
ಸಂಜೆ ವಾಣಿ ವಾರ್ತೆ
ಜಮಖಂಡಿ:ಫೆ.೮: ತಾಲೂಕಿನಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ನಕಲಿ ಪಿಎಚ್‌ಡಿ ಪ್ರಮಾಣ ಪತ್ರ ಸಲ್ಲಿಸಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಪಗಳು ಕೇಳಿಬಂದಿದೆ.
ಜಿಲ್ಲೆಯಲ್ಲಿರುವ ೧೮ ಸರ್ಕಾರಿ ಕಾಲೇಜಗಳಲ್ಲಿ ೧೦೦ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅದ್ರಲ್ಲಿ ಶೇ.೬೦ ರಷ್ಟು ಅತಿಥಿ ಉಪನ್ಯಾಸಕರು ಹೊರ ರಾಜ್ಯದಿಂದ ನಕಲಿ ಪಿಎಚ್‌ಡಿ ಪ್ರಮಾಣ ಪತ್ರ ಸಲ್ಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪ ಕೇಳಿಬಂದಿವೆ.
ಇAತಹ ಹೊರ ರಾಜ್ಯದ ಒಂದೊAದು ಪ್ರಮಾಣಪತ್ರಕ್ಕೆ ೩-೪ ಲಕ್ಷ ಹಣ ನೀಡಿ ಪ್ರಮಾಣ ಪತ್ರ ಪಡೆದ ಆರೋಪ ಇದೆ. ಜಮಖಂಡಿ, ಹುನಗುಂದ, ಮುಧೋಳ ಸೇರಿದಂತೆ ಹಲವೆಡೆ ನಕಲಿ ಪ್ರಮಾಣ ಪತ್ರ ಸಲ್ಲಿಕೆಯಾಗಿದೆ ಎಂದು ಆರೋಪಗಳು ಕೇಳಿ ಬಂದಿವೆ.
ಉತ್ತರಪ್ರದೇಶ ಮೂಲದ ಚೌಧರಿ ಚರಣಸಿಂಗ್ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ರಾಜ್ಯದ ನಕಲಿ ಪಿಹೆಚ್‌ಡಿ ಪ್ರಮಾಣಪತ್ರ ಸಲ್ಲಿಕೆ ಆಗಿರೋದು ಬೆಳಕಿಗೆ ಬಂದಿದೆ. ಚೌಧರಿ ಚರಣಸಿಂಗ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಮಾದ್ಯಮ ವಿಭಾಗವೆ ಇಲ್ಲ. ಆದರೂ ಅದರ ಹೆಸರಲ್ಲಿ ಕನ್ನಡದಲ್ಲಿ ಪಿಹೆಚ್‌ಡಿ ಪ್ರಮಾಣ ಪತ್ರ ಪಡೆದಿರೋದು ಅನುಮಾನಕ್ಕೆ ಕಾರಣವಾಗಿದೆ. ಪಿಎಚ್‌ಡಿ ಪ್ರಮಾಣ ಪತ್ರ ನೈಜತೆ ತಿಳಿಯಲು ಶಿಕ್ಷಣ ಇಲಾಖೆ ಮುಂದಾಗಿದೆ. ೨೦೨೪-೨೫ ೨೦೨೫-೨೬ ರಲ್ಲಿ ನೇಮಕವಾದ ಅತಿಥಿ ಉಪನ್ಯಾಸಕರ ಪ್ರಮಾಣ ಪತ್ರಗಳನ್ನ ಪರಿಶೀಲಿಸಲಾಗುತ್ತಿದೆ.
ಜಿಲ್ಲೆಯಾದ್ಯಂತ ಹೊರ ರಾಜ್ಯದಲ್ಲಿ ಪಿ.ಎಚ್.ಡಿ ಪದವಿ ಪಡೆದ ಅಥಿತಿ ಉಪನ್ಯಾಸಕರು ಹೆಚ್ಚಿದ್ದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಗಳಲ್ಲಿ ರಾಜಾರೋಶವಾಗಿ ಸೇವೆ ಸಲ್ಲಿಸುತ್ತಿದ್ದಾರೆಂಬ ಆರೋಪವು ಕೇಳಿ ಬಂದಿದೆ.
ತಾಲೂಕಿನ ಸುಮಾರು ೧೫ ಕ್ಕೂ ಅಧಿಕ ಅಥಿತಿ ಉಪನ್ಯಾಸಕರು ಕರ್ತವ್ಯ ಮಡುತ್ತಿದ್ದು ಅದರಲ್ಲಿ ಕೆಲವಂದು ಜನರು ರಾಜಿನಾಮೆಯನ್ನೂ ಸಹ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದಾಯಲಯದಲ್ಲಿ ೨೬೦೦ ವಿದ್ಯಾರ್ಥಿನಿಯರು ಪದವಿ ವಿಭಾಗದಲ್ಲಿ ಸ್ನಾತಕೋತ್ತರದಲ್ಲಿ ೪೦ ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ ಅಲ್ಲಿರುವ ಉಪನ್ಯಾಸಕರು ಸಾಲದೇ ಇದ್ದಾಗ ಹೆಚ್ಚುವರಿಯಾಗಿ ೬೨ ಅಥಿತಿ ಉಪನ್ಯಾಸಕರ ಅಗತ್ಯತೆಗನುಗುಣವಾಗಿ ೫೮ ಉಪನ್ಯಾಸಕರು ಕೆಲಸಕ್ಕೆ ಹಾಜರಾಗಿದ್ದಾರೆ, ೩೫ ಜನರು ನೆಟ್,ಸೆಟ ಅರ್ಹತೆಯ ಮೇಲೆ ೧೩ ಜನರು ರಾಜ್ಯದ ವಿವಿಗಳಿಂದ ಪಿ,ಎಚ್.ಡಿ ಪಡೆದವರಾಗಿದ್ದರೆ ಉಳಿದ ೧೦ ಜನರು ಹೊರ ರಾಜ್ಯದಿಂದ ಪಡವಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ ಸುನಂದಾ ಶಿರೂರ ಮಾತನಡಿ ಈಗಾಗಲೇ ನಮ್ಮ ಮಹಾವಿದಾಯಲಯದಲ್ಲಿ ಕರ್ತವ್ಯ ಮಾಡುತ್ತಿದ್ದ ೧೦ ಜನ ಹೊರ ರಾಜ್ಯದ ಅಥಿತಿ ಉಪನ್ಯಾಸಕರು ತಮ್ಮ ರಾಜಿಮಾನೆಯನ್ನು ಸಲ್ಲಿಸಿದ್ದಾರೆ ಇನ್ನು ಮೇಲಾಧಿಕಾರಿಗಳ ಆದೇಶವನ್ನು ಪಾಲಿಸಲಾಗುತ್ತದೆ ಈ ವಿಷಯಕ್ಕೆ ಪತ್ರವನ್ನೂ ಸಹ ಬರೆದು ಕಳಿಸಿದ್ದೇವೆ ಎಂದು ಹೇಳಿದರು.
























