
ಕಮಲನಗರÀ:ನ.೬: ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ ದೇವ ಅವರ ೫೫೬ನೇ ಜಯಂತಿಯನ್ನು ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಶ್ರದ್ಧಾ ಭಕ್ತಿ ಹಾಗೂ ಸಡಗರದಿಂದ ಆಚರಿಸಲಾಯಿತು.
ಶಾಲೆ ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಅವರು ಗುರುನಾನಕ ದೇವಜೀ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾಲಾರ್ಪಣೆ ಮಾಡುವ ಮೂಲಕ ಗೌರವಿಸಿದ ನಂತರ ಮಾತನಾಡಿದರು.
ವಿಜ್ಞಾನ ಹೆಚ್‌ಓಡಿ ಶೀತಲ ಹಂಗರಗೆ ಅವರು ಗುರುಗ್ರಂಥ ಸಾಹಿಬ್ ಪಠಣ ಮಹತ್ವ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜವೀರ ಸಿಂಗ್, ಪ್ರಥ್ವಿರಾಜ ಸಿಂಗ್, ಶಿಕ್ಷಕಿ ಶ್ರೀದೇವಿ ಸೋನಕಾಂಬಳೆ, ಸಂಗೀತಾ ಕಾಂಬಳೆ, ರಾಜಶ್ರೀ, ದೀಪಮಾಲಾ, ಅಂಬಿಕಾ, ಅಂಜಲಿ ಹಾಗೂ ಮಕ್ಕಳು ಪಾಲ್ಗೊಂಡಿದ್ದರು.






















