Home ಜಿಲ್ಲೆ ಸಂಭ್ರಮದ ಜನ್ಮದಿನಾಚರಣೆ

ಸಂಭ್ರಮದ ಜನ್ಮದಿನಾಚರಣೆ

ಬಾದಾಮಿ, ಫೆ14: ಪಟ್ಟಣದ ವಿದ್ಯಾನಗರದ ಪಟ್ಟಣಶೆಟ್ಟಿ ಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಇವರ 71ನೇ ಜನ್ಮದಿನಾಚರಣೆ ಗುರುವಾರ ರಾತ್ರಿ ಸಂಭ್ರಮದಿಂದ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಕಳೆದ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಬಹಳ ಪ್ರೀತಿ ತೋರಿಸಿದ್ದೀರಿ. ನಿಮ್ಮೆಲ್ಲರ ಅಭಿಮಾನಕ್ಕೆ ಚಿರ ಋಣಿಯಾಗಿದ್ದೇನೆ. ಅಭಿಮಾನಿಗಳ ಪ್ರೀತಿ ಗೌರವ ನನಗೆ ಬಹಳ ಸಂತಸ ತಂದಿದೆ ಎಂದರು.


ಮಾಜಿ ಸಚಿವ ಮುರುಗೇಶ ನಿರಾಣಿ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಮುಖಂಡರಾದ ಸಿದ್ದನಗೌಡ ಪಾಟೀಲ, ಬಸವರಾಜ ಪಾಟೀಲ, ಹೊನ್ನಯ್ಯ ಹಿರೇಮಠ, ಸಿದ್ದಣ್ಣ ಶಿವನಗುತ್ತಿ, ಕಲ್ಲಪ್ಪ ಪಟ್ಟಣಶೆಟ್ಟಿ, ಎಫ್.ಆರ್. ಪಾಟೀಲ, ಬಿ.ಪಿ. ಹಳ್ಳೂರ, ಪತ್ನಿ ಶಾಂತಾದೇವಿ ಪಟ್ಟಣಶೆಟ್ಟಿ, ಕುಮಾರಗೌಡ ಜನಾಲಿ, ಎನ್.ಎಸ್. ಬೊಮ್ಮನಗೌಡರ, ಹೂವಪ್ಪ ರಾಠೋಡ, ಮುತ್ತಣ್ಣ ಕಳ್ಳಿಗುಡ್ಡ ಹಾಜರಿದ್ದರು.


ಮತಕ್ಷೇತ್ರದ ವಿವಿಧ ಗ್ರಾಮಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಆಗಮಿಸಿ ಸಿಹಿ ತಿನಿಸಿ ಜನ್ಮ ದಿನದ ಶುಭಾಶಯ ಕೋರಿದರು.