ಸಾಹಿತ್ಯ ಕ್ಷೇತ್ರಕ್ಕೆ ಹಾರಕೂಡ ಮಠದ ಕೊಡುಗೆ ಅಪಾರ :ಶರಣಪ್ಪ ತಳವಾರ

ಬಸವಕಲ್ಯಾಣ: ಜ.24: ಹಿರೇಮಠ ಸಂಸ್ಥಾನ ಹಾರಕೂ ಡದಲ್ಲಿ ಫೆÇ್ರೀ. ಸೂಗಯ್ಯ್ ಹಿರೇಮಠ ಸ್ಮರಣಾರ್ಥ ನೀಡುವ 2025ನೇ ಸಾಲಿನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು ಸಮಾರಂಭದ ದಿವ್ಯ ಸಾನಿದ್ಯವನ್ನು ಪೂಜ್ಯ ಶ್ರೀ ಡಾ. ಚೆನ್ನವೀರಶಿವಚಾರ್ಯರು ವಹಿಸಿ ಕೊಂಡು ಭಾಗವಸಿದವರಿಗೆ ಆಶೀರ್ವಾದ ಮಾಡಿದರು. ಪಿಜೆಪಿ ಮುಖಂಡರಾದ ಶ್ರೀ ಶರಣಪ್ಪ ತಳವಾರ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಹಾರ ಕೂಡ ಮಠದ ಪೂಜ್ಯರಾದ ಶ್ರೀ ಚೆನ್ನವೀರಶಿವಚಾರ್ಯರು ಲೋಕಕಲ್ಯಾಣ ಕಾರ್ಯಕ್ಕೆ ಈ ಭೂಮಿಯ ಮೇಲೆ ಅವತರಿಸಿ ಬಂದಿದ್ದಾರೆ, ಶ್ರೀಗಳ ಮಠವು ಯಾವುದೇ ಜಾತಿ ಮತಕ್ಕೆ ಸೀಮಿತವಾಗಿಲ್ಲ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಹೀಗಾಗಿ ಶ್ರೀ ಮಠಕ್ಕೆ ಭಕ್ತ ಸಾಗರವೇ ಹರಿದು ಬರುತಿದೆ, ಶ್ರೀಗಳು ತ್ರಿವಿದ ದಾಸೊಹೋದೊಂದಿಗೆ ಬಡ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ಅವರನ್ನು ಭವಿಷ್ಯದ ಪ್ರತಿಭೆಗಳ ನ್ನಾಗಿ ಮಾಡುತ್ತಿದ್ದಾರೆ, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುತ್ತಾ, ಸಾಹಿತ್ಯ ಕಲೆ ಸಂಗೀತಕ್ಕೆ ಪೂಜ್ಯಶ್ರೀಗಳ ಪೆÇ್ರೀತ್ಸಾಹಿಸುತ್ತ ಬರುತ್ತಿರುವದರಿಂದ ಶ್ರೀ ಮಠದ ಕೊಡುಗೆ ಅಪಾರವಾಗಿದೆ, ಶಿವಸ್ವರೂಪಿಯಾದ ಪೂಜ್ಯರು ನಡೆದಾಡುವ ಜಗದ್ಗುರುಗಳಾಗಿದ್ದಾರೆಂದು ತಿಳಿಸಿದರು. ಇದೆ ಸಂದರ್ಭದಲ್ಲಿ 2025ನೇ ಸಾಲಿನ ಪ್ರಶಸ್ತಿ ಪುರಸ್ಕøತರಾದ ಡಾ. ಬಸವರಾಜ ಪೆÇಲೀಸ್ ಪಾಟೀಲರಿಗೆ ಸಾಹಿತ್ಯ ಸಾಧಕ ಪ್ರಶಸ್ತಿ, ಮಲ್ಲಪ್ಪ ಹುಶೇನಪ್ಪ ಮಸ್ಕಿ ಅವರಿಗೆ ಜಾನಪದ ಕಲಾವಿದ ಸಾಧಕ ಪ್ರಶಸ್ತಿಯನ್ನು ಪೂಜ್ಯಶ್ರೀಗಳು ಹಾಗೂ ಅತಿಥಿಗಳು ಸೇರಿ ಪ್ರದಾನ ಮಾಡಿದರು. ಅದೇ ರೀತಿಯಾಗಿ ಗೌರವ ಪ್ರಶಸ್ತಿಗೆ ಭಾಜನರದ ಎಸ್ ಎಸ್ ದೇವರಕಲ್ಲ, ಜಯದೇವಿ ತೇಲಿ, ಗೋಪಿಕಾ ದೇವಿ ದೇಶಮುಖ, ನಾಗರಾಜ್ ಸoಬಾಜಿ, ಬಸವರಾಜ್ ಐನೊಲಿ, ಕನಕಪ್ಪ ಬಿಲ್ಲವ, ಬಿ ಬಿ. ಸರಡಗಿ, ಡಾ ಸ್ವಾಮಿ ವಿವೇಕಾನಂದ ಇವರುಗಳಿಗೆ ಸಮಾರಂಭದಲ್ಲಿಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಾಹಿತಿ ಡಾ. ಸದಾನಂದ ಪೆರ್ಲ ಅವರು ಪೂಜ್ಯ ಚೆನ್ನವೀರಶಿವಾ ಚಾರ್ಯರು ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಶಿಕ್ಷಣ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ನಿರಂತರ ಪ್ರಯತ್ನಿಸುತ್ತಿದ್ದಾರೆ, ಶ್ರೀಗಳ ಪ್ರಯತ್ನದಿಂದ ಶ್ರೀ ಮಠವು ನಾಡಿನ ಶ್ರೇಷ್ಠವಾಗಿ ಹೊರಹೋಮ್ಮಿರುವದ್ದಕ್ಕೆ ಶ್ರೀಗಳ ಪ್ರಗತಿಪರ ಕಾರ್ಯಕ್ರಮಳೇ ಕಾರಣವಾಗಿವೆ, ಸಾಹಿತ್ಯ ಕ್ಷೇತ್ರಕ್ಕೆ ಹಾರಕೂಡ ಮಠದ ಕೊಡುಗೆ ಮಹತ್ವದ್ದಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾದ ಡಾ ಮಲ್ಲಿಕಾರ್ಜುನ ಮುಕ್ಕಾ, ಅಧ್ಯಕ್ಷತೆ ವಹಿಸಿದ ಪ. ಮಾನು ಸಗರ ಕಾರ್ಯಕ್ರಮ ಕುರಿತು ಮಾತನಾಡಿದರು, ಆರಂಭದಲ್ಲಿ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು, ಟ್ರಸ್ಟ್ ಅಧ್ಯಕ್ಷ ನಟರಾಜ ಎಸ್ ಹಿರೇಮಠ, ಶಾಂತಮ್ಮ ಹಿರೇಮಠ, ಡಾ. ಈಶ್ವರಯ್ಯ್ ಕೊಡoಬಲ್ಲ, ಗಿರಿಮಲ್ಲಪ್ಪ ಹರವಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳು, ಸಾಹಿತಿಗಳು, ಉಪನ್ಯಾಸಕರು, ಶ್ರೀಮಠದ ಭಕ್ತರು ಭಾಗವಹಿಸಿದ್ದರು ಸಾಹಿತಿ ಡಾ. ಚಿ. ಸಿ. ನಿಂಗಣ್ಣ ಕಾರ್ಯಕ್ರಮ ನಿರೂಪಿಸಿದರು ಚಿದಾನಂದ ಹಿರೇಮಠ ವಂದಿಸಿದರು.