ಧಾರವಾಡ,ಆ14: ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರಾಭಿಮಾನದ ಕರೆಯ ಮೇರೆಗೆ ದೇಶಾದ್ಯಂತ, ಆಗಸ್ಟ 13 ರಿಂದ ಆರಂಭವಾಗಿರುವ ಹರ್ ಘರ್ ತಿರಂಗಾ'' ಅಭಿಯಾನದ ಅಂಗವಾಗಿ, ಧಾರವಾಡದ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಹಮ್ಮಿಕೊಂಡಿದ್ದಬೃಹತ್ ಬೈಕ್ ರ್ಯಾಲಿ” ಯಲ್ಲಿ ನೂರಾರು ಮಂದಿ ಪಾಲ್ಗೊಂಡರು.
ಬೃಹತ್ ಬೈಕ್ ರ್ಯಾಲಿಗೆ ಧಾರವಾಡದ ಕೊಪ್ಪದಕೇರಿ ಶಿವಾಲಯದಿಂದ ಮಾಜಿ ಶಾಸಕರಾದ ಸೀಮಾ ಮಸೂತಿ, ಮಾಜಿಮಹಾಪೌರರು ಹಾಗೂ ಸಭಾನಾಯಕರು ಈರೇಶ ಅಂಚಟಗೇರಿ ನೇತೃತ್ವದಲ್ಲಿ ಚಾಲನೆ ನೀಡಿದರು.
ನಂತರ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ಸಂಚರಿಸಿ ಬಿಜೆಪಿ ಪಕ್ಷದ ಕಚೇರಿ ಎದುರು ಸಂಪನ್ನಗೊಂಡಿತು. .
ಇದೆ ಸಂದರ್ಭದಲ್ಲಿ ಆಗಸ್ಟ್ 15 ರ ವರೆಗೆ ಪ್ರತಿ ಮನೆಯಲ್ಲೂ ಎಲ್ಲರೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಿ ಭವ್ಯ ಭಾರತದ 79ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ಸವಿತಾ ಅಮರಶೆಟ್ಟಿ ಬಸವರಾಜ ಗರಗ ಶಂಕರ ಶೇಳಕೆ ಪ್ರಣಿತ ರಾಮನಗೌಡರ shಚಿಞಣi ಹಿರೇಮಠ ರಾಜೇಶ್ವರಿ ಅಳಗವಾಡಿ, ಸಂಕಲ್ಪ ಕಲ್ಯಾಣಶಟ್ಟಿ, ಕಾರ್ತಕ ಸುರಂಜನ, ಬಸು ಬಾಳಗಿ, ಮಂಜು ನಡಟ್ಟಿ, ಮಂಜು ಹೆಬಸುರ, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.























