Home ಜಿಲ್ಲೆ ಕಲಬುರಗಿ ಗ್ಯಾರಂಟಿ ಯೋಜನೆಗಳು ಜನರ `ಹಕ್ಕು’ ಹಂಗಲ್ಲ: ಪ್ರೊ.ಟಿ.ಆರ್.ಚಂದ್ರಶೇಖರ್

ಗ್ಯಾರಂಟಿ ಯೋಜನೆಗಳು ಜನರ `ಹಕ್ಕು’ ಹಂಗಲ್ಲ: ಪ್ರೊ.ಟಿ.ಆರ್.ಚಂದ್ರಶೇಖರ್

ಕಲಬುರಗಿ: `ಐದು ಗ್ಯಾರಂಟಿ ಕಾರ್ಯಕ್ರಮಗಳು ರಾಜ್ಯದಲ್ಲಿ ಜಾರಿಗೆ ಬಂದು ಮೂರು ವರ್ಷಗಳಾಗಿವೆ(೨೦೨೩-೨೦೨೬). ಕರ್ನಾಟಕ ಸರ್ಕಾರವು ಗ್ಯಾರಂಟಿ ಕಾರ್ಯಕ್ರಮಗಳಿಗೆ ತನ್ನ ಬಜೆಟ್ಟಿನಲ್ಲಿ ವಾರ್ಷಿಕ ರೂ.೫೦೦೦೦ ಕೋಟಿಗೂ ಮೀರಿದ ಹಣವನ್ನು ವೆಚ್ಚ ಮಾಡುತ್ತಿದೆ. ಅನೇಕರು ಭಾವಿಸಿರುವಂತೆ ಮತ್ತು ಭವಿಷ್ಯ ನುಡಿದಿರುವಂತೆ ಗ್ಯಾರಂಟಿ ಕಾರ್ಯಕ್ರಮದಿಂದಾಗಿ ಕರ್ನಾಟಕದ ಆರ್ಥಿಕತೆಯು ಬಿದ್ದು ಹೋಗಿಲ್ಲ-ಕುಸಿದಿಲ್ಲ. ಕಾರ್ಮಿಕರು-ರೈತರು ಸೋಮಾರಿಗಳಾಗಿಲ್ಲ. ಅಭಿವೃದ್ಧಿಯು ಕುಂಟಿತಗೊAಡಿಲ್ಲ. ಕುಟುಂಬಗಳು ಒಡೆದಿಲ್ಲ ಮತ್ತು ಮಹಿಳೆಯರು ದಾರಿ ತಪ್ಪಿಲ್ಲ. ಗ್ಯಾರಂಟಿ ಕಾರ್ಯಕ್ರಮವು ಜನರ ಮೇಲಿನ ಬಂಡವಾಳ ಹೂಡಿಕೆಯಾಗಿದೆ. ಅಮರ್ತ್ಯ ಸೆನ್ ಹೇಳುತ್ತಿರುವಂತೆ ಅಭಿವೃದ್ಧಿಯು ಆರ್ಥಿಕ ಸಮೃದ್ಧತೆಗಿಂತ ಹೆಚ್ಚು ಜನರ ಬದುಕಿನ ಸಮೃದ್ಧತೆಗೆ ಸಂಬAಧಿಸಿದ ಸಂಗತಿಯಾಗಿದೆ’ ಎಂದು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರೊ.ಟಿ.ಆರ್.ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ವಿಜ್ಞಾನ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತç ವಿಭಾಗವು ಆಯೋಜಿಸಿದ `ಜನರ ಸಾಮಾಜಿಕ ಮತ್ತು ಆರ್ಥಿಕ ಬದುಕಿನ ಮೇಲೆ ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ’ಗಳ ಕುರಿರ ರಾಷ್ಟಿçÃಯ ಸೆಮಿನಾರಿನ ದಿಕ್ಸೂಚಿ ಭಾಷಣ ಮಾಡಿದ ಪ್ರೊ.ಟಿ.ಆರ್.ಚಂದ್ರಶೇಖರ್ ಅವರು ಹೇಗೆ ಕರ್ನಾಟಕದ ಜನರ ಅಭಿವೃದ್ದಿಗೆ ನೆರವಾಗಿದೆ ಎನ್ನುವುದನ್ನು ಅಂಕೆ ಅಂಶಗಳ ಮೂಲಕ ವಿವರಿಸಿದರು. ಮುಂದುವರಿದು ಹೇಳುತ್ತಾ, ಕರ್ನಾಟಕದ ಒಟ್ಟು ರಾಜ್ಯ ಆಂತರಿಕ ಉತ್ಪನ್ನ(ಜಿಎಸ್‌ಡಿಪಿ) ೨೦೨೩-೨೪ನೆಯ ಸಾಲಿನಲ್ಲಿ ಬೆಳವಣಿಗೆ ಶೇ.೧೦.೨. ಅದೇ ಸಾಲಿನಲ್ಲಿ ಭಾರತ ಆರ್ಥಿಕತೆಯ ಜಿಡಿಪಿಯ ಬೆಳವಣಿಗೆ ಶೇ. ೭.೩.,, ೨೦೨೪-೨೫ರ ಜಿಎಸ್‌ಡಿಪಿಯ ಬೆಳವಣಿಗೆ ಶೇ.೧೩.೭೯. ಅದೇ ಸಾಲಿನಲ್ಲಿ ಭಾರತದ ಆರ್ಥಿಕತೆಯ ಜಿಡಿಪಿಯ ಬೆಳವಣಿಗೆ ಶೇ. ೭.೨., ೨೦೨೫-೨೬ನೆಯ ಸಾಲಿನ ಬೆಳವಣಿಗೆ ಶೇ. ೮.೧೨. ಅದೇ ಅವಧಿಯಲ್ಲಿ ಭಾರತದ ಆರ್ಥಿಕತೆಯ ಜಿಡಿಪಿಯ ಬೆಳವಣಿಗೆ ಶೇ.೭.೮. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಆರ್ಥಿಕತೆಯ ಬೆಳವಣಿಗೆಯು ಭಾರತದ ಆರ್ಥಿಕ ಬೆಳವಣಿಗೆಗಿಂತ ಉತ್ತಮವಾಗಿದೆ. ದೇಶದಲ್ಲಿ ಅತ್ಯಂತ ಸಮೃದ್ಧ ಆರ್ಥಿಕತೆಗಳಲ್ಲಿ ಕರ್ನಾಟಕ ಆರ್ಥಿಕತೆಯು ಒಂದಾಗಿದೆ. ದೇಶದ ದೊಡ್ಡ ರಾಜ್ಯಗಳ ನಿವ್ವಳ ರಾಜ್ಯ ಆಂತರಿಕ ಉತ್ಪನ್ನದಲ್ಲಿ(ಎನ್‌ಎಸ್‌ಡಿಪಿ) ಕರ್ನಾಟಕ ಮೂರನೆಯ ಸ್ಥಾನದಲ್ಲಿದೆ. ಕರ್ನಾಟಕವು ೨೦೨೪-೨೫ರಲ್ಲಿ ದೇಶದ ತಲಾ ವರಮಾನದಲ್ಲಿ ಎರಡನೆಯ ಸ್ಥಾನದಲ್ಲಿದೆ.

ಶೂದ್ರರಿಗೆ ಮತ್ತು ದಲಿತರಿಗೆ ಸರ್ಕಾರ ಅನುಕೂಲ ಮಾಡಿಕೊಟ್ಟರೆ – ಸಬ್ಸಿಡಿ, ಸಾಲ, ಆಹಾರ ನೀಡಿದರೆ ಅದು ಅನುತ್ಪಾದಕ (ಅನ್‌ಪ್ರೊಡಕ್ಟೀವ್); ಅದೇ ಅನುಕೂಲಗಳನ್ನು ತ್ರೆöÊವರ್ಣೀಕರಿಗೆ, ಕೈಗಾರಿಕೋದ್ಯಮಗಳಿಗೆ, ವ್ಯಾಪಾರಿಗಳಿಗೆ, ಬಂಡವಾಳ ಹೂಡುವವರಿಗೆ ಒದಗಿಸಿದರೆ ಅದು ಉತ್ಪಾದಕ(ಪ್ರೊಡಕ್ಟೀವ್) ಎನ್ನುವ ಕಥನವನ್ನು ಕಟ್ಟಲಾಗಿದೆ. ಇದೊಂದು ಕಟ್ಟುಕಥೆ. ಅರ್ಥಶಾಸ್ತçದ ಯಾವ ಸಿದ್ಧಾಂತವೂ ಇದನ್ನು ಸಮರ್ಥಿಸುವುದಿಲ್ಲ. ಅತಿಅತಿಶ್ರೀಮಂತರ ವರಮಾನ – ಸಂಪತ್ತಿನ ಮೇಲೆ ಶೇ. ೩ ರಿಂದ ಶೇ. ೪ ರಷ್ಟು ತೆರಿಗೆ ವಿಧಿಸಿದರೆ ದೇಶದಲ್ಲಿನ ಜನಕಲ್ಯಾಣ ಕಾರ್ಯಕ್ರಮಗಳ ವೆಚ್ಚವನ್ನು ೧೦-೨೦ ವರ್ಷಗಳ ಕಾಲ ನಿರ್ವಹಿಸಬಹುದು ಎನ್ನಲಾಗಿದೆ.
ಕೇಂದ್ರ ಸರ್ಕಾರವು ಕಳೆದ ೧೨ ವರ್ಷಗಳಲ್ಲಿ ಮನ್ನಾ/ಮಾಫಿ ಮಾಡಿದ ಕಾರ್ಪೋರೇಟ್ ವಲಯದ ಸಾಲ ರೂ. ೧೦ ಲಕ್ಷ ಕೋಟಿ. ಈ ಹಣವೇನಾದರೂ ಕರ್ನಾಟಕಕ್ಕೆ ದೊರೆತಿದ್ದರೆ ಅದರಿಂದ ೨೦ ವರ್ಷಗಳ ಕಾಲ ಗ್ಯಾರಂಟಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬಹುದಾಗಿತ್ತು. ಸಾವಿರಾರು ಕೋಟಿ ಸಂಪತ್ತಿನ ಒಡೆಯರ ಲಕ್ಷಾಂತರ ಕೋಟಿ ಸಾಲವನ್ನು ಮಾಪ್/ಮನ್ನಾ ಮಾಡಲಾಗುತ್ತ್ತಿದೆ. ಇದರ ಬಗ್ಗೆ ಯಾರೂ ಟೀಕೆ ಮಾಡುವುದಿಲ್ಲ. ಇದನ್ನು ಉತ್ಪಾದಕ – ಹೂಡಕೆ ಎನ್ನಲಾಗುತ್ತದೆ. ಆದರೆ ರೂ. ೫೧೦೦೦ ಕೋಟಿ ಗ್ಯಾರಂಟಿ ಕಾರ್ಯಕ್ರಮಗಳ ವೆಚ್ಚವನ್ನು ಅನುತ್ಪಾದಕ – ‘ದುಂದು ವೆಚ್ಚ’ ಎನ್ನಲಾಗುತ್ತದೆ. ಜನರ ಮೇಲಿನ ಹೂಡಿಕೆಯನ್ನು ದುಂದು ವೆಚ್ಚ ಎಂದೂ, ತೆರಿಗೆದಾರರ ಹಣದ ಲೂಟಿ ಎಂದು ಟೀಕಿಸಲಾಗುತ್ತದೆ. ಆದರೆ ರೂ.೧೦ ಲಕ್ಷ ಕೋಟಿ ಸಾಲವನ್ನು ‘ರೈಟ್ ಆಫ್’ ಮಾಡಿದ್ದನ್ನು ಟೀಕಿಸುವುದಿಲ್ಲ.’ ಬಹಳ ವಿಸ್ತಾರವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಕಲಬುರಗಿ ಜಿಲ್ಲೆಯ ಐದು ಖಾತರಿ ಯೋಜನೆಗಳ ಕಾರ್ಯನಿರ್ವಹಣೆಯ ಯೋಜನೆಯ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಪರಮೇಶ್ವರ್ ಅವರು ಮಾತನಾಡಿ ಕಲಬುರಗಿ ಭಾಗದಲ್ಲಿನ ಗ್ಯಾರಂಟಿ ಯೋಜನೆಗಳ ದುರುಪಯೋಗ ಮತ್ತು ಉಪಯೋಗದ ಬಗ್ಗೆ ಮಾತನಾಡಿದರು. ಅನಾವಶ್ಯಕವಾಗಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿ ಪಕ್ಷವು ಜನ ವಿರೋಧಿಯಾಗಿದೆ’ ಎಂದರು. ರಾಷ್ಟಿçÃಯ ಸೆಮಿನಾರಿನ ಪ್ರಧಾನ ಸಂಯೋಜಕರಾದ ಡಾ.ನಿರ್ಮಲಾ ಶಿರಗಾಪುರ ಅವರು ಸಮಾವೇಶದ ಆಯೋಜನೆಯ ಉದ್ದೇಶಗಳನ್ನು ಹೇಳುತ್ತಾ ಕರ್ನಾಟಕದ ಜನರ ಅಭಿವೃದ್ದಿಯ ಜನಪ್ರಿಯ ಗ್ಯಾರಂಟಿ ಯೋಜನೆಗಳು ಹೇಗೆ ಜನರ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ ಎನ್ನುವುದರ ಕುರಿತು ಚರ್ಚಿಸುವುದು ನಮ್ಮ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಪಿ.ಇ ಸೊಸೈಟಿಯ ಪ್ರಧಾನ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ್ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು ಸರಿಪಡಿಸಲು. ಅತ್ತು ನಿಜಕ್ಕೂ ಜನರ ಅಭಿವೃದ್ದಿಯಲ್ಲಿ ಈ ಯೋಜನೆಗಳ ಪಾತ್ರ ಹೇಗಿದೆ ಎಂದು ಮುಕ್ತವಾಗಿ ಚರ್ಚೆ ಆಗಬೇಕಿದೆ ಎಂದರು. ವೇದಿಕೆಯಲ್ಲಿ ಕೆ.ಪಿ.ಇ ಸೊಸೈಟಿಯ ಆಡಳಿತಾಧಿಕಾರಿಗಳಾದ ಡಾ.ಚಂದ್ರಶೇಖರ ಶೀಲವಂತರ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿದ್ದಪ್ಪ ಎಸ್. ಕಾಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಗಾಂಧೀಜಿ ಮೊಳಕೇರಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾಲೇಜಿನ ಐಕ್ಯೂಎಸಿ ನಿರ್ದೇಶಕರಾದ ಡಾ. ಸಿದ್ದಾರ್ಥ ಮದನಕರ್ ಉದ್ಘಾಟನ ಸಮಾರಂಭದ ಎಲ್ಲಾ ಅತಿಥಿಗಳಿಗೆ ವಂದಿಸಿದರು. ಕಾಲೇಜಿನ ಎಲ್ಲಾ ಅಧ್ಯಾಪಕರು, ಬೇರೆ ಬೇರೆ ಜಿಲ್ಲೆಗಳಿಂದಲೂ ಸಂಶೋಧನ ಪತ್ರಿಕೆ ಮಂಡಿಸಲು ಆಗಮಿಸಿದ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.