ಗುರುನಾನಕ ಜಯಂತಿ ಆಚರಣೆ

ಕಲಬುರಗಿ: ನ.5:ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ್ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಗುರುನಾನಕ ಜಯಂತಿ ಆಚರಿಸಲಾಯಿತು.
ಪ್ರಾಂಶುಪಾಲರಾದ ಡಾ. ಭುರ್ಲಿ ಪ್ರಹ್ಲಾದ ಅವರು ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿದರು. ಕಾಲೇಜಿನ ಉಪಪ್ರಾಚಾರ್ಯರಾದ ಕೇದಾರ ದೀಕ್ಷಿತ್, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಪ್ರಕಾಶ ಚವ್ಹಾಣ, ಉಪನ್ಯಾಸಕರು ಮಳೇಂದ್ರ ಹಿರೇಮಠ, ವೈಶಾಲಿ ದೇಶಪಾಂಡೆ, ಅಶ್ವಿನಿ ಗುತ್ತೇದಾರ, ಶಾಂತೇಶ್ ಹುಂಡೇಕಾರ್, ರಾಜು ಗುತ್ತೇದಾರ, ಎ. ಚಂದ್ರಭಾನು, ಕೆ. ಮಹೇಶ, ಎನ್. ಉಪೇಂದ್ರ, ಸಿಬ್ಬಂದಿಬಳಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.