ಗ್ಯಾರಂಟಿ ಯೋಜನೆ ಸಭೆ

ಲಕ್ಷ್ಮೇಶ್ವರ,ಅ12: ತಾಲೂಕಿನ ಸುರಣಿಗೆ ಗ್ರಾಮದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವ ಪಂಚ ಗ್ಯಾರಂಟಿ ಯೋಜನೆಯ ತಾಲೂಕ ಮಟ್ಟದ ಸಭೆ ಜರುಗಿತು.


ಸಭೆಯಲ್ಲಿ ಹೆಸ್ಕಾಂ ಇಲಾಖೆ ಯುವ ನಿಧಿ ಇಲಾಖೆ ಆಹಾರ ಇಲಾಖೆ ಎನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ಮಹಿಳಾ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮ ಇಲಾಖೆಗಳ ಯೋಜನೆ ಗುರಿ ಮತ್ತು ಸಾಧನೆಯನ್ನು ವಿವರಿಸಿ ಗ್ರಾಮದಲ್ಲಿ ಯಾರಾದರೂ ಯೋಜನೆಗೆ ಸಂಬಂಧಪಟ್ಟಂತೆ ಸಮಸ್ಯೆ ಎದುರಿಸುತ್ತಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.


ಸಭೆಯಲ್ಲಿ ವಿಶೇಷವಾಗಿ ಕೆ ಎಸ್ ಆರ್ ಟಿ ಸಿ ಯ ಬಗ್ಗೆ ಸಾರ್ವಜನಿಕರು ವೇಳಗೆ ಸರಿಯಾಗಿ ಬಸ್ಸುಗಳು ಬರುತ್ತಿಲ್ಲ ಬಸ್ ನಿಲ್ದಾಣ ಬಿದ್ದರೂ ಇಲ್ಲದಂತಾಗಿದ್ದು ಕಂಟ್ರೋಲರ್ ಇಲ್ಲದೆ ಇರುವುದರಿಂದ ಸ್ವಚ್ಛತೆ ಮತ್ತು ಬಸ್ಸುಗಳು ಒಳಗಡೆ ಬರದೆ ಸಾರ್ವಜನಿಕರಿಗೆ ತೊಂದರೆ ಆಗಿದೆ ಎಂದು ಸಮಸ್ಯೆಗಳನ್ನು ಹೇಳಿದರು.


ಇನ್ನುಳಿದಂತೆ ಬಹುತೇಕ ಎಲ್ಲ ಇಲಾಖೆಗಳು ಗುರಿಮೀರಿ ಸಾಧನೆ ಮಾಡಿವೆ ಎಂಬ ಅಂಶ ಬೆಳಕಿಗೆ ಬಂದಿತು.
ಈ ಸಂದರ್ಭದಲ್ಲಿ ತಾಲೂಕಾ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನದ ತಾಲೂಕ ಅಧ್ಯಕ್ಷರಾದ ನಾಗರಾಜ್ ಮಡಿವಾಳ ಅವರು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಯಾವುದೇ ಪಕ್ಷ ಧರ್ಮ ಜಾತಿಯನ್ನದೆ ಎಲ್ಲಾ ವರ್ಗದ ಬಡವರಿಗೂ ಪಂಚ ಯೋಜನೆಗಳನ್ನು ಜಾರಿಗೆ ಮಾಡಿದ್ದು ಇದರಿಂದ ಜನಸಾಮಾನ್ಯರು ಸರ್ಕಾರದ ಬಗ್ಗೆ ಸದಾ ಅಭಿಪ್ರಾಯ ಹೊಂದಿದ್ದಾರೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕ್ರಣ್ಣ ಶಿರನಹಳ್ಳಿ ಸದಸ್ಯರಾದ ಹೆಗ್ಗಪ ಪೂಜಾರ ಕೆಡಿಪಿ ಸದಸ್ಯ ವಿಜಯಕುಮಾರ್ ಹಳ್ಳಿ ತಾಲೂಕ ಪಂಚಾಯತಿ ಮಾಜಿ ಸದಸ್ಯ ಕೋಟೆಪ್ಪ ವರ್ದಿ ಶರಣಪ್ಪ ಇಚ್ಚಂಗಿ ಮಲ್ಲಿಕಾರ್ಜುನ ನಾಗಣ್ಣವರ ಬಾಬು ಲಮಾಣಿ ಚೆನ್ನಕೇಶವ ಪೂಜಾರ ಪೀರ್ ಸಾಬ ರಿತ್ತಿ ಹಾಗೂ ತಾಲೂಕ ಮಟ್ಟದ ಪಂಚ ಗ್ಯಾರಂಟಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಪಿಡಿಒ ಗೌರಮ್ಮ ರೋಣದ ಕಾರ್ಯದರ್ಶಿ ಎಫ್ ಎಫ್ ಹಳ್ಯಾಳ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.