಮೃತನ ಕುಟುಂಬಕ್ಕೆ ಸರ್ಕಾರ ಐದು ಲಕ್ಷ ರೂಗಳ ಪರಿಹಾರ ಘೋಷಣೆ ಮಾಡಿದೆ.

























