
ಸಂಜೆ ವಾಣಿ ವಾರ್ತಾ
ಕಮಲನಗರ: ಪಟ್ಟಣದಲ್ಲಿ ಗೃಹಜ್ಯೋತಿ ಯೋಜನೆಯ ಪುನರ್ ಪರಿಶೀಲನಾ ಕಾರ್ಯ ಪ್ರಯುಕ್ತ ಕಮಲನಗರ ಜೆಇ ಬಸಲಿಂಗಪ್ಪ ವ್ಮರ್ಜಾಪುರೆ ನೇತೃತ್ವದಲ್ಲಿ ಜೆಸ್ಕಾಂ ಮೀಟರ್ ರೀಡರ್‌ಗಳು ಹಾಗೂ ಜೆಸ್ಕಾಂ ಸಿಬ್ಬಂದಿಗಳು ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿ ಅವರು ಮಾಹಿತಿ ಸಂಗ್ರಹಿಸಿದರು.
ಜೆಇ ಬಸಲಿಂಗಪ್ಪ ಮಾತಣಾಡಿ, ಕೆಲವರು ಸತ್ತವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕೌಂಟ್ ತೆರೆದು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ದೃಢೀಕರಣಕ್ಕಾಗಿ ಗೃಹಲಕ್ಷ್ಮೀ ಯೋಜನೆಯನ್ನು ಮರುಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅದರಂತೆ ಗೃಹ ಜ್ಯೋತಿ ಯೋಜನೆಯಲ್ಲಿ ಫಾರದರ್ಶಕತೆ ಹೆಚ್ಚಿಸಲು ಮುಂದಾಗಿದ್ದು ಮೊಬೈಲ್ ಆಪ್ ಹಾಗೂ ಘೋಷಣಾ ಪತ್ರ ಮೂಲಕ ಅರ್ಜಿ ಭರ್ತಿ ಮಾಡಿದ ನಂತರವೇ ಈ ಪ್ರಕ್ರಿಯೆ ಮುಗಿಯುತ್ತದೆ. ಗೃಹಜ್ಯೋತಿ ಯೋಜನೆಯ ಮೂಲಕ ಉಚಿತ ವಿದ್ಯುತ್ ಪಡೆಯಬೇಕಾದರೆ ನೀವು ಮತ್ತೋಮ್ಮೆ ದಾಖಲೆಗಳನ್ನು ಸಲ್ಲಿಸಬೆಕಾಗುತ್ತದೆ ಎಂದು ತಿಳಿಸಿದರು.
ಕಮಲನಗರ ಸೆಕ್ಷನ್ ಆಫೀಸರ್ ಬಸಲಿಂಗಪ್ಪ, ಎಂಆರ್ ಸುರೇಶ, ಎಲ್ ಎಮ್ ರಾಜಕುಮಾರ, ಎಎಂಆರ್ ಪಾದ ಸಹಾಯಕ ರಾಜಕುಮಾರ ಬಿರಾದಾರ ಹಾಗೂ ಗೃಹಜ್ಯೋತಿ ಫಲಾನಭವಿಗಳು ಇದ್ದರು.































