Home ಜಿಲ್ಲೆ ಉತ್ತಮ ಆರೋಗ್ಯಕ್ಕೆ ಶ್ರಮದಾನ ಅವಶ್ಯ:ಡಾ.ನಾಲಬಂದ

ಉತ್ತಮ ಆರೋಗ್ಯಕ್ಕೆ ಶ್ರಮದಾನ ಅವಶ್ಯ:ಡಾ.ನಾಲಬಂದ

ತಾಳಿಕೋಟೆ:ಏ.೯: ಮನುಷ್ಯನ ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಎಷ್ಟು ಮುಖ್ಯವೋ ಅದರ ತಕ್ಕಂತೆ ಮನುಷ್ಯನಲ್ಲಿ ಯೋಗಾಸನದಂತಹ ವಿವಿಧ ರೀತಿಯ ಶ್ರಮದಾನವೂ ಅಷ್ಟೇ ಮುಖ್ಯವಾಗಿದೆ ಎಂದು ಖ್ಯಾತ ವೈಧ್ಯರಾದ ಡಾ.ಎ.ಎ.ನಾಲಬಂದ ಅವರು ಹೇಳಿದರು.
ಬುಧವಾರರಂದು ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಆಶ್ರಯ ಕಾಲೋನಿಯಲ್ಲಿ ಆಯೋಜಿಸಲಾದ ರಾಷ್ಟಿçÃಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿಶೇಷ ಶಿಬಿರದ ೩ನೇ ದಿನದಂದು ನಡೆದ ಆರೋಗ್ಯವೇ ಭಾಗ್ಯ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಉತ್ತಮ ಆರೋಗ್ಯಕ್ಕಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಕಾಲ್ನಡಿಗೆ, ಯೋಗಾಸನಗಳನ್ನು ಮಾಡುವುದು ಅಗತ್ಯವಾಗಿದೆ ಮನುಷ್ಯನಿಗೆ ಸರಿಯಾದ ನಿದ್ರೆ, ಶುದ್ಧ ಆಹಾರ ಸೇವನೆ, ಯಥೇಚ್ಛ ನೀರು ಸೇವನೆ ಮತ್ತು ಮಾನಸಿಕ ನೆಮ್ಮದಿ ಇವು ಉತ್ತಮ ಆರೋಗ್ಯಕ್ಕೆ ಅಗತ್ಯವೆಂದು ತಿಳಿಸಿದ ಅವರು ಮಾನಸಿಕ ಒತ್ತಡವನ್ನು ದೂರವಿಟ್ಟು ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಇದರಿಂದ ಆರೋಗ್ಯವಂತರಾಗಿ ಬಾಳಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದ ಮಾರ್ಗದರ್ಶಕರು ಹಾಗೂ ಉಪನ್ಯಾಸಕರಾದ ವಾಯ್.ಎಚ್. ಅಂಗಡಗೇರಿ ಅವರು, ಸಮತೋಲನ ಆಹಾರದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮನುಷ್ಯನು ನಿತ್ಯ ಕಾಲ್ನಡಿಗೆಯಿಂದ ನಡೆಯುವ ರೂಡಿಯನ್ನು ಹೆಚ್ಚಿಸಿಕೊಳ್ಳಬೇಕು ಇದರಿಂದ ದೇಹದಲ್ಲಿ ಸಮತೋಲನೆ ಕಾಪಾಡಿಕೊಳ್ಳಲು ಸಾದ್ಯವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಆರ್.ಎಂ. ಬಂಟನೂರ ಅವರು ಮಾತನಾಡಿ, ಆರೋಗ್ಯದ ಬಗ್ಗೆ ಅಲಕ್ಷ÷್ಯ ತೋರಬಾರದು. ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೀ.ವಿ.ಸಂಘದ ಉಪಾದ್ಯಕ್ಷ ಹಾಗೂ ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಕೆ.ಎಸ್ ಮುರಾಳ ಮತ್ತು ಸಹ ಕಾರ್ಯದರ್ಶಿಗಳಾದ ಎಂ.ಎಸ್. ಸರಶೆಟ್ಟಿ ಶಂಕರಗೌಡ ಹಿಪ್ಪರಗಿ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳಿಂದ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳು ಕೂಡ ಹಮ್ಮಿಕೊಳ್ಳಲಾಯಿತು. ಶಿಬಿರದ ಅಂಗವಾಗಿ ಮುಂಜಾನೆ ಎನ್.ಎಸ್.ಎಸ್ ಗೀತೆಯ ಗಾಯನ ಹಾಗೂ ಯೋಗಾಭ್ಯಾಸ ನಡೆಸಲಾಯಿತು. ಬಳಿಕ ವಿದ್ಯಾರ್ಥಿಗಳು ನಗರದ ಪೊಲೀಸ್ ಸ್ಟೇಷನ್ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನದಲ್ಲಿ ತೊಡಗಿಸಿಕೊಂಡರು.
ಈ ಸಂದರ್ಭದಲ್ಲಿ ರಾಷ್ಟಿçÃಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಎ.ಎ. ಗಂಗನಗೌಡ, ಕಾರ್ಯದರ್ಶಿಗಳಾದ ರೇಷ್ಮಾ ಚಲವಾದಿ, ಮಹಿಳಾ ಕಾರ್ಯದರ್ಶಿ ಪಾರ್ವತಿ ಹಾಗೂ ಎನ್.ಎಸ್.ಎಸ್ ಶಿಬಿರಾರ್ಥಿಗಳು ಮತ್ತು ಮಹಾವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶರಣಮ್ಮ ಮತ್ತು ತಂಡದವರು ಪ್ರಾರ್ಥಿಸಿದರು. ಅನ್ನಪೂರ್ಣ ತಂಡದವರು ಎನ್.ಎಸ್.ಎಸ್ ಗೀತೆಯನ್ನು ಹಾಡಿದರು. ಕರಿಯಣ್ಣ ಸ್ವಾಗತಿಸಿ ಪರಿಚಯಿಸಿದರು. ಸಹನಾ ಸಜ್ಜನ ವಂದಿಸಿದರು. ನೇತ್ರಾವತಿ ನಿರೂಪಿಸಿದರು.

ಮನುಷ್ಯನ ಎಲ್ಲ ಸಂಪತ್ತಿಗಿAತಲೂ ಆರೋಗ್ಯ ಸಂಪತ್ತು ಎಂಬುದು ಭಹುಮುಖ್ಯವಾಗಿದೆ ಎಲ್ಲವೂ ಇದ್ದು ಆರೋಗ್ಯ ಇಲ್ಲದಿದ್ದರೆ ಜೀವನ ಮತ್ತು ಸಂಪತ್ತು ವ್ಯರ್ಥವಾಗಲಿದೆ ಅದಕ್ಕಾಗಿ ಮೊದಲು ಎಲ್ಲರೂ ಆರೋಗ್ಯದ ಕಡೆಗೆ ಲಕ್ಷ ವಹಿಸಬೇಕು.
                            ಡಾ.ಎ.ಎ.ನಾಲಬಂದ ಖ್ಯಾತ ವೈಧ್ಯರು ತಾಳಿಕೋಟೆ