
ಬೀದರ:ಜು.೨: ೧೯೮೦ರ ದಶಕದಲ್ಲಿ ಪಟ್ಟಣಕ್ಕೆ ಪಂಚರಾತ್ರಿ ಹಳ್ಳಿಗೆ ಏಕರಾತ್ರಿ ಎಂಬAತೆ ಕಾಲಿಗೆ ಚಕ್ರ ಕಟ್ಟಿಕೊಂಡು ಹಗಲಿರುಳು ಬಸವ ತತ್ವವನ್ನು ಪಸರಿಸಿದ ಗುರುಲಿಂಗಾನAದರು ಪ್ರವಚನ ಪಿತಾಮಹ ಎನಿಸಿಕೊಂಡಿದ್ದಾರೆ ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ನಗರದ ಬಸವ ಮಂಟಪದಲ್ಲಿ ರಾಷ್ಟಿçÃಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ ಮತ್ತು ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ಆಯೋಜಿಸಿದ ಪ್ರವಚನ ಪಿತಾಮಹ ಲಿಂಗಾನAದ ಸ್ವಾಮೀಜಿ ಹಾಗೂ ಫ.ಗು.ಹಳಕಟ್ಟಿಯವರ ಸಂಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಬಸವಾದಿ ಶರಣರ ವಚನ ಸಾಹಿತ್ಯದ ಪುಸ್ತಕಗಳನ್ನು ಪ್ರಕಟಿಸಿ, ಮನೆಮನೆಗೆ ತೆರಳಿ ಬಸವಾದಿ ಶರಣರ ತ್ಯಾಗ, ಸಾಧನೆ, ಪ್ರಚಾರ ಮತ್ತು ಪ್ರಸಾರದ ಬಗ್ಗೆ ಲಿಂಗಾನAದ ಶ್ರೀಗಳು ತಿಳಿಸಿಕೊಟ್ಟು, ಬಸವ ತತ್ವದ ಅರುಣೋದಯವನ್ನು ಬಾನ ದಿಗಂತಕ್ಕೆ ಏರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ನೇತೃತ್ವ ವಹಿಸಿದ್ದ ಬಸವ ಮಂಟಪದ ಪೂಜ್ಯ ಮಾತೆ ಸತ್ಯಾದೇವಿ ಮಾತನಾಡಿ ಲಿಂಗಾನAದ ಶ್ರೀಗಳು ಕಂಚಿನ ಕಂಠದ ಪ್ರವಚನಕಾರರಾಗಿದ್ದರು. ಲಕ್ಷಾಂತರ ಜನ ಶರಣರನ್ನು ಸಂಸ್ಕಾರ ನೀಡಿದ ಅವರು ಶರಣರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.
ಹಿರಿಯ ಶರಣಜೀವಿ ಬಸವರಾಜ ಸಂಗಮದ್ ಮಾತನಾಡಿ ಲಿಂಗಾನAದ ಶ್ರೀಗಳಿಗೆ ಎಷ್ಟೇ ಕಷ್ಟ ಕಾರ್ಪಣ್ಯಗಳು ಬಂದರೂ ಬಸವ ತತ್ವವನ್ನು ಪಸರಿಸುವ ಕಾರ್ಯ ಅವರು ನಿಲ್ಲಿಸಲಿಲ್ಲ. ಪ್ರವಚನ ಮಾಡುತ್ತಲೇ ಹಿರಿಯೂರಿನಲ್ಲಿ ಲಿಂಗೈಕ್ಯರಾದ ಅವರು ಬಸವ ತತ್ವ ಪ್ರಚಾರಗೈಯುವ ಎಲ್ಲಾ ಪೂಜ್ಯರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಕಾಶಿನಾಥ ಪಾಟೀಲ, ರವಿಕಾಂತ ಬಿರಾದಾರ, ಬಸವಂತರಾವ ಬಿರಾದಾರ, ಮಲ್ಲಿಕಾರ್ಜುನ ಶಾಪುರ, ಮಲ್ಲಿಕಾರ್ಜುನ ಬುಕ್ಕಾ, ಗುರುನಾಥ ನಿಡಗುಂದಿ, ಗಣಪತಿ ಬಿರಾದಾರ, ಸತೀಶ ಪಾಟೀಲ ಹಾರೂರಗೇರಿ, ಸಿದ್ಧವೀರ ಸಂಗಮದ್, ಬಸವಕುಮಾರ ಚಟ್ನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.