ಜಿ.ಎಸ್.ಟಿ. ಕಡಿತ ಜನಸಾಮಾನ್ಯರಿಗೆ ವರದಾನ:ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ

ಕೊಲ್ಹಾರ: ಸೆ.೨೩:ಸೋಮವಾರ ಮಂಡಲ ಬಿಜೆಪಿ ವತಿಯಿಂದ ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಲ್ಲಾ ಸರ್ಕಾರಗಳು ಒಮ್ಮೆ ತೆರಿಗೆ ಏರಿಸಿದ ನಂತರ ಮುಂದಕ್ಕೆ ಹೆಚ್ಚಿಗೆ ಮಾಡಿಕೊಂಡೇ ಹೋಗುತ್ತವೆ. ಆದರೆ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಏರಿಸಿದ್ದ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ದಾಖಲೆ ಬರೆದಿದೆ ಎಂದರು.
ಕೇAದ್ರ ಸರ್ಕಾರ ೩೫೦ ಕ್ಕೂ ಅಧಿಕ ವಸ್ತುಗಳ ಮೇಲಿನ ಜಿ.ಎಸ್.ಟಿ ಯನ್ನು ಕಡಿತಗೊಳಿಸಿ ಜನ ಸಾಮಾನ್ಯರಿಗೆ ನೆರವಾಗಿದೆ. ಕ್ಯಾನ್ಸರ್ ರೋಗಿಗಳ ಔಷಧಿಗಳನ್ನ ತೆರಿಗೆ ಇಲ್ಲದೆ ಖರೀದಿಸಬಹು. ಹಾಗೆ ಶಿಕ್ಷಣದ ವಸ್ತುಗಳಿಗೂ ರಿಯಾಯಿತಿ ನೀಡಿ ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಾನಂದ ಶೀಲವಂತ, ಕಲ್ಲಬಸಪ್ಪ ಶಾವಿಗೊಂಡ,ಈರಯ್ಯ ಮಠಪತಿ,ಚಿನ್ನಪ್ಪ ಗಿಡ್ಡಪಗೋಳ,ಬಸಪ್ಪ ಉಪ್ಪಲದಿನ್ನಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಜಗದೀಶ ಸುನಗದ,ಮಂಜುನಾಥ ತುಂಬರಮಟ್ಟಿ,ಸವಿತಾ ಬೆಳ್ಳುಬ್ಬಿ,ಶಾಂತಾಬಾಯಿ ಬೀಳಗಿ, ಜಾವೀದ್ ಬಿಜಾಪುರ,ಬಾಬು ಭಜಂತ್ರಿ,ಅಶೋಕ ಗುಡ್ಡಪ್ಪಗೊಳ, ಸುಭಾಸ ಭಜಂತ್ರಿ ಇತರರು ಇದ್ದರು