ಗುರು ಮಾನಪ್ಪ ಅಜ್ಜನ ಆರಾಧಾನಾ ಸಮಾರಂಭ ಇಂದು

ಸೈದಾಪುರ:ನ.೨೯:ಇಲ್ಲಿಗೆ ಸಮೀಪದ ಕಾಳೆಬೆಳಗುಂದಿಯಲ್ಲಿ ಇಂದು ದಿ೨೯ ಮಾರ್ಗಶಿರ ಶುದ್ಧ ನವಮಿಯ ದಿನದಂದು ಶ್ರೀ ಗುರು ಮಾನಪ್ಪ ಅಜ್ಜನ ಗದ್ದುಗೆಗೆ ಅಭಿಷೇಕ ಪೂಜೆ ಆರಾಧನಾ ಸಮಾರಂಭ ಹಾಗೂ ಧರ್ಮಸಭೆಗಳು ಶ್ರೀಯುತ ಉತ್ತಪ್ಪ ತಾತನವರು ಮತ್ತು ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ.
ಪುರವಂತರ ಸೇವೆ ಹಾಗೂ ಮಾನಪ್ಪ ಅಜ್ಜನ ಗದ್ದುಗೆಗೆ ಮಹಾರುದ್ರಾಭಿಷೇಕ ಹೋಮ ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ನಂತರ ಆಶ್ರಮದ ನೂತನ ಉತ್ತರಾಧಿಕಾರಿ ಈಶ್ವರ ವಿಶ್ವಕರ್ಮ ರವರಿಗೆ ಪೀಠಾರೋಹಣ ಹಾಗೂ ಶ್ರೀ ಮಠದ ವತಿಯಿಂದ ಸಸಿಗಳ ವಿತರಣೆ ಹಾಗೂ ಧರ್ಮಸಭೆ ಕಾರ್ಯಕ್ರಮ. ಸಂಜೆ ಕಾಳೆಬೆಳಗುಂದಿಯ ಸುತ್ತ ಮುತ್ತಲಿನ ಗ್ರಾಮಗಳಿಂದ ಭಜನಾ ಕಾರ್ಯಕ್ರಮ ನಡೆಯವುದು. ಈ ಕಾರ್ಯಕ್ರಮಗಳಲ್ಲಿ ಸುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಗುರು ಮಾನಪ್ಪ ಅಜ್ಜನ ಕೃಪೆಗೆ ಪಾತ್ರರಾಗೋಣ ಎಂದು ಭಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.