
ಬೀದರ್:ಏ.೭: ಸೂಕ್ತ ಹಾಗೂ ಶ್ರೇಷ್ಠ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಕವಿ, ಕಲಾವಿದ, ಸಾಹಿತಿಗಳಿಗೆ ಸಲಹುವಂತಹ ಶ್ರೇಷ್ಠ ಕಾರ್ಯ ಹಾರಕೂಡ ಶ್ರೀಮಠದಿಂದ ಸಾಗಿ ಬರುತ್ತಿದೆ ಎಂದು ಸಿದ್ದಬಸವ ಕಬೀರ ಸ್ವಾಮಿಗಳು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಸೋಮವಾರ ಬೆಳಗ್ಗೆ ಆಯೋಜಿಸಿದ ಧಾರ್ಮಿಕ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಸ್ವಾಮಿಗಳು, ಹಾರಕೂಡ ಮಠವೆಂದರೆ ಇದೊಂದು ಅಭಿನವ ಅನುಭವ ಮಂಟಪವಾಗಿದ್ದು, ಇಲ್ಲಿ ಸರ್ವಜಾತಿ ಜನಾಂಗದ, ಸರ್ವಧರ್ಮಗಳ ಬೆಸುಗೆಯ ಸುಂದರ ಸೌಹಾರ್ದ ಆಚಾರ ವಿಚಾರ ತಾಣ ಸಿಗುತ್ತದೆ.
ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು, ಬಸವಣ್ಣನವರನ್ನು, ಬಸವಾದಿ ಶರಣರನ್ನು ತಮ್ಮ ಅಂತರAಗದಲ್ಲಿ ಇರಿಸಿಕೊಂಡು ಬಸವ ಚಿಂತನೆಯನ್ನು ಸಮಾಜಕ್ಕೆ ಪ್ರಖರವಾಗಿ ಮುಟ್ಟಿಸುವ ಆದರ್ಶ ಶಿವಾಚಾರ್ಯರಾಗಿದ್ದಾರೆ.
ಇಂತಹ ಮಹಾನ್ ಯತಿವರ್ಯರನ್ನು ಪಡೆದ ಈ ನೆಲವೇ ಧನ್ಯ.
ಹಾರಕೂಡ ಮಠದ ಭೇಟಿ ಹಾಗೂ ಚನ್ನವೀರ ಶಿವಾಚಾರ್ಯರ ದರ್ಶನಾಶೀರ್ವಾದದಿಂದ ನನ್ನಲ್ಲಿ ಹೊಸ ಆಧ್ಯಾತ್ಮಿಕ ಚೈತನ್ಯ ಮೂಡಿದೆ ಎಂದು ಹರ್ಷದಿಂದ ನುಡಿದರು.
ಹಾರಕೂಡ ಶ್ರಿ ಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಬಸವಕಲ್ಯಾಣ ದೇವಸ್ಥಾನ ಪಂಚಕಮಿಟಿ (ಬಿಡಿಪಿಸಿ) ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅನೀಲಕುಮಾರ ವೈಜಿನಾಥಪ್ಪಾ ರಗಟೆ,
ಉಪಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಶಾಂತಪ್ಪಾ ಕುರಕೋಟೆ, ಕೋಶಾಧ್ಯಕ್ಷರಾದ ಶ್ರೀ ಜಗನ್ನಾಥ ಚನ್ನಬಸಪ್ಪಾ ಖೂಬಾ, ಕಾರ್ಯದರ್ಶಿಗಳಾದ ಶ್ರೀ ಅಶೋಕ ರಾಮಶೆಟ್ಟೆಪ್ಪಾ ನಾಗರಾಳೆ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಸಿದ್ರಾಮಪ್ಪ ಗುದಗೆ, ಬಿಡಿಪಿಸಿ ಸಹಕಾರದರ್ಶಿಗಳಾದ ಶ್ರೀ ಬಸವರಾಜ ಕಾಶಪ್ಪಾ ಬಾಲಕೀಲೆ, ಶ್ರೀ ಸುನೀಲ ಶಿವಶರಣಪ್ಪಾ ರಾಯವಾಡೆ ನಿರ್ದೇಶಕರುಗಳಾದ ಶ್ರೀ ಬಸವರಾಜ ಭೋಜಪ್ಪಾ ಕೋರಕೆ, ಶ್ರೀ ಇರಣ್ಣಾ ನಾಗಣ್ಣಾ ಹಲಶೆಟ್ಟೆ, ಶ್ರೀ ಭದ್ರಿನಾಥ ಶಿವರಾಜ ಪಾಟೀಲ, ಶ್ರೀ ವಿವೇಕಾನಂದ ವೈಜಪ್ಪಾ ಹೊದಲೂರೆ, ಶ್ರೀ ಬಸವರಾಜ ವೈಜಿನಾಥಪ್ಪಾ ತೊಂಡಾರೆ, ಶ್ರೀ ಮಲ್ಲಿಕಾರ್ಜುನ ಚನ್ನಪ್ಪಾ ಚಿರಡೆ, ಶ್ರೀ ಸುನೀಲಕುಮಾರ ಸುಭಾಷ ಹೊಳಕುಂದೆ, ಶ್ರೀ ರಾಜಕುಮಾರ ಗದಗೇಪ್ಪಾ ಹೊಳಕುಂದೆ ಹಾಗೂ ಶ್ರೀಮತಿ ಪುಷ್ಪಾವತಿ ರಾಜಕುಮಾರ ಮಾಮಾ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಚಿಗರಹಳ್ಳಿ ಸಿದ್ದಬಸವ ಕಬೀರ ಸ್ವಾಮಿಗಳಿಗೆ ಹಾಗೂ ಬಿಡಿಪಿಸಿ ನೂತನ ಪದಾಧಿಕಾರಿಗಳಿಗೆ ಹಾರಕೂಡ ಶ್ರೀ ಮಠದ ವತಿಯಿಂದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸತ್ಕರಿಸಿ ಗೌರವಿಸಿದರು.
ಮಲ್ಲಿನಾಥ ಹಿರೇಮಠ ಸ್ವಾಗತಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು.
ಭಕ್ತ ಕುಂಬಾರ ಕಾರ್ಯಕ್ರಮ ನಿರೂಪಣೆ ಮಾಡಿದರು.
ಚಿತ್ರ : ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಸೋಮವಾರ ಬೆಳಗ್ಗೆ ಆಯೋಜಿಸಿದ ಧಾರ್ಮಿಕ ಸಭೆಯನ್ನು ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು.
ಚಿಗರಹಳ್ಳಿಯ ಸಿದ್ದಬಸವ ಕಬೀರ ಸ್ವಾಮಿಗಳು, ಬಸವಕಲ್ಯಾಣ ದೇವಸ್ಥಾನ ಪಂಚಕಮಿಟಿ (ಬಿಡಿಪಿಸಿ) ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅನೀಲಕುಮಾರ ವೈಜಿನಾಥಪ್ಪಾ ರಗಟೆ,
ಉಪಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಶಾಂತಪ್ಪಾ ಕುರಕೋಟೆ, ಕೋಶಾಧ್ಯಕ್ಷರಾದ ಶ್ರೀ ಜಗನ್ನಾಥ ಚನ್ನಬಸಪ್ಪಾ ಖೂಬಾ, ಕಾರ್ಯದರ್ಶಿಗಳಾದ ಶ್ರೀ ಅಶೋಕ ರಾಮಶೆಟ್ಟೆಪ್ಪಾ ನಾಗರಾಳೆ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಸಿದ್ರಾಮಪ್ಪ ಗುದಗೆ, ಬಿಡಿಪಿಸಿ ಸಹಕಾರದರ್ಶಿಗಳಾದ ಶ್ರೀ ಬಸವರಾಜ ಕಾಶಪ್ಪಾ ಬಾಲಕೀಲೆ, ಶ್ರೀ ಸುನೀಲ ಶಿವಶರಣಪ್ಪಾ ರಾಯವಾಡೆ ನಿರ್ದೇಶಕರುಗಳಾದ ಶ್ರೀ ಬಸವರಾಜ ಭೋಜಪ್ಪಾ ಕೋರಕೆ, ಶ್ರೀ ಇರಣ್ಣಾ ನಾಗಣ್ಣಾ ಹಲಶೆಟ್ಟೆ, ಶ್ರೀ ಭದ್ರಿನಾಥ ಶಿವರಾಜ ಪಾಟೀಲ, ಶ್ರೀ ವಿವೇಕಾನಂದ ವೈಜಪ್ಪಾ ಹೊದಲೂರೆ, ಶ್ರೀ ಬಸವರಾಜ ವೈಜಿನಾಥಪ್ಪಾ ತೊಂಡಾರೆ, ಶ್ರೀ ಮಲ್ಲಿಕಾರ್ಜುನ ಚನ್ನಪ್ಪಾ ಚಿರಡೆ, ಶ್ರೀ ಸುನೀಲಕುಮಾರ ಸುಭಾಷ ಹೊಳಕುಂದೆ, ಶ್ರೀ ರಾಜಕುಮಾರ ಗದಗೇಪ್ಪಾ ಹೊಳಕುಂದೆ ಹಾಗೂ ಶ್ರೀಮತಿ ಪುಷ್ಪಾವತಿ ರಾಜಕುಮಾರ ಮಾಮಾ, ಮಲ್ಲಿನಾಥ ಹಿರೇಮಠ ಹಾರಕೂಡ ಉಪಸ್ಥಿತರಿದ್ದರು.




















