
ಸೈದಾಪುರ:ಜ.25:ಭವಿಷ್ಯದ ಸಾಧನೆಗೆ ಇಂದಿನಿಂದಲೇ ಕಠಿಣ ಪರಿಶ್ರಮ ಮಾಡಿ, ನೀವೆಲ್ಲ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಕರ್ನಾಟಕದ ಟಾಪರ್ ಗಳಾಗಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸೈದಾಪುರ ಪಟ್ಟಣದ ಮಿತ್ರಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳ ಜೊತೆಗೆ ಪ್ರೇರಣೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ಜೀವನದ ಭವಿಷ್ಯದ ಮೊದಲ ಹೆಜ್ಜೆ ಹತ್ತನೇ ತರಗತಿ. ಸಾಧನೆ ಎನ್ನುವುದು ಒಂದೇ ದಿನದಲ್ಲಿ ಒಲಿದು ಬರುವಂತದಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ಶಿಸ್ತು, ಆಸಕ್ತಿ, ನಿರಂತರ ಕಠಿಣ ಪರಿಶ್ರಮ, ಬಹಳ ಎಚ್ಚರಿಕೆಯಿಂದ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕು. ಪೆÇೀಷಕರು ಸಹಕಾರ ಕೂಡ ಅತ್ಯಂತ ಮುಖ್ಯವಾಗಿರುತ್ತಾರೆ. ವಿದ್ಯೆ ಎನ್ನುವುದು ಜ್ಞಾನಕ್ಕೆ ಶೇಕಡುವಾರು ಅಂಕಗಳಿಗಲ್ಲ. ನಾನು ನಾಳೆ ಏನಾಗಬೇಕು ಎಂಬುದನ್ನು ಇಂದೇ ನಿರ್ಧಾರ ಮಾಡಬೇಕು. 16 ರಿಂದ 25 ವರ್ಷದೊಳಗೆ ನಮ್ಮ ಭವಿಷ್ಯ ನಿರ್ಮಾಣಗುತ್ತದೆ. ಆದ್ದರಿಂದ ಸರಿಯಾಗಿ ಯೋಚಿಸಿಬೇಕು. ವಿದ್ಯಾರ್ಥಿಗಳು ನಿಮ್ಮ ಗುರಿ ತಲುಪುವವರೆಗೂ ಸಾಮಾಜಿಕ ಜಾಲತಾಣಗಳ ಬಳಕೆ ಮಿತಿಯಲ್ಲಿರಲಿ. ಮೊದಲು ನಾವು ಯಶಸ್ಸು ಸಾಧಿಸಲು ದೈಹಿಕವಾಗಿ ಮಾನಸಿಕವಾಗಿ ಸಂತೋಷವಾಗಿರಬೇಕು. ಶಿಸ್ತು ಸಂಯಮದಿಂದ ಸತತ ಪ್ರಯತ್ನ ಮಾಡಿದಾಗ ನಿಖರ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಶಶಿಧರ ಸ್ವಾಮಿ ಹಿರೇಮಠ, ಮಿತ್ರಾ ಚಾರಿಟೇಬಲ್ ಟ್ರಸ್ಟ್‍ನ ಗೌರವ ಅಧ್ಯಕ್ಷ ರಾಘವೇಂದ್ರ ಕಲಾಲ್, ಕಾರ್ಯದರ್ಶಿ ಬಸವಲಿಂಗಪ್ಪ.ಜಿ ಕಲಾಲ್, ಸದಸ್ಯರಾದ ನಂದಗೋಪಾಲ ಪಟವಾರಿ, ಆಂಜನೇಯ ಶೆಟ್ಟಿಹಳ್ಳಿ, ಆಂಜನೇಯ ಕಡೇಚೂರು, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.

























