
ಜೇವರ್ಗಿ:ಜ.27:ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಅಭಿರುದ್ದಿಗೆ ಪೂರಕವಾಗಿದ್ದು ಗ್ಯಾರಂಟಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಸಮರ್ಪಕವಾಗಿ ಜಾರಿಗೆ ತರಲು ಪ್ರಯತ್ನ ಮಾಡುವಂತೆ ಶಾಸಕರು ಹಾಗೂ ಞಞಡಿಜb ಅಧ್ಯಕ್ಷರಾದ ಡಾ ಅಜೇಯ್ ಧರ್ಮಸಿಂಗ್ ಹೇಳಿದ್ದಾರೆ
ಜೇವರ್ಗಿ ಮಿನಿ ವಿಧಾನ ಸೌಧದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಾರ್ಯಾಲಯ ಉದ್ಘಾಟನೆ ಮಾಡಿ ಅವರು ಮಾತನಾಡಿದರು
ನಮ್ಮದು ನುಡಿದಂತೆ ನಡೆದ ಸರಕಾರ ಬಡವರು ಹಸಿವಿನಿಂದ ಬಳಲ ಬಾರದು ಹಾಗೂ ಮನೆಯ ಹೆಣ್ಣು ಮಗಳು ಕಷ್ಟದ ಜೀವನ ನಡೆಸಬಾರದು ಎನ್ನುವ ಕಾರಣದಿಂದ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದೆ ಎಂದರು
ಗ್ಯಾರಂಟಿ ಅನುಷ್ಠಾನ ಸಮಿತಿ ನೂತನ ಅಧ್ಯಕ್ಷರಾದ ಶೌಕತ್ ಅಲಿ ಆಲೂರ್ ಮಾತನಾಡಿ ಡಾ ಅಜೇಯ್ ಸಿಂಗ್ ರವರು ಜೇವರ್ಗಿ ಅಭಿರುದ್ದಿಗಾಗಿ ಶ್ರಮಿಸುತ್ತಿದ್ದಾರೆ ಅವರ ಅಭಿರುದ್ದಿಗೆ ಪೂರಕವಾಗಿ ಗ್ಯಾರಂಟಿ ಸಮಿತಿ ಕೆಲಸ ಮಾಡಲಿದೆ ಎಂದರು ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿತ್ತೇವೆ ಎಂದರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ಸದುಪಯೋಗ ವಾಗುವಂತೆ ಕ್ರಮವಹಿಸುತ್ತೇವೆ ಎಂದರು
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸಿದ್ದಲಿಂಗ ರೆಡ್ಡಿ ಪಾಟೀಲ್ ಇಟಗಾ ರುಕುಮ್ ಪಟೇಲ್ ಪೆÇಲೀಸ್ ಪಾಟೀಲ್ ಇಜೇರಿ ಮಾತನಾಡಿದರು
ಕಾಂಗ್ರೆಸ್ ಹಿರಿಯ ಮುಖಂಡರಾದ ಕಾಸಿಮ್ ಪಟೇಲ್ ಮುದವಾಳ ರಾಜಶೇಖರ್ ಸಿರಿ ಶಾಂತಪ್ಪ ಕೂಡಲಗಿ ವಸಂತರಾವ್ ನರಿಬೋಳ ಕಾಸಿರಾಯ ಗೌಡ ಪಾಟೀಲ್ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಪ್ರತಾಪ್ ಕಟ್ಟಿ ಸಂಗನಗೌಡ ಪಾಟೀಲ್ ಗುಗಿಹಾಳ್ ಮುನ್ನಾ ಪಟೇಲ್ ಯಾಳವಾರ ಮಹಿಬೂಬ್ ಸಾಬ್ ಕೆಂಭಾವಿ ಮಲ್ಲಣ್ಣ ಗೌಡ ಪಾಟೀಲ್ ಲಕನಪುರ್ ಸೇರಿದಂತೆ ಮುಂತಾದವರು ಇದ್ದರು
ತಾಲೂಕು ಪಂಚಾಯತ್ ಇ ಓ ರವಿಚಂದ್ರ ರಡ್ಡಿ ಲಕ್ಕುಂಡಿ ಕಾರ್ಯಕ್ರಮ ನಿರೂಪಣೆ ಮಾಡಿದರು
























