
ಯಾದಗಿರಿ : ನ.೨೯:ಜಿಲ್ಲೆಯ ವಡಗೇರಾ, ದೋರನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೆ ಏರಿಸಿದ್ದಕ್ಕೆ ಕ್ಷೇತ್ರದ ಜನತೆಗೆ ಹರ್ಷವಾಗಿದೆ ಈ ಕಾರ್ಯ ಸಾಧುವಾಗಲು ಸಚಿವರಾದ ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ್ ಖರ್ಗೆ, ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರ ಶ್ರಮ ಅಪಾರವಾಗಿದೆ ಎಂದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ ಬಿಳ್ಹಾರ ಹೇಳಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆ ವೇಳೆ ಈ ಎರಡು ಕಡೆ ಪ್ರಚಾರ-ಕ್ಕೆ ಹೊದ ವೇಳೆ ಈ ಬೇಡಿಕೆಗಳ ಬಗ್ಗೆ ಜನರು ಮನವಿ ಸಲ್ಲಿಸಿದ್ದರು. ಅದರಂತೆಯೇ ಶಾಸಕರಾದ ಪಾಟೀಲ್ ಅವರು ಸಚಿವರ, ಡಿಸಿಎಂ, ಸಿಎಂ ಅವರ ಸಹಕಾರದಿಂದ ಒಂದೇ ತಿಂಗಳಲ್ಲಿ ಮಹತ್ವದ ಕೆಲಸಗಳು ಮಾಡಿದ್ದಾರೆ. ಕಾರಣ, ಇಷ್ಟರಲ್ಲಿಯೇ ಸಚಿವರು, ಶಾಸಕರನ್ನು ಭೇಟಿ ಸಮಯ ನಿಗದಿ ಪಡಿಸಿ ವಡಗೇರಾ, ದೋರನಹಳ್ಳಿ ಕಾಂಗ್ರೆಸ್ ಘಟಕಗಳಿಂದ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು ಅವರನ್ನು ಸನ್ಮಾನಿಸಲಾಗುವುದೆಂದು ಮರೆಪ್ಪ ಪ್ರಕಟಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷಾರೆಡ್ಡಿ, ರಾಘವೇಂದ್ರ ಮನಸಗಲ್, ಶಿವರಾಜ್, ಶರಣು ಪಡಶೆಟ್ಟಿ ಇತರರಿದ್ದರು.

























