Home ಜಿಲ್ಲೆ ಹರ್‌ಘರ್ ತಿರಂಗಾ ಯಾತ್ರೆ

ಹರ್‌ಘರ್ ತಿರಂಗಾ ಯಾತ್ರೆ


ಚನ್ನಮ್ಮನ ಕಿತ್ತೂರ,ಆ.೧೪:
ಪಟ್ಟಣದಲ್ಲಿ ಬಿಜೆಪಿ ಮಂಡಳ ವತಿಯಿಂದ ಹರ್‌ಘರ್ ತಿರಂಗಾ ಯಾತ್ರೆ ವಿಜೃಂಭಣೆ ಅದ್ದೂರಿಯಿಂದ ಜರುಗಿತು.
ಮಾಜಿ ಶಾಸಕ ಮಹಾತೇಶ ದೊಡ್ಡಗೌಡರ ಹಾಗೂ ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ ಮುಖಂಡತ್ವದಲ್ಲಿ ನಡೆದ ಯಾತ್ರೆಯು ಚನ್ನಮ್ಮನ ಕೂಟದ ಚನ್ನಮ್ಮಾಜೀ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಲಾಯಿತು. ಅರಳಿಕಟ್ಟಿ ಗುರುವಾರ ಪೇಟೆ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಷ್ಟಿçÃಯ ಹೆದ್ದಾರಿ ೪ರ ಪಕ್ಕದ ರಾಣಿ ಚನ್ನಮ್ಮ ವರ್ತುಳಕ್ಕೆ ತಲುಪಿತು.


ರಸ್ತೆಯುದ್ದಕ್ಕೂ ನೂರಾರು ವಿದ್ಯಾರ್ಥಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಆಟೋ-ರಿಕ್ಷಾ, ಮೋಟರ ಸೈಕಲ್, ಚಕ್ಕಡಿ, ಟ್ರಾö್ಯಕ್ಟರ್ ಸೇರಿದಂತೆೆ್ರ ರೈತರು, ಸಾರ್ವಜನಿಕರು, ಕೈಯಲ್ಲಿ ರಾಷ್ಟç ಧ್ವಜ ಹಿಡಿದು ಹರ್ ಘರ್ ತಿರಂಗಾ ಯಾತ್ರೆಯ ಮಹತ್ವ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಜೈಕಾರ ಕೂಗಿದರು.
ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ ಮಾತನಾಡಿ `ರಾಷ್ಟç ಧ್ವಜ’ ಪ್ರತಿಯೊಬ್ಬ ಭಾರತೀಯರ ಹೆಮ್ಮೆ ಹಾಗೂ ಗೌರವದ ಸಂಕೇತ ಇದನ್ನು ಪೂಜಿಸಬೇಕಾದುದ್ದು ನಮ್ಮ ಆದ್ಯ ಕರ್ತವ್ಯ. ಹರಘರ್ ತಿರಂಗಾ ಯಾತ್ರೆ ದೇಶದ್ಯಾಂತ ಆಚರಿಸಲಾಗುತ್ತದೆ. ಈ ಕಾರ್ಯದಲ್ಲಿ ಪಕ್ಷ ಭೇದ ಮರೆತು ಎಲ್ಲರೂ ಭಾಗವಹಿಸಿ ಧ್ವಜ ವಂದನೆ ಮಾಡಿ ಗೌರವ ಸಲ್ಲಿಸಬೇಕೆಂದರು.


ಜಾಥಾ ಕಾರ್ಯಕ್ರಮದಲ್ಲಿ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ, ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿಜೀ, ಹೆಜ್ಜೆ ಹಾಕಿದರು. ಖಂಡರುಗಳಾದ ಲಕ್ಷಿö್ಮÃ ಇನಾಮದಾರ, ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಮಂಜುಳಾ ಮಹಾಂತೇಶ ದೊಡ್ಡಗೌಡರ, ಜಿಪಂ ಮಾಜಿ ಸದಸ್ಯೆ ರಾಧಾ ಕಾದ್ರೋಳ್ಳಿ, ಉಮಾದೇವಿ ಬಿಕ್ಕಣ್ಣವರ, ವಿಶ್ವನಾಥ ಬಿಕ್ಕಣ್ಣವರ, ಸಂದೀಪ ದೇಶಪಾಡೆ, ಉಳವಪ್ಪ ಉಳ್ಳಾಗಡ್ಡಿ, ರಾಜೇಂದ್ರ ಇನಾಂದಾರ, ಶಂಕರ ಗುರುಪುತ್ತನವರ, ಕಿರಣ ಪಾಟೀಲ, ಹನಮಂತ ಲಂಗೋಟಿ, ಅಪ್ಪೇಶ ದಳವಾಯಿ, ಮಹಾಂತೇಶ ಗಿರನಟ್ಟಿ, ಸಿದ್ದನಗೌಡ ಪಾಟೀಲ, ಬಸವರಾಜ ಮಾತನಾವರ, ಶಿವಾನಂದ ಹನಮಸಾಗರ, ವಿಜಯಕುಮಾರ ಶಿಂಧೆ, ಬಸವರಾಜ ಗಡೆನ್ನವರ, ದಿನೇಶ ಒಳಸಂಗ, ಶಿವಾನಂದ ಬೋಗೂರ, ಫಕ್ಕೀರ ಜಾಗಂಟಿ, ನ್ಯಾಯವಾದಿಗಳು, ಮಾಜಿ ಸೈನಿಕರು, ವೈದ್ಯರು, ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು, ಅನೇಕರಿದ್ದರು.