
ನವಲಗುಂದ, ಮೇ19 : ಸರ್ಕಾರದ ಸೌಲಭ್ಯಗಳು ನಿಜವಾದ ಅರ್ಹರಿಗೆ ತಲುಪಿ ಅವರ ಬದುಕಿನಲ್ಲಿ ಹೊಸ ಭವಿಷ್ಯ ನಿರ್ಮಾಣವಾಗಲಿ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು
ಅವರು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ 2025-26ನೇ ಸಾಲಿನ ಉದ್ಯಮಶೀಲತಾ ಯೋಜನೆಯಡಿ ಖರೀದಿಸಲಾದ ವಾಹನವನ್ನು ಫಲಾನುಭವಿಗೆ ಹಸ್ತಾಂತರಿಸಿ ಮಾತನಾಡಿದರು.
ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮತ್ತು ಯುವಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರ ಜಾರಿಗೆ ತರುತ್ತಿರುವ ಯೋಜನೆಗಳು ಅನೇಕ ಕುಟುಂಬಗಳ ಬದುಕಿಗೆ ಹೊಸ ಆಶಾಕಿರಣವಾಗುತ್ತಿವೆ. ಉದ್ಯೋಗ ಕೇಳುವವರಿಗಿಂತ ಉದ್ಯೋಗ ಸೃಷ್ಟಿಸುವ ಯುವಕರು ಹೆಚ್ಚಾಗಬೇಕು ಎಂಬ ಆಶಯದೊಂದಿಗೆ ಇಂತಹ ಯೋಜನೆಗಳು ಸಮಾಜದ ಆರ್ಥಿಕ ಸಬಲೀಕರಣಕ್ಕೆ ಬಲ ತುಂಬುತ್ತಿವೆ ಎಂದರು.
ಬಂಗಾರೇಶ ಹಿರೇಮಠ, ಪ್ರಕಾಶ ಶಿಗ್ಲಿ, ಜೀವನ ಪವಾರ, ಅರುಣಕುಮಾರ ಮಜ್ಜಗಿ, ಮೋದಿನ ಶಿರೂರು, ಶಿವು ನಾಯ್ಕ, ನವೀನ ಹೊಸಗೌಡ್ರ, ಕರಿಯಪ್ಪ ಹರ್ಲಿ ಇತರರು ಇದ್ದರು






















