
ಚಿಂಚೋಳಿ :ಫೆ.೧೧:ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಚನೆಯ ಅಡಿಯಲ್ಲಿ ದೇಗಲಮಡಿ ಗ್ರಾಮದ ವಿಠ್ಠಲ್ ಮುದ್ನಾಳ್ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನು ಚಿಂಚೋಳಿಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಿ ದೇವಿ ಅವರು ವಿಠ್ಠಲ್ ಮುದ್ನಾಳ್, ಫಲಾನುಭವಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಅವರು ಮಾತನಾಡಿದರು ಚಿಂಚೋಳಿ ತಾಲೂಕಿನಲ್ಲಿ ಶ್ರೀ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಚನೆಯ ಅಡಿಯಲ್ಲಿ ಒಂದು ಸಾವಿರ ರೂಪಾಯಿಗಳು ಮಾಶಾಸನ ವಾತ್ಸಲ್ಯ ಕಿಟ್ ದಿನ ಬಳಕೆಯ ಸಾಮಗ್ರಿ ವಾತ್ಸಲ್ಯ ನಿಧಿ ವಾತ್ಸಲ್ಯ ಮನೆ ಹೀಗೆ ನಿರ್ಗತಿಕರಿಗೆ ಹಲವಾರು ಸೌಲಭ್ಯಗಳನ್ನು ನೀಡಿ ಅವರಿಗೆ ನೆಮ್ಮದಿ ಜೀವನ ರೂಪಿಸಲು ಯೋಜನೆ ಸಹಕಾರಿಯಾಗಿದೆ
ಎಂದರು ಸಮಾಜದಲ್ಲಿ ಹಿಂದುಳಿದವರಿಗೆ, ಅಶಕ್ತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆಯವರು ಹಲವಾರು ಸೇವಾ ಯೋಜನೆಗಳನ್ನು ರೂಪಿಸಿದ್ದಾರೆ,ಅವುಗಳ ಪೈಕಿ ವಾತ್ಸಲ್ಯ ಯೋಜನೆಯೂ ಒಂದು, ಬಡವರ ಪಾಲಿನ ಆಶಾಕಿರಣವಾಗುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯ ಈ ಕೆಲಸ ಶ್ಲಾಘನೀಯ ಯೆಂದು ಶುಭ ಹಾರೈಸಿದರು
ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಂಗಿ, ಪ್ರಾದೇಶಿಕಚೇರಿಯ ಜ್ಞಾನವಿಕಾಸ ಯೋಜನೆ ಅಧಿಕಾರಿಗಳಾದ ಜ್ಯೋತಿ ಜೋಳದ, ಚಿಂಚೋಳಿ ತಾಲೂಕಿನ ಯೋಜನಾಧಿಕಾರಿಗಳಾದ ಶಕುಂತಲಾ, ಜಿಲ್ಲಾ ಜನಜಾಗೃತಿಯ ಉಪಾಧ್ಯಕ್ಷರಾದ ನರಸಮ್ಮ ಅವಂಟಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಕಾಶಿರಾಮ್ ತಳವಾರ, ಶರಣಗೌಡ, ಆಂಜನೇಯ, ಅನೇಕ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಸಿಬ್ಬಂದಿಗಳು
ಕಾರ್ಯಕ್ರಮದಲ್ಲಿ ಇದ್ದರು



























