
ವಿಜಯಪುರ,ಜು.೩:ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವ ವಿದ್ಯಾಲಯದಲ್ಲಿ ವಚನ ಪಿತಾಮಹ ಡಾ.ಫ ಗು.ಹಳಕಟ್ಟಿ ಅವರ ೧೪೫ನೇ ಜನ್ಮ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರು ಹಳಕಟ್ಟಿಯವರ ಭಾವಚಿತ್ರಕ್ಕೆ ಪೂಜೆ ಮಾಡಿ,ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡೀನ ಅಲೈಡ ಹೆಲ್ತಸೈನ್ಸ, ಡಾ.ಎಸ್.ವಿ.ಪಾಟೀಲ, ವೈದ್ಯಕೀಯ ವಿಭಾಗದ ಡೀನ ಡಾ.ತೇಜಸ್ವಿನಿ ವಲ್ಲಭ, ಡಾ. ಎಸ್.ಎಸ್. ಕಲ್ಯಾಣಶೆಟ್ಟರ, ಪ್ರವೇಶಾಧಿಕಾರಿ ಎಂ.ಎಸ್. ಇಜೇರಿ, ಹಣಕಾಸು ಅಧಿಕಾರಿ, ಬಿ.ಎಸ್. ಪಾಟೀಲ, ಡೆಪ್ಯೂಟಿ ರಜಿಸ್ಟ್ರಾರ, ಸತೀಶ ಪಾಟೀಲ, ಸಹಾಯಕ ರಜಿಸ್ಟ್ರಾರ, ಡಾ. ಶ್ರೀಧರ ಬಗಲಿ, ಸಹಾಯಕ ಕಾನೂನು ಅಧಿಕಾರಿ ಆಯ್.ಬಿ. ಮಠಪತಿ ಹಾಗೂ ವಿಶ್ವವಿದ್ಯಾಲಯ ಸಿಬ್ಬಂದಿ ಉಪಸ್ಥಿತರಿದ್ದರು.