ರಾಜ್ಯಾದ್ಯಂತ ಜೂ 13 ರಿಂದ ಅತಿಥಿ ಶಿಕ್ಷಕರ ಅನಿರ್ಧಿಷ್ಟಾವಧಿ ಧರಣಿ :  ಸಿದ್ಧಲಿಂಗ ಎಸ್.ಎಂ.


ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ)ಮೇ, 28 :
ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ವತಿಯಿಂದ ಜೂನ್ 13 ರಿಂದ ಶಾಲೆ ತೊರೆಯುವ ಮೂಲಕ ಅನಿರ್ದಿಷ್ಟಾವಧಿ ಧರಣಿ ಮಾಡಲಾಗುತ್ತದೆ ಎಂದು ಹೊಸಪೇಟೆ ತಾಲೂಕು ಅಧ್ಯಕ್ಷ ಸಿದ್ಧಲಿಂಗ ಎಸ್.ಎಂ. ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಅನೇಕ ವರ್ಷಗಳಿಂದ ಸತತವಾಗಿ ಹೋರಾಟಗಳನ್ನು ಪತ್ರ ಚಳುವಳಿ ಮಾಡಿದರು ಕೂಡ ಸರ್ಕಾರ ಅತಿಥಿ ಶಿಕ್ಷಕರ ಬೇಡಿಕಗೆ ಸ್ಪಂದಿಸುತ್ತಿಲ್ಲ ಆಳುವ ಸರ್ಕಾರಗಳು ಅತಿಥಿ ಶಿಕ್ಷಕರನ್ನು ಪ್ರಸ್ತುತ 10,000 ರೂಪಾಯಿ ಅತಿ ಕಡಿಮೆ ಸಂಬಳದಲ್ಲಿ ದುಡಿಸಿಕೊಳ್ಳುವ ಮೂಲಕ ಆಧುನಿಕ ಜೀತ ಪದ್ಧತಿ ಅನುಸರಿಸುತ್ತಿದೆ, ಕಳೆದ ಬಜೆಟ್ ನಲ್ಲಿ 2000 ವೇತನ ಹೆಚ್ಚಳ ಮಾಡಿದೆ ಆದರೆ ಪ್ರಸ್ತುತ ಪ್ರತಿ ವಸ್ತುಗಳ ಬೆಲೆ ಏರಿಕೆಯಲ್ಲಿ ಜೀವನ ನಿರ್ವಹಣೆಗೆ ವೇತನ ತೃಪ್ತಿದಾಯಕವಾಗಿಲ್ಲ ಈ ಬಾರಿ 2025-2026 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ 2011-2014 ವರೆಗಿನ ನೇಮಕಾತಿ ಆದೇಶವನ್ನು ಮರು ಪರಿಶೀಲಿಸಬೇಕು ನಮ್ಮ ಬೇಡಿಕೆಗಳಾದ ಕನಿಷ್ಠ ವೇತನ 25000 ರೂ ನೀಡಬೇಕು , ಮೆರಿಟ್ ಪದ್ಧತಿಯನ್ನು ಕೈಬಿಡಬೇಕು, ಸೇವಾ ಹಿರಿತನವನ್ನು ಆಧರಿಸಿ ಮೊದಲು ಮಾಡಿದವರಿಗೆ ಮೊದಲು ಆದ್ಯತೆ ನೀಡಬೇಕು, ಪ್ರತಿ ವರ್ಷ ಐದು ಕೃಪಾಂಕ ನೀಡಬೇಕು,  ಸೇವೆಯನಾದರಿಸಿ ಸೇವಾ ಪ್ರಮಾಣ ಪತ್ರ ನೀಡಬೇಕು, ಶಿಕ್ಷಣ ಸಚಿವ ಮಧುಬಂಗಾರಪ್ಪನವರನ್ನು ದಿ: 21-05-2025 ಬೆಂಗಳೂರಿನಲ್ಲಿ ನೇರವಾಗಿ ಅವರ ಕಛೇರಿಯಲ್ಲಿ ಭೇಟಿಯಾಗಿ ಮನವಿ ಮಾಡಿದ್ದೇವೆ ಈ ಬಾರಿ ನೇಮಕಾತಿಯಲ್ಲಿ 51 ಸಾವಿರದ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತೆ ಎಂದು ಹೇಳಿದ್ದಾರೆ, ನಮ್ಮ ಬೇಡಿಕೆ ಈಡೇರಿಸದಿದ್ದರೆ ಜೂನ್ 13 ರಿಂದ ರಾಜ್ಯಾದ್ಯಂತ ಶಾಲಾ ತೊರೆಯುವ ಮೂಲಕ ಅನಿರ್ದಿಷ್ಟಾವಧಿ ಬೃಹತ್ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ