ವಾಷಿಂಗ್ಟನ್,ಅ.೪- ಇಸ್ರೇಲ್- ಗಾಜಾ ನಡುವೆ ಯುದ್ಧ ಕೊನೆಗೊಳಿಸುವುದು, ಒತ್ತೆಯಾಳುಗಳ ಬಿಡುಗಡೆ, ನೆರವು ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಹಮಾಸ್ ಬಂಡುಕೋರರು ಒಪ್ಪಿಗೆ ಸೂಚಿಸಿದ್ದಾರೆ.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಮುಂದಿಟ್ಟಿರುವ ಬೇಡಿಕೆ ಈಡೇರಿಕೆಗೆ ಸಮ್ಮತಿ ನೀಡಲಾಗಿದ್ದು ಪ್ಯಾಲಿಸ್ಟೈನ್ ಉಗ್ರರರು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ. ಇನ್ನೂ ಇಸ್ರೇಲ್ ಒಪ್ಪಂದಕ್ಕೆ ಪ್ರತಿಕ್ರಿಯೆ ನೀಡಬೇಕಾಗಿದೆ.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವನೆಯಲ್ಲಿರುವ ವಿನಿಮಯ ಸೂತ್ರದ ಪ್ರಕಾರ, ಒಪ್ಪಂದ ವಿನಿಮಯ ಕಾರ್ಯಗತಗೊಳಿಸಲು ಅಗತ್ಯವಾದ ಕ್ಷೇತ್ರ ಪರಿಸ್ಥಿತಿಗಳೊಂದಿಗೆ, ಗಾಜಾದಲ್ಲಿ ಜೀವಂತ ಮತ್ತು ಸತ್ತ ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ.
ಒಪ್ಪಂದವನ್ನು ಇಸ್ರೇಲ್ ಸಾರ್ವಜನಿಕವಾಗಿ ಒಪ್ಪಿಕೊಂಡ ೭೨ ಗಂಟೆಗಳ ಒಳಗೆ ಎಲ್ಲಾ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಲಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ
ಇಸ್ರೇಲ್‌ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ೨೫೦ ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಮತ್ತು ಎಲ್ಲಾ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡಂತೆ ೨೦೨೩ರ ಅಕ್ಟೋಬರ್ ೭ ರಿಂದ ಬಂಧಿಸಲ್ಪಟ್ಟ ೧,೭೦೦ ಗಾಜಾ ನಿವಾಸಿಗಳನ್ನು ಬಿಡುಗಡೆ ಮಾಡಲು ಇಸ್ರೇಲ್ ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ
ಇಸ್ರೇಲ್‌ನ ೧೫ ಸತ್ತ ಗಾಜಾ ನಿವಾಸಿಗಳ ಅವಶೇಷಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ
ವೈಮಾನಿಕ ಮತ್ತು ಫಿರಂಗಿ ಬಾಂಬ್ ದಾಳಿ ಸೇರಿದಂತೆ ಇಸ್ರೇಲ್‌ನ ಮಿಲಿಟರಿ ದಾಳಿ ಸ್ಥಗಿತಗೊಳಿಸಲಾಗುವುದು ಮತ್ತು ಸೇನೆಯ ಹಂತ ಹಂತದ ವಾಪಸಾತಿಗೆ ಷರತ್ತುಗಳನ್ನು ಪೂರೈಸುವವರೆಗೆ ಯುದ್ಧ ಮಾರ್ಗಗಳು ಸ್ಥಗಿತಗೊಳ್ಳುತ್ತವೆ” ಎಂದು ಅದು ತಿಳಿಸಿದ್ದಾರೆ
ಜನವರಿ ೧೯ ರ ಒಪ್ಪಂದಕ್ಕೆ ಅನುಗುಣವಾಗಿ ಪ್ರಮಾಣದಲ್ಲಿ ನೆರವನ್ನು ತಕ್ಷಣವೇ ಗಾಜಾಗೆ ಕಳುಹಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ
ಮೂಲಸೌಕರ್ಯ, ಆಸ್ಪತ್ರೆಗಳು ಮತ್ತು ಬೇಕರಿಗಳ ಪುನರ್ವಸತಿ ಮತ್ತು ಅವಶೇಷಗ ತೆಗೆದುಹಾಕಲು ಮತ್ತು ರಸ್ತೆಗಳನ್ನು ತೆರೆಯಲು ಅಗತ್ಯವಾದ ಉಪಕರಣಗಳ ಪ್ರವೇಶ ಸಹ ಒಳಗೊಂಡಿರುತ್ತದೆ. ಯೋಜನೆಯಡಿಯಲ್ಲಿ ವಿಶ್ವಸಂಸ್ಥೆ, ರೆಡ್ ಕ್ರೆಸೆಂಟ್ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಮೂಲಕ ನೆರವು ಮುಂದುವರಿಯುತ್ತದೆ.
ಗಾಜಾ ಮೇಲೆ ಬಾಂಬ್ ದಾಳಿ ನಿಲ್ಲಿಸಿ
ಹಮಾಸ್ ಬಂಡುಕೋರರು ತನ್ನ ವಶದಲ್ಲಿರುವ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ ಹೀಗಾಗಿ ಗಾಜಾದ ಮೇಲೆ ಬಾಂಬ್ ದಾಳಿ ಮಾಡುವುದನ್ನು ನಿಲ್ಲಿಸಿ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರಿಗೆ ಸಲಹೆ ನೀಡಿದ್ದಾರೆ.
೨೦೨೩ರ ಅಕ್ಟೋಬರ್ ೭ರಿಂದ ನಡೆಯುತ್ತಿರುವ ಇಸ್ರೇಲ್ – ಹಮಾಸ್ ಬಂಡುಕೋರರ ನಡುವಿನ ಯುದ್ದ ತಾರ್ಕಿಕ ಅಂತ್ಯ ಕಾಣುವ ಘಟ್ಟಕ್ಕೆ ಬಂದಿದೆ. ಇದಕ್ಕೆ ಇಸ್ರೇಲ್ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಾಗಿದೆ
ಹಮಾಸ್ ಬಂಡುಕೋರರ ಜೊತೆ ಮಾತುಕತೆ ನಡೆಸಿದ ನಂತರ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಸಲಹೆ ನೀಡಿದ್ದು. ಒಪ್ಪಂದದ ಪ್ರಕಾರ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಸಮ್ಮತಿ ಸೂಚಿಸಿದೆ ಎಂದಿದ್ಧಾರೆ
ಇಸ್ರೇಲ್‌ಗೆ ಸೇರಿದ ಜೀವಂತ ಮತ್ತು ಸತ್ತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸು ಬಂಡುಕೋರರು ಒಪ್ಪಿಕೊಂಡಿದ್ದಾರೆ. ಗಾಜಾದ ಮೇಲಿನ ಇಸ್ರೇಲ್ ಯುದ್ಧ ಕೊನೆಗೊಳಿಸಲು ಮತ್ತು ಇಸ್ರೇಲಿ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಎಲ್ಲಾ ಸೆರೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ.
ಈ ಒಪ್ಪಂದದ ವಿವರಗಳನ್ನು ಚರ್ಚಿಸಲು ಮಧ್ಯವರ್ತಿಗಳ ಮೂಲಕ ತಕ್ಷಣ ಮಾತುಕತೆಗೆ ಪ್ರವೇಶಿಸಲು ಚಳುವಳಿ ತನ್ನ ಸಿದ್ಧತೆ ದೃಢಪಡಿಸುತ್ತದೆ” ಎಂದು ಹಮಾಸ್ ಹೇಳಿಕೆಯಲ್ಲಿ ತಿಳಿಸಿದೆ.
ಮೋದಿ ಶ್ಲಾಘನೆ
ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಬಂಡುಕೋರರು ಒಪ್ಪಿಕೊಂಡಿರುವುದು ಮಹತ್ವದ ವಿಷಯ, ಈ ನಿರ್ಧಾರದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾತ್ರ ಹಿರಿದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ
ಅಮೇರಿಕಾ ಅಧ್ಯಕ್ಷರ ಈ ಕ್ರಮ “ನಿರ್ಣಾಯಕ ಪ್ರಗತಿ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮಧ್ಯಪ್ರಾಚ್ಯದಲ್ಲಿ ಶಾಶ್ವತ ಮತ್ತು ನ್ಯಾಯಯುತ ಶಾಂತಿಗಾಗಿ ಎಲ್ಲಾ ಪ್ರಯತ್ನಗಳಿಗೆ ಭಾರತದ ಬೆಂಬಲ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗಾಜಾದಲ್ಲಿ ಶಾಂತಿ ಪ್ರಯತ್ನಗಳು ಗಮನಾರ್ಹ ಪ್ರಗತಿ ಸಾದಿಸುತ್ತಿದ್ದು ಈ ನಿಟ್ಟಿನಲ್ಲಿ ಅಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಾತ್ರ ಹಿರಿದಾಗಿದ್ದು ಅವರ ನಾಯಕತ್ವಕ್ಕೆ ಭಾರತ ತನ್ನ ಬೆಂಬಲ ವ್ಯಕ್ತಪಡಿಸಿದೆ
“ಶಾಶ್ವತ ಮತ್ತು ನ್ಯಾಯಯುತ ಶಾಂತಿಗಾಗಿ ಎಲ್ಲಾ ಪ್ರಯತ್ನಗಳನ್ನು ಭಾರತ ಸದಾ ಬೆಂಬಲಿಸಲಿದೆ.ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಚೌಕಟ್ಟಿನ ಅಡಿಯಲ್ಲಿ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿರುವುದು ಮಹತ್ವದ ವಿಷಯ ಎಂದಿದ್ದಾರೆ
ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮುಂದಾಗಿರುವುದು ದೀರ್ಘಕಾಲದ ಸಂಘರ್ಷದಲ್ಲಿ ಪ್ರಮುಖ ಬೆಳವಣಿಗೆ ಗುರುತಿಸಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ ಪ್ರಸ್ತಾವಿತ ಶಾಂತಿ ಯೋಜನೆಯ ಭಾಗವಾಗಿ ಎಲ್ಲಾ ಇಸ್ರೇಲ್ ಒತ್ತೆಯಾಳು ಅವರು ಸತ್ತವರಾಗಿರಲಿ ಅಥವಾ ಜೀವಂತವಾಗಿರಲಿ, ಮುಕ್ತಗೊಳಿಸುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದ್ದಾರೆ
ಗಾಜಾ ಆಡಳಿತದಲ್ಲಿನ ಬದಲಾವಣೆಗೆ ಹಮಾಸ್ ಬಂಡುಕೋರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ವಿಷಯದಲ್ಲಿ ಮುಕ್ತವಾಗಿರುವುದಾಗಿ ಹೇಳಿದೆ, ಇದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಯಕತ್ವಕ್ಕೆ ಸಿಕ್ಕ ಗೆಲವು ಎಂದು ಹೇಳಿದ್ದಾರೆ
ಅರಬ್, ಇಸ್ಲಾಮಿಕ್ ಮತ್ತು ಅಂತರರಾಷ್ಟ್ರೀಯ ಪಾಲುದಾರರ ಬೆಂಬಲದೊಂದಿಗೆ ಶಾಂತಿ ಪ್ರಕ್ರಿಯೆ ಮುನ್ನಡೆಸುವಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಾತ್ರಕ್ಕಾಗಿ ಹಮಾಸ್ ಸಾರ್ವಜನಿಕವಾಗಿ ಧನ್ಯವಾದ ಸಲ್ಲಿಸಿದೆ


























