ಸುದೈವಿ ಮಕ್ಕಳ ರಕ್ಷಕರು: ಮನೋಜ ಹಿರೇಮಠ

ಸಂಜೆ ವಾಣಿ:
ಕಮಲನಗರ:ಅ.೨೬: ಕಲ್ಯಾಣ ಕರ್ನಾಟಕ ಭಾಗದ ಚೇತನಶಕ್ತ್ತಿ, ಶೈಕ್ಷಣಿಕ ಕ್ರಾಂತಿಯ ಹರಿಕಾರರು, ಸುದೈವಿ ಮಕ್ಕಳ ರಕ್ಷಕರು, ಆಶ್ರಯದಾತರು ಆಗಿರುವ ನಾಡೋಜ ಪ್ರಶಸ್ತಿ ಪುರಸ್ಕೃತ ಡಾ. ಬಸವಲಿಂಗ ಪಟದ್ದೇವರು ಸಲ್ಲಿಸುತ್ತಿರುವ ಸಮಾಜ ಸೇವೆ ನಮ್ಮೇಲ್ಲರಿಗೂ ಮಾದರಿಯಾಗಿದೆ ಎಂದು ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಹೇಳಿದರು.
ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ೭೫ನೇ ಜನ್ಮ ದಿನ ಅಂಗವಾಗಿ ಸುದೈವಿ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿದರು.
ಪಟ್ಟದ್ದೇವರು ಕಳೆದ ನಾಲ್ಕು ದಶಕಗಳಿಂದ ದಣಿವರಿಯದ ಸೇವೆ ಸಲ್ಲಿಸುತ್ತಿದಾರೆ. ಸಮಾಜ ಸೇವೆಗೆ ಅಧಿಕಾರ ಮುಖ್ಯವಾಗುವುದಿಲ್ಲ. ಸೇವೆ ಮಾಡುವ ಮನಸ್ಸು ಇರಬೇಕು ಎಂದು ಲೋಕಕ್ಕೆ ತಿಳಿಸಿಕೊಟ್ಟವರು ಎಂದರು.
ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಡಾ. ಅಜೀತಕುಮಾರ ಶಾಸ್ತ್ರೀ ಅವರು ಮಾತನಾಡಿ, ಪ್ರಸ್ತೂತ್ ಇಂದಿನ ದಿನಮಾನಗಳಲ್ಲಿ ಸ್ವಲ್ಪ ಕೆಲಸ ಮಾಡಿ ಜಾಸ್ತಿ ಪ್ರಚಾರ ಗಿಟ್ಟಿಸಿಕೊಳ್ಳುವವರೇ ಹೆಚ್ಚಿರುವ ಇಂದಿನ ದಿನಗಳಲ್ಲಿ ಎಷ್ಟೇಲ್ಲ ಸಾಧನೆ ಮಾಡಿದರೂ ಹೆಚ್ಚಿನ ಪ್ರಚಾರ ಪಡೆದುಕೊಳ್ಳದ ಬಸವಲಿಂಗ ಪಟ್ಟದ್ದೇವರು ಅಧ್ಯಾತ್ಮ ರತ್ನ ಆಗಿದ್ದಾರೆ ಎಂದು ಬಣ್ಣಿಸಿದರು.
ವಿವೇಕಾನಂದ ಟ್ರಸ್ಟ್ನ ಅಧ್ಯಕ್ಷ ಸಂಗಮೇಶ ಬಿರಾದಾರ, ಶಾಲಾ ಸಲಹಾ ಸಮಿತಿಯ ಅಧ್ಯಕ್ಷ ಅಮೃರಾವ ವಡಗಾಂವೆ, ಶಿಕ್ಷಕಿ ಶ್ರೀದೇವಿ ಸನಕಾಂಬಳೆ, ರಾಜಶ್ರೀ ಸಿರಗಿರೆ, ದೀಪಮಾಲಾ ಸೂರ್ಯವಂಶಿ, ಶೀತಲ ನಂದು ಹಂಗರಗೆ, ಸಂಗೀತಾ ಕಾಂಬಳೆ, ಅಂಜಲಿ ಜ್ಞಾನೇಶ್ವರ ಕಾಂಬಳೆ, ಅಂಬಿಕಾ ಸೂರ್ಯವಂಶಿ, ಪಂಚಫುಲಾ, ಅಶ್ವೀನಿ, ಮಲ್ಲಿಕಾರ್ಜುನ ಹಾಗೂ ಮಕ್ಕಳು ಇದ್ದರು.