ನವಲಗುಂದ,ಸೆ.೯: ಯೋಜನೆಗಳು ಪಲಾನುಭವಿ ತಲಪಬೇಕು ಏನಾದರೂ ತೊಂದರೆ ಇದ್ದರೆ ಸ್ಥಳದಲ್ಲಿ ಪಲಾನುಭವಿಗಳ ಸಮಸ್ಯೆ ಆಲಿಸಿ ಅಲ್ಲೇ ಬಗೆಹರಿಸಲು ಸರ್ಕಾರ ಗ್ರಾಮಮಟ್ಟದಲ್ಲಿ ಸಭೆ ಮಾಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಅವರು ತಾಲ್ಲೂಕಿನ ಹಾಲಕುಸಗಲ್ ಗ್ರಾಮದ ಶಿವಾನಂದ ಮಠದ ಸಭಾಭವನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯತ್ ಮಟ್ಟದ ಗ್ಯಾರಂಟಿ ಯೋಜನೆಗಳ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅತೀ ಕ್ಲಿಷ್ಟಕರ ರೀತಿಯಲ್ಲಿ ಸಮಸ್ಯೆ ಇದ್ದರೆ ಸರ್ಕಾರ ಮಟ್ಟದಲ್ಲಿ ಪ್ರಸ್ತಾವನೆ ಮಾಡಲಾಗುವುದು, ತಾಲ್ಲೂಕಿನ ಯಾವುದೇ ಬಡ ಕುಟುಂಬವೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಹೊರ ಉಳಿಯಬಾರದು ಎಂದರು.
ಯುವನಿಧಿ ಯೋಜನೆಯಲ್ಲಿ ದಾಖಲಾತಿಗೆ ಬಾಕಿ ಇರುವ ೯೭ ಯುವನಿಧಿ ದಾಖಲಾತಿಯ ಪ್ರಗತಿ ತೃಪ್ತಿದಾಯಕವಾಗಿಲ್ಲ. ಯುವನಿಧಿಗೆ ಹೆಚ್ಚು ದಾಖಲಾತಿ ಮತ್ತು ವೆರಿಫಿಕೇಶನ್ ಮಾಡಿ ಶೀಘ್ರದಲ್ಲಿ ಸಮಸ್ಯೆ ಬಗೆ ಹರಿಸುವಂತೆ ಹೇಳಿದರು.
ಈ ವೇಳೆ ಶಾನವಾಡ ಗ್ರಾಮದ ಶಿಲ್ಪಾ ಬಳಗಣ್ಣವರ ಹಾಗೂ ಸಕ್ರವ್ವ ತಳವಾರ ಗೃಹಲಕ್ಷಿ÷್ಮÃ ಹಣ ಬಂದಿಲ್ಲ ಎಂದು ಶಾಸಕರಿಗೆ ದೂರಿದರು ಜಿಎಸ್ ಟಿ ತಾಂತ್ರಿಕ ಸಮಸ್ಯೆ ಇದ್ದು ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ಯಾರಂಟಿ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ ಮಾತನಾಡಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಕ್ಕೆ ಜಿಲ್ಲೆಯಲ್ಲಿಯೇ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ನವಲಗುಂದ ತಾಲ್ಲೂಕು ಪ್ರಥಮ ಹಂತದಲ್ಲಿದೆ. ಇದು ನಮಗೆ ಹೆಮ್ಮೆಯ ವಿಷಯ ಎಂದರು.
ಗ್ರಾ. ಪಂ ಅಧ್ಯಕ್ಷ ಅಕ್ಕವ್ವ ಗೊಬ್ಬರಗುಂಪಿ, ಉಪಾಧ್ಯಕ್ಷರು ಆಶಾ ನಾಯಕರ, ತಾಪಂ ಇಒ ಭಾಗ್ಯಶ್ರೀ ಜಾಗೀದಾರ, ಸಿಡಿಪಿಒ ಗ್ರಾಯತ್ರಿ ಪಾಟೀಲ, ಹೆಸ್ಕಾಂ ಎಇಇ ಪ್ರೀತಿ. ಕೆ, ಎಸ್. ಎಂ. ವಾಲಿ, ಟಿ. ಎಲ್. ಮುತ್ತಣ್ಣವರ, ಗ್ಯಾರಂಟಿ ಸಮಿತಿ ಸದ್ಯಸರಾದ ದಿಲೀಪ್ ನದಾಫ್, ಆನಂದ ಜಕ್ಕನಗೌಡ್ರ, ಈರಣ್ಣ ಅಂಗಡಿ, ಮಲ್ಲಿಕಾರ್ಜುನ ಗುಜ್ಜಳ, ಡಿ. ಎಚ್. ಖುದ್ದಣ್ಣವರ, ಲಕ್ಷ÷್ಮಣ ನೀಡವಣಿ ಗ್ರಾಮಸ್ಥರು, ಆಶಾಕಾರ್ಯಕರ್ತರು, ಮಹಿಳೆಯರು ಹಾಜರಿದ್ದರು.























