ಹನುಮ ಮಾಲಾ, ಧರ್ಮ ಜಾಗೃತಿ ಸಭೆ

ನವಲಗುಂದ,ಡಿ6 : ಮಾಲಾಧಾರಿಗಳು ಹಿಂದೂ ಧರ್ಮದ ರಕ್ಷಣೆಗಾಗಿ ಹನುಮಮಾಲೆ ಧರಿಸಬೇಕೇ ಹೊರತು ವೈಯಕ್ತಿಕ ದೈವಭಕ್ತಿಗಾಗಿ ಅಲ್ಲ.ಹನುಮಮಾಲೆ ದೇಶ, ಧರ್ಮ, ರಾಮಭಕ್ತಿ ಮೂಡಿಸುವುದೇ ಹೊರೆತು, ಧರ್ಮ, ದೇಶ ವಿರೋಧಿ ಕೆಲಸ ಮಾಡಲು ಅಲ್ಲ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.


ಪಟ್ಟಣದಲ್ಲಿರುವ ಶ್ರೀ ಲಾಲಗುಡಿ ಹನುಮನ ದೇವಸ್ಥಾನ ಆವರಣದಲ್ಲಿ ಹನುಮಾನ್ ಶಕ್ತಿ ಜಾಗರಣ ಸಮಿತಿಯವರು ಆಯೋಜಿಸಿದ್ದ “ಹನುಮ ಮಾಲಾ” ಹಾಗೂ ಧರ್ಮ ಜಾಗೃತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು`ಆಂಜನೇಯ ಆದಿಪುರುಷ ಧರ್ಮ ರಕ್ಷಕ ದುಷ್ಟ ಸಂಹಾರಕ ದೈವ ಪ್ರತೀಕ. ಮಾಲಾಧಾರಿಗಳು ಆಂಜನೇಯನನ್ನು ಸ್ಮರಿಸುವ ಜೊತೆಗೆ ಅವರ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದರು


ಅಯ್ಯಪ್ಪ ಗುರುಸ್ವಾಮಿಗಳಾದ ನಿಂಗಪ್ಪ ಮುಳ್ಳೂರ, ಗುರು ಬನ್ನಿಕೊಪ್ಪ, ಪ್ರತೀಕ್ ಕುಂದಗೋಳ, ಮಹಾಂತೇಶ ಕಲಾಲ, ವಿನಾಯಕ ದಾಡಿಬಾಯಿ ,ಐ ಡಿ.ಪ್ರಭು, ಅಪ್ಪಣ್ಣ ಹಳ್ಳದ, ಮಲ್ಲಿಕಾರ್ಜುನ ಸಂಗನನಗೌಡ್ರ, ಪವನ ಪಾಟೀಲ ಸೇರಿದಂತೆ ಹನುಮ ಮಾಲಾಧಾರಿಗಳು, ಭಕ್ತಾಧಿಗಳು ಪಾಲ್ಗೊಂಡಿದ್ದರು.