ಗುರು ಕಾರಣ್ಯವೆಂಬುದು ಅದ್ಭುತ ಧರ್ಮ ನಿಧಿ : ಹಾರಕೂಡ ಶ್ರೀ

ಬಸವಕಲ್ಯಾಣ: ಜ.10:ಗುರು ಕಾರುಣ್ಯವೆಂಬುವುದು ಯಾವತ್ತೂ ಬತ್ತದ ಅದ್ಭುತವಾದ ಧರ್ಮ ನಿಧಿಯಾಗಿದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಬಗದೂರಿ ಗ್ರಾಮಸ್ಥರಿಂದ ಆಯೋಸಿದ ಗುರುವಂದನೆ ಹಾಗೂ 912ನೇ ತುಲಾಭಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಕಾರುಣ್ಯ ಮೂರ್ತಿ ಗುರುವಿನ ಸಾನಿಧ್ಯದಿಂದ ಪ್ರಭಾವಿತರಾದವರ ಬದುಕು ಧರ್ಮ ಶ್ರೀಮಂತಿಕೆಯಿಂದ ತುಂಬಿರುತ್ತದೆ.
ಹೊರಗೂ ಒಳಗೂ ಸಮತೂಕದ ಜೀವನ ಸಾಗಿಸಲು ಗುರು ಮಾರ್ಗದರ್ಶನ ಅವಶ್ಯಕತೆ.
ಅಂತರಚಕ್ಷು ಜಾಗೃತೆಗೊಂಡಾಗ ಅಧ್ಯಾತ್ಮದ ಅನುಸಂಧಾನ ಉಂಟಾಗಿ ಬದುಕಿನಲ್ಲಿ ಭಗವದಾನಂದ ಅನುಭವಿಸಲು ಸಾಧ್ಯವಾಗುತ್ತದೆ ಎಂದು ನುಡಿದರು.
ಎಲ್ಲಮ್ಮ ದೇವಿಯ ಆವಾಸಸ್ಥಾನವಾದ ಬಗದೂರಿ ಗ್ರಾಮದ ಜನತೆ ಭಕ್ತಿಯ ತೋರಣ ಹೆಣೆದು ಹಾರಕೂಡ ಪೀಠದ ಮೇಲಿನ ತಮ್ಮ ಶ್ರದ್ಧೆ ಅನುಕರಣೆಯವಾಗಿದ್ದು ಸರ್ವರಿಗೂ ಸೌಖ್ಯವಾಗಲೆಂದು ಶುಭ ಹಾರೈಸಿದರು.
ವಿಲಾಸ ಪಾಟೀಲ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈಶ್ವರ ಬಿರಾದಾರ, ಉದಯಕುಮಾರ ಮೂಲಗೆ, ವೆಂಕಟರಾವ ಬಿರಾದಾರ, ಮಲ್ಲಿಕಾರ್ಜುನ ಪಾಟೀಲ, ಜೀತೇಂದ್ರ ಮಂದಿರಕರ್, ಭೀಮಷಾ ಮಂದಿರಕರ್, ಅನ್ನಪೂರ್ಣ ಬಿರಾದರ ಪಾಲ್ಗೊಂಡಿದ್ದರು.
ಕಾರ್ತಿಕ ಸ್ವಾಮಿ ಯಲ್ಲದಗುಂಡಿ ಪ್ರಾರ್ಥನ ಗೀತೆ ಹಾಡಿದರು.
ಚನ್ನಬಸಪ್ಪ ಮೀನ ಹಾಬಳ ಹಾಗೂ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯವರು ಸಂಗೀತ ಸೇವೆ ಸಲ್ಲಿಸಿದರು.
ಮಹಾದೇವ ಪೂಜಾರಿ ಸ್ವಾಗತಿಸಿ, ನಿರೂಪಣೆ ಮಾಡಿದರು.
ಸಮಸ್ತ ಬಗದೂರಿ ಗ್ರಾಮದ ಭಕ್ತರು ಹಾರಕೂಡ ಶ್ರೀಗಳ 912ನೇ ತುಲಾಭಾರ ಮಾಡಿ ಗುರುವಂದನೆ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಮೊದಲು ಗ್ರಾಮದ ಹೊರವಲಯದಿಂದ ವೇದಿಕೆಯ ವರೆಗೆ ಅಲಂಕೃತ ಸಾರೋಟಿನಲ್ಲಿ ಹಾರಕೂಡ ಶ್ರೀಗಳ ಅದ್ದೂರಿ ಮೆರವಣಿಗೆ ಜರುಗಿತು.