ಗುರುರಾಯರ ಉತ್ತರಾರಾಧನೆ

ತಾಳಿಕೋಟೆ:ಅ.೧೩: ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಶ್ರೀ ಗುರುಸಾರ್ವಭೌಮ ರಾಘವೇಂದ್ರ ಮಹಾಸ್ವಾಮಿಗಳ ೫೧ ನೇ ಆರಾಧನಾ ಮಹೋತ್ಸವವು ಮಂಗಳವಾರರAದು ಉತ್ತರಾರಾಧನೆಯು ಭಕ್ತಿಭಾವದೊಂದಿಗೆ ಜರುಗಿತು.
ಪ್ರಾತಃಕಾಲ ೫ ಘಂಟೆಯಿAದ ೬ ಘಂಟೆಯವರೆಗೆ ಸುಪ್ರಭಾತ ೭ ಘಂಟೆಯಿAದ ೮ ಘಂಟೆಯವರೆಗೆ ನಗರೇಶ್ವರ ಮಹಾಮೂರ್ತಿಗೆ ರುದ್ರಾಭಿಷೇಕ, ಅಲಂಕಾರ, ಪುಷ್ಪಾರ್ಚನೆ, ಮಹಾಮಂಗಳಾರತಿ ಜರುಗಿತು. ೮ ಘಂಟೆಯಿAದ ೧೦ ಘಂಟೆಯವರೆಗೆ ಶ್ರೀಗುರುರಾಯರ ಪಂಚಾಮೃತ ಅಭಿಷೇಕ ಜರುಗಿತಲ್ಲದೇ ಶ್ರೀ ಗುರುರಾಯರ ಅಷ್ಟೋತ್ತರ ರಥಪೂಜೆ ಮದ್ಯಾಹ್ನ ೧ ಘಂಟೆಯಿAದ ಕನಕಾಭಿಷೇಕ, ತುಳಸಿ ಅರ್ಚನೆ, ಹಸ್ತೋದಕ, ಮಹಾಮಂಗಳಾರತಿ, ತೀರ್ಥಪ್ರಸಾದ ಜರುಗಿತು.
ನಂತರ ಸಾಯಂಕಾಲ ೫ ಗಂಟೆಗೆ ಧಾರವಾಡದ ರಾಜೇಂದ್ರಸಿAಗ್ ಭಾತಕಂಡೆ ಇವರಿಂದ ತಯಾರಿಸಲ್ಪಟ್ಟ ರಥದಲ್ಲಿ ಶ್ರೀ ಗುರು ಸಾರ್ವಭೌಮರ ಭಾವಚಿತ್ರದ ಮೆರವಣಿಗೆಯು ಶ್ರೀ ನಗರೇಶ್ವರ ದೇವಸ್ಥಾನದಿಂದ ಸಕಲ ಸನ್ಮಂಗಳ ವಾಧ್ಯ ವೈಭವಗಳೊಂದಿಗೆ ಶ್ರೀ ವಿಠ್ಠಲ ಮಂದಿರಕ್ಕೆ ಹೋಗಿ ಪುನಃ ಶ್ರೀ ನಗರೇಶ್ವರ ದೇವಾಲಯಕ್ಕೆ ಆಗಮಿಸಿತು.
ರಾತ್ರಿ ೮ ಗಂಟೆಯಿAದ ತಾರತಮ್ಯ ಭಜನೆ ಸಂಗೀತ ಕಾರ್ಯಕ್ರಮಗಳು ಜರುಗಿದವು. ಈ ಸಂಗೀತ ಕಾರ್ಯಕ್ರಮವನ್ನು ನಿವೃತ್ತ ಸಂಗೀತ ಶಿಕ್ಷಕಿ ಶ್ರೀಮತಿ ವಿಜಯಾ ಅಚಲಕರ, ಶ್ರೀಮತಿ ಜ್ಯೋತಿ ಗಂಪಾ, ಶ್ರೀಮತಿ ಪ್ರೇಮಾ ಶೆಟ್ಟಿ, ಶ್ರೀಮತಿ ಶೋಭಾ ಅಗಡಿ, ಶ್ರೀಮತಿ ರಾಜಲಕ್ಷಿö್ಮÃ ಮಾನ್ವಿ ಮೊದಲಾದವರು ನಡೆಸಿಕೊಟ್ಟರು.
ಈ ಮಹಾಪೂಜಾ ಕಾರ್ಯಕ್ರಮವನ್ನು ವೇ|| ವಸಂತಭಟ್ ಜೋಷಿ, ಶ್ರೀಧರ ಗ್ರಾಂಪುರೋಹಿತ, ವೆಂಕಟೇಶ ಗ್ರಾಂಪುರೋಹಿತ, ಗುಂಡಭಟ್ ಜೋಷಿ, ಮುರುಳೀಧರ ಜೋಷಿ, ರವಿ ಜೋಷಿ, ಸಂಜೀವ ಗ್ರಾಂಪುರೋಹಿತ, ಅಕ್ಷಯ ಜೋಷಿ, ಅವಿನಾಶ ಜೋಷಿ, ಅಭಿಷೇಕ ಜೋಷಿ, ಜಯತೀರ್ಥ ಆಚಾರ್ಯ, ಸಮರ್ಥ ಜೋಷಿ, ಆನಂದ ಕುಲಕರ್ಣಿ, ಹಾಗೂ ನಗರೇಶ್ವರ ದೇವಸ್ಥಾನದ ಅರ್ಚಕರಾದ ವೇ|| ವೆಂಕಟೇಶ ಭಟ್, ಶ್ರೀನಿವಾಸ ಜೋಷಿ, ವೇ.ಲಿಂಗೋಜಿರಾವ್ ಕಾಮನಟಗಿ, ಅಮೋಘ ಕುಲಕರ್ಣಿ, ವಿಜಯ ಕುಳಗೇರಿ, ಅವರು ನೆರವೇರಿಸಿಕೊಟ್ಟರು.
ಈ ಪೂಜಾ ಕಾರ್ಯಕ್ರಮದ ನೇತೃತ್ವವನ್ನು ಡಾ|| ಎನ್.ಎಲ್. ಶೆಟ್ಟಿ, ಕೃಷ್ಣಯ್ಯ ಶೆಟ್ಟಿ, ಶ್ರೀಕಾಂತ ಶೆಟ್ಟಿ, ಡಿ.ಎಸ್. ಹೆಬಸೂರ, ವಾಸುದೇವ ಹೆಬಸೂರ, ಮಂಜು ಶೆಟ್ಟಿ, ಅಶೋಕ ಶೆಟ್ಟಿ, ಪ್ರಶಾಂತ ಜನಾದ್ರಿ, ಶ್ರೀಕಾಂತ ಶೆಟ್ಟಿ, ವಿನಯ ಶೆಟ್ಟಿ, ಸತ್ಯನಾರಾಯಣ ತಾಳಪಲ್ಲೆ, ಮುರುಳೀಧರ ಮಾನ್ವಿ ಭೀಮಣ್ಣ ಅಗಡಿ, ವೆಂಕಟೇಶ ತಾಳಪಲ್ಲೆ, ರವಿ ತಾಳಪಲ್ಲೆ, ಅರುಣ ಕನಕಗಿರಿ, ವೆಂಕಣ್ಣ ತಾಳಪಲ್ಲೆ, ಪ್ರಹ್ಲಾದ ಮಾನ್ವಿ, ಗುರುರಾಜ ಅಗಡಿ, ಬದರಿನಾಥ ಕನಕಗಿರಿ, ವಿದ್ಯಾಧರ ಗೊಟಗುಣಕಿ, ಕೃಷ್ಣಾ ತಾಳಪಲ್ಲೆ, ಸಂಗು ಶೆಟ್ಟಿ, ಗುರುರಾಜ ತಾಳಪಲ್ಲೆ, ಮಲ್ಲು ಗೊಟಗುಣಕಿ, ಕೃಷ್ಣಾ ಕನಕಗಿರಿ, ಗುರುರಾಜ ಕನಕಗಿರಿ, ಮುರುಳೀಧರ ಮಾನ್ವಿ, ಸತ್ಯನಾರಾಯಣ ಕನಕಗಿರಿ, ರಾಘವೇಂದ್ರ ತಾಳಪಲ್ಲೆ, ಗೋವಿಂದ ಶೆಟ್ಟಿ, ರಾಜು ತಾಳಪಲ್ಲೆ, ಫವನ ತಾಳಪಲ್ಲೆ, ಮೊದಲಾದವರು ವಹಿಸಿದ್ದರು.