ಕೌಶಲ್ಯ ಅಭಿವೃದ್ಧಿಗೆ ಜಿ.ಟಿ.ಟಿ.ಸಿ ಸಹಕಾರಿ:ರವಿಚಂದ್ರ

ಸೈದಾಪುರ:ಜೂ.21:ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ಧಿಗೆ ಕೈಗಾರಿಕ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಅಂತ್ಯಂತ ಉತ್ತಮವಾಗಿದೆ ಎಂದು ಪ್ರಾಂಶುಪಾಲ ರವಿಚಂದ್ರ ಅಭಿಪ್ರಾಯಪಟ್ಟರು.
ಸಮೀಪದ ಕಡೇಚೂರು ಕೈಗಾರಿಕ ಪ್ರದೇಶದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದ 33 ಕಡೆಗಳಲ್ಲಿ ಜಿಟಿಟಿಸಿ ಕೇಂದ್ರಗಳಿದ್ದು ಇಲ್ಲಿ ಅಧ್ಯಯನ ಮಾಡಿದ ಪ್ರತಿಯೊಬ್ಬರಿಗೂ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳು ಬುದ್ಧಿವಂತಿಕೆ ಹಾಗೂ ಕೌಶಲ್ಯವನ್ನು ಹೆಚ್ಚಿಸಿಕೊಂಡು ಜೀವನದ ಹಾದಿಯಲ್ಲಿ ಸಾಗಬೇಕು. ಈಗಿನ ಕಾಲದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ನಮ್ಮದೆಯದ ಜ್ಞಾನ ಮತ್ತು ಕೌಶಲ್ಯ ದೊಂದಿಗೆ ಉತ್ತಮ ಗುರಿಯತ್ತ ಸಾಗಬೇಕು. ಉತ್ತಮ ಭವಿಷ್ಯ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಮಲಮ್ಮ, ನಿವೃತ್ತಾ ಶಿಕ್ಷಕ ಸಿದ್ದಪ್ಪ ಆವಂಟಿ, ಬಳಿಚಕ್ರ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ಅನ್ನಪೂರ್ಣ, ಧರ್ಮರಾಜ್, ವಿಜಯಕುಮಾರ್, ಪ್ರಿಯಾಂಕಾ ದಿವಟಗಿ, ಪ್ರದೀಪ್ ದದ್ದಲ್, ಹನುಮಂತ, ಅಕ್ಷಯ್, ಸುಮಾ, ಶಿವಲಿಂಗಯ್ಯ, ಸುಖಮನಿ, ಹುಸೇನ್, ಅಂಕುಶ್, ಮಂಜುನಾಥ್, ಬಾಲಾಜಿ, ವಿದ್ಯಾರ್ಥಿಗಳು, ಪೆÇೀಷಕರು ಸೇರಿದಂತೆ ಇತರರಿದ್ದರು. ಹಿರಿಯ ಉಪನ್ಯಾಸಕರಾದ ವೆಂಕಟರಾವ್ ನಿರೂಪಿಸಿ ವಂದಿಸಿದರು