ಹನುಮಂತನೆAದರೆ ಅಗಾಧಶಕ್ತಿಯ ನಿಧಿ :ಹಾರಕೂಡ ಶ್ರೀ

ಸಂಜೆವಾಣಿ ವಾರ್ತೆ
ಬಸವಕಲ್ಯಾಣ: ಜ.೧೯:ಹನುಮಂತನೆAದರೆ ಅಗಾಧಶಕ್ತಿಯ ನಿಧಿಯಾಗಿದ್ದು, ಯಾರು ಅನುಮಾನ ದೇವರನ್ನು ಶ್ರದ್ಧೆಯಿಂದ ಆರಾಧಿಸುವವರೂ ಅವರಲ್ಲಿ ವಿಸ್ಮಯಕಾರಿ ಬೆಳವಣಿಗೆ ಕಂಡು ಬರುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
)ತಾಲೂಕಿನ ಹಾಮುನರದಲ್ಲಿ ಶ್ರೀ ವೀರ ಹನುಮಾನ ಮಂದಿರದ ಕಳಸಾರೋಹಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹಾಮುಲಾಲ ರವರು ದೊಡ್ಡ ಸಂತರಾಗಿದ್ದು ಅವರ ಧರ್ಮ ಕಾರ್ಯಗಳು ಇಂದಿಗೂ ಅನುಕರಣೀಯವಾಗಿವೆ.
ಹತ್ತಾರು ಕ್ಷೇತ್ರಗಳ ಮಾತ್ರೆಗಿಂತಲೂ ಒಬ್ಬ ಸಂತರ ಸಾನಿಧ್ಯ ಮಿಗಿಲಾಗಿರುತ್ತದೆ.
ಧರ್ಮದಲ್ಲಿ ಗುರುವಿನಲ್ಲಿ ನಂಬಿಗೆ, ಶ್ರದ್ಧೆ ಇದ್ದರೆ ಬದುಕಿನಲ್ಲಿ ಸಾಧನೆ ಫಲಿಸುತ್ತದೆ.
ಹಾಮುನಗರದ ಎಲ್ಲಾ ಜನತೆ ಒಂದಾಗಿ ಆಂಜನೇಯ ಸ್ವಾಮಿಯ ಸುಂದರ ಮಂದಿರ ನಿರ್ಮಿಸಿ, ಕಳಸಾರೋಹಣ ಮಾಡಿರುವುದು ಐಕ್ಯತೆಯ ಸಂಕೇತವಾಗಿದೆ.
ಈ ಗ್ರಾಮದ ಜನರು ಯಾವತ್ತೂ ಒಂದಾಗಿ ಬಾಳುವಂತಾಗಲಿ ಮತ್ತು ಸರ್ವರಿಗೂ ಮಂಗಳವಾಗಲೆAದು ಶುಭ ಹಾರೈಸಿದರು.
ಚವಡಾಪೂರ ಪೂಜ್ಯ ಶ್ರೀ ಮುರಾಹರಿ ಮಹಾರಾಜರು ಮಾತನಾಡಿದರು.
ಪೂಜ್ಯ ಶ್ರೀ ಲೋಕೇಶ ಮಹಾರಾಜರು ಬಂಜಾರಾ ತಾಂಡಾ, ಪೂಜ್ಯ ಶ್ರೀ ಅನಿಲ ಮಹಾರಾಜರು ಕಲಖೋರಾ,
ಪೂಜ್ಯ ಶಂಕರ ಆಯಿ
ಮೈಸಲಗಾತಾಂಡಾ, ಪೂಜ್ಯ ವಿಲಾಸ ಮಹಾರಾಜರು ಹತ್ಯಾಳ ತಾಂಡಾ, ಮಾನ್ಯ ಬಾಬು ಹೊನ್ನಾನಾಯಕ, ಅಧ್ಯಕ್ಷರು, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆ, ಭೀಮರಾಯನಗುಡಿ
ಶಿವರಾಜ ಪಾಟೀಲ ಆಯಾಸಪೂರ, ಮಲ್ಲಿನಾಥ ಹಿರೇಮಠ, ಡಾ.ಸರತೋಷ ಬಾಬು ಹೊನ್ನಾನಾಯಕ ಮಾಜಿ ಗ್ರಾ. ಪಂ.ಅಧ್ಯಕ್ಷರು, ಯಕಲೂರ,
ಶ್ರೀ ಗಿರಿಮಾಜಿ ಹರಿಲಾಲ ರಾಠೋಡ, ಶ್ರೀಮತಿ ಪ್ರಿಯಂಕಾ ಅಮಿತ ಚವ್ಹಾಣ,
ರಾಮಚಂದ್ರ ಗಂಗಾರಾಮ ರಾಠೋಡ, ಅರುಣಕುಮಾರ ಭೀಮಸಿಂಗ್ ರಾಠೋಡ, ಪ್ರೇಮಸಿಂಗ್ ಭೈರಾಮ ಚವ್ಹಾಣ ಕಾರಬಾರಿ ಪಾಲ್ಗೊಂಡಿದ್ದರು.
ಸಂಜೀವಕುಮಾರ ನಾಯಕ ಸ್ವಾಗತಿಸಿ ಪ್ರಾಸ್ತಾನಿಕವಾಗಿ ಮಾತನಾಡಿದರು.