ಕಬ್ಬಿನ ಜೊತೆಗೆ ಪರ್ಯಾಯ ಬೆಳೆ ಬೆಳೆಯಿರಿ: ಶರಣ ಬಸವ ದೇವರು

ಬೀದರ:ಡಿ.೨೯:ರೈತರ ಬದುಕು ಸಮೃದ್ದಿಯಾಗಲು ಕಬ್ಬು ಬೆಳೆ ತುಂಬಾ ಅವಶ್ಯಕ, ಇದರ ಜೊತೆಗೆ ಪರ್ಯಾಯ ಬೆಳೆ ಬೆಳೆದು ಆರ್ಥಿಕ ಸಂಕಷ್ಟ ದೂರಮಾಡಲು ಬೆಳಗಾವಿಯ ಶರಣ ಬಸವ ದೇವರು ಕರೆ ನೀಡಿದರು.

ವಚನ ಚಾರಿಟೇಬಲ್ ಸೊಸೈಟಿ ಆಯೋಜಿಸಲಾದ ಬೀದರ ಜಿಲ್ಲೆಯ ೨೫೦ ಕಬ್ಬು ಬೆಳೆಯುವ ರೈತರಿಗೆ ರೈತ ದಿನಾಚರಣೆ ನಿಮಿತ್ತ ವಿಚಾರ ಸಂಕಿರಣದಲ್ಲಿ ಕಡಿಮೆ ಖರ್ಚು ಇಳುವರಿ ಹೆಚ್ಚು ದೂರದೃಷ್ಟಿ ಹಿನ್ನೆಲೆಯಲ್ಲಿ ಕಬ್ಬು ಬೆಳೆಯುವ ಪದ್ಧತಿ ಪುಸ್ತಕ ಬಿಡುಗಡೆಗೊಳಿಸಿ ಸಾನ್ನಿಧ್ಯ ವಹಿಸಿ.. ನಾನು ಇಪ್ಪತ್ತೈದು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುವ ರೈತ. ಸಮಸ್ಯೆ ಇವೆ ಆದರೆ ರೈತ ಅನೇಕ ತಾಂತ್ರಿಕ ಪದ್ದತಿ ಅಳವಡಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದೆ.ರೈತರು ಮೊದಲು ಭೂಮಿ ಹದ ಮಾಡಿ ಅದಕ್ಕೆ ಬೇಕಾಗುವ ತಿಪ್ಪೆ , ಎರೆ ಹುಳ ಗೊಬ್ಬರ ತಯ್ಯಾರಿ ಮಾಡಿಕೊಳ್ಳಲು ಸಲಹೆ ನೀಡಿ, ಅನೇಕ ಕಬ್ಬಿನ ತಳಿಗಳು ಲಭ್ಯಗಳಿದ್ದು ಅವುಗಳನ್ನು ಸಂಸ್ಕರಣ ಮಾಡಿ ಉಪಯೋಗಿಸುವ ಪದ್ಧತಿ ಕರಗತ ವಾಗಬೇಕು, ಕರಿಯ ಮಣ್ಣಿನ ಹೊಲ, ಕೆಂಪು ಮಣ್ಣಿನ ಹೊಲ, ಉಸುಕು ಮಿಶ್ರಿತ ಹೊಲದ ಇಂಗಾಲದ ಪರಿಮಾಣ ಹೆಚ್ಚಿಸಿರಿ, ಇಂದು ಅನೇಕ ತರಹದ ಪದ್ಧತಿಗಳಿವೆ ಎಲ್ಲವನ್ನು ಅರಿತು ಚಿಂತನೆ ಮಾಡಿ ನಮ್ಮ ಭೂಮಿಗೆ ಒಗ್ಗುವ ಕಬ್ಬಿನ ತಳಿ ತಂದು ಕಾರ್ಯ ಪ್ರಾರಂಭಿಸಿದ್ದಲ್ಲಿ ಇಳುವರಿ ಹೆಚ್ಚಾಗಲು ಸಾಧ್ಯ.

ಹನ್ನೆರಡನೇ ಶತಮಾನದ ಶರಣರು ಸಹಿತ ಕೃಷಿ ಕಾಯಕಕ್ಕೆ ದೊಡ್ಡ ಬೆಲೆ ನೀಡಿ, ಅವರ ತನು, ಭಾವ, ಮನ ಶುಧ್ಧ ವಾಗಿದ್ದು ಅಂಥವರನ್ನು ನನ್ನನ್ನು ತೋರಿಸಿ ಎಂದು ಪರಮಾತ್ಮನಲ್ಲಿ ಮೊರೆ ಇಡುವುದು ಅರಿತಿದ್ದೇವೆ. ಕಬ್ಬಿನ ಜೊತೆಗೆ ಈರುಳ್ಳಿ, ಸೊಯಾಬೀನ, ತಪ್ಪಲಿರುವ ಸಸಿ ಬೆಳೆದರೆ ಪರೋಕ್ಷವಾಗಿ ಕಬ್ಬಿಗೆ ಸಹಕಾರಿ. ಇತ್ತೀಚಿನ ದಿನಗಳಲ್ಲಿ ಸರಕಾರ ಅನೇಕ ಯೋಜನೆಗಳು ತರುತ್ತಿದೆ. ಆದರೆ ಪ್ರಾಮುಖ್ಯವಾಗಿ ಕೆರೆ ತುಂಬಿಸುವುದು, ಹೊಲಕ್ಕೆ ರಸ್ತೆ ಮಾಡಿಸುವುದು ಹಾಗೂ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಮಾಡಿದರೆ ಯಾವ ರೈತ ಸಹ ಹಳ್ಳಿ ಬಿಟ್ಟು ಪಟ್ಟಣ ಸೇರುವುದಿಲ್ಲ. ಇಂದು ರೈತರಿಗೆ ಹೆಣ್ಣು ಸಹ ಕೊಡುತ್ತಿಲ್ಲ ಇದೊಂದು ವಿಪರ್ಯಾಸ ಎಂದು ಹೇಳಿ ಇಡೀ ಜಗತ್ತಿಗೆ ಅನ್ನ ಕೊಡುವಾತನ ಪರಿಸ್ಥಿತಿ ಹೀಗಾಗಲು ಬಿಡಬಾರದೆಂಬ ಕಲ್ಪನೆಯಲ್ಲಿ ವಚನ ಚಾರಿಟೇವಲ್ ಸೊಸೈಟಿ ಇಂಥ ಬಹು ಉಪಯೋಗಿ ಹಾಗೂ ರೈತರಿಗೆ ನೆರವಾಗಲು ಬೃಹತ್ ವಿಚಾರ ಸಂಕಿರಣ ಆಯೋಜಿಸಿ ಸಾಮಾಜಿಕ ಬದ್ಧತೆ ಕಾಪಾಡಿ ಎಂದು ಸೇವೆಯನ್ನು ಸ್ಮರಿಸಿದರು.

ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಚಾಲನೆ ನೀಡಿದ ಆಂದ್ರಪ್ರದೇಶದ ನೈಸರ್ಗಿಕ ಕೃಷಿ ತಜ್ಞರು ಹಾಗೂ ಸಾವಯವ ಪದಾರ್ಥಗಳ ಸದುಪಯೋಗ ಮಾಡಲು ಜನ ಜಾಗೃತಿ ಮಾಡುವ ಹಾಗೂ ರಾಷ್ಟ್ರ ಪತಿ ಪ್ರಶಸ್ತಿ ಪುರಸ್ಕೃತರಾದ ಪ್ರಕೃತಿ ವನಂ ಪ್ರಸಾದ ತಮ್ಮ ಅನುಭವ ಹಂಚಿಕೊAಡು..ರೈತರು ತಮ್ಮ ಬೆಳೆಗೆ ಮೊದಲು ಬ್ರ‍್ಯಾಂಡ ಮಾಡಲು ಕಲಿತುಕೊಳ್ಳಬೇಕು. ನಾನು ಬೆಲ್ಲ ಮಾಡುವೆ ಸಾವಿರಾರು ಜನರು ನಾನಿದ್ದಲ್ಲಿಗೆ ಬಂದು ಪ್ರಕೃತಿ ವನಂ ಬ್ಯ್ರಾಂಡಿನ ಬೆಲ್ಲ, ತರಕಾರಿ, ಹಣ್ಣು, ದವಸ ಧಾನ್ಯ,ಸಿರಿಧಾನ್ಯ ಹೇಳಿದಷ್ಟು ಬೆಲೆಗೆ ಚೌಕಾಸಿ ಮಾಡದೆ ತೆಗೆದು ಕೊಂಡು ಹೋಗುತ್ತಿದ್ದಾರೆ, ಜನರಿಗೆ ನನ್ನ ಉತ್ಪಾದನೆ ಕೊಡಲು ಸಾಧ್ಯವಾಗುತ್ತಿಲ್ಲ.

ಇಂದು ಪ್ರತಿ ಕ್ಷೇತ್ರ ಕಲುಷಿತ ಗೊಂಡಿದೆ, ಭರವಸೆ ಹುಸಿಯಾಗಿದೆ, ನಂಬಿಕೆಯೇ ಇಲ್ಲದಂತಾಗಿದೆ. ವಿದೇಶ ಸಂಸ್ಕೃತಿ ಬಿಟ್ಟು ನಮ್ಮ ಸಂಸ್ಕೃತಿ ಅಳವಡಿಸಿ ಕೊಳ್ಳಿರಿ, ನಮಗೆ ಬೇಕಾದ ಎಲ್ಲ ತರಹದ ದವಸ ಧಾನ್ಯ, ತರಕಾರಿ ಬೆಳೆಯಿರಿ, ಜಂಕ, ಬೇಕರಿ ಆಹಾರದಿಂದ ಮಕ್ಕಳನ್ನು ದೂರವಿಡಿರಿ ಇಂಥ ಸಂದಿಗ್ಧತೆಯಲ್ಲಿ ರೈತರು ಸ್ವಲ್ಪ ಎಚ್ಚೆತ್ತು ನೈಸರ್ಗಿಕ ಕೃಷಿಗೆ ಒತ್ತು ಕೊಡಿರಿ, ತಾವು ಬೆಳೆಯುವಾಗ ಅನೇಕ ಕೃಷಿ ವಿಜ್ಞಾನಿಗಳ, ಅನುಭವಿ ರೈತರ ಮಾರ್ಗದರ್ಶನ ಪಡೆಯಿರಿ, ಹಿಂದಿನ ಕಾಲದಲ್ಲಿ ಯಾರೊಬ್ಬರು ರಾಸಾಯನಿಕ ಗೊಬ್ಬರ/ ಔಷಧಿ ಬಳಸುತ್ತಿರಲಿಲ್ಲ, ಅಂತೆಯೆ ಅಂದು ಯಾವುದೇ ತರಹದ ರೋಗ ರುಜಿನುಗಳಿಗೆ ತುತ್ತಾಗದೆ ನೂರು ವರ್ಷ ಬಾಳುತ್ತಿದ್ದರು, ಇಂದು ಶೇ ೭೦ ಜನರಿಗೆ ಶೂಗರ/ ಬಿಪಿ ಇದೆ. ಇದು ಕೇವಲ ವಿಷದ ಆಹಾರ ಸೇವನೆಯಿಂದ ಮಾತ್ರ ಎಂಬುದು ನಾವಿಂದು ಅರ್ಥೈಸಿಕೊಳ್ಳಬೇಕು. ಬೆಸಿಗೆ ಬಿಸಿಲಿನಲ್ಲಿ( ಸನ್ ಸ್ಟ್ರೋಕ್) ನರಳುತ್ತಿರುವ ಸಂದರ್ಭದಲ್ಲಿ ಸಾವಯವ ಬೆಲ್ಲ ಜೊತೆಗೆ ಜೀರಿಗೆ ಹಾಕಿ ಪಾನಕ ಮಾಡಿ ಸೇವಿಸಿದರೆ ಅದು ತಕ್ಷಣ ಕಡಿಮೆಯಾಗುತ್ತದೆ ಇದು ನನ್ನ ಪ್ರಾಯೋಗಿಕ ಅನುಭವವಾಗಿದ್ದು ಇಂಥ ಅನೇಕ ಔಷೋಧಪಚಾರ ನಮ್ಮಲ್ಲಿವೆ.

ನಮ್ಮ ಅಡುಗೆ ಮನೆ ಔಷಧ ಅಂಗಡಿಯಾಗಿ ಹಿತ್ತಲೆ ವಿವಿಧ ಔಷಧ ಬೆಳೆಯುವ ತಾಣವಾಗಬೇಕೆಂದು ತಮ್ಮ ೭೬ ವರುಷದ ಅನುಭವ ಹಂಚಿಕೊAಡರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೆಶಕರಾದ ಡಾ ಮಚೇಂದ್ರ ವಡ್ಡಿ ರೈತ ಸ್ಟಿಕರ್ ಬಿಡುಗಡೆ ಮಾಡಿ ಮಾತನಾಡಿ..ನಮ್ಮಲ್ಲಿ ಅನೇಕ ತಾಂತ್ರಿಕ ಕಾರಣಗಳು ಹಾಗೂ ನೀರಾವರಿ ಸಮಸ್ಯೆ ಜೊತೆಗೆ ಬೆಲೆ ಏರಿಳಿತದಿಂದಾಗಿ ಸಂಕಷ್ಟ ಇದೆ. ಆದರೆ ರೈತರು ಬ್ಯ್ರಾಂಡ ಮಾಡಿಕೊಂಡರೆ ಈ ಸಮಸ್ಯೆಗಳಿಂದ ಹೊರ ಬರಬಹುದು. ನೈಸರ್ಗಿಕ ಕೃಷಿಗೆ ಹೆಚ್ಚಿನ ಆದ್ಯತೆ ಕೊಡಲು ಮನವಿ ಮಾಡಿದರು.
ನಾರಾಂಜ ಸಹಕಾರ ಸಕ್ಕರೆ ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಸೋಮಶೇಖರ ಪಾಟೀಲ, ಆದರ್ಶ ರೈತರಾದ ಕೊತ್ತಾ ಭೀಮರೆಡ್ಡಿ ತಮ್ಮ ವಿಚಾರ ವ್ಯಕ್ತಪಡಿಸಿ ಬೆಳೆದ ಬೆಳೆಗೆ ವಚನ ಸಮೂಹ ಸಂಸ್ಥೆಯವರು ಮಾರಾಟದ ವ್ಯವಸ್ಥೆ ಮಾಡಿ ಕೊಡಲು ವಿನಂತಿ ಮಾಡಿದರು.

ವಚನ ಚಾರಿಟೇಬಲ್ ಅಧ್ಯಕ್ಷರಾದ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಕಂಡುಕೊAಡು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವಳಿ ಮಾಡುವ ರೈತರಿಗೆ ಮುಂದಿನ ರೈತ ದಿನಾಚರಣೆಯಲ್ಲಿ ಅಂಥ ರೈತರನ್ನು ಗುರುತಿಸಿ ನಮ್ಮ ಸಂಸ್ಥೆಯಿAದ ರೂ ೨೫೦೦೦/ ನಗದು ಹಣ ನೀಡಿ ಪ್ರೋತ್ಸಾಹ ಮಾಡಲಾಗುವುದು. ತಾವು ವಿಚಾರ ಸಂಕಿರಣದಲ್ಲಿ ಕೇಳಿದ್ದನ್ನು ನಿಜ ಜೀವನದಲ್ಲಿ ಅಳವಡಿಸಿ ಕೊಳ್ಳಲು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಬೀದರ ಜಿಲ್ಲೆಯಲ್ಲಿ ಆದರ್ಶ ಪ್ರಾಯೋಗಿಕ ರೈತರಾದ ಕರುಣಾ ರಾಮತಿರೆ ಕೃಷಿ ಮಹಿಳೆ, ರಾಹುಲ ಮುರಗ ಕೃಷಿ ಯಾಂತ್ರಿಕರಣ, ಹರದೇವ ಸಿಂಗ್ ತೋಟಗಾರಿಕೆ, ಡಾ ರಘು ಕೃಷ್ಣಮೂರ್ತಿ ಹೈನುಗಾರಿಕೆ, ಬಾಬುರಾವ ನೂಲಾ ಸಹಜ ಕೃಷಿಯಲ್ಲಿ ಸಾಧನೆ ಮಾಡಿರುವ ಪ್ರಯುಕ್ತ ಕೃಷಿ ನೈಪುಣ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಂದು ದಿನದ ಕಬ್ಬು ಬೆಳೆ ವಿಚಾರ ಸಂಕಿರಣದಲ್ಲಿ ತಾಂತ್ರಿಕ ಮಾರ್ಗದರ್ಶನ ಡಾ ಆರ್ ಎಲ್ ಜಾಧವ, ಡಾ ಕಾಶಿಲಿಂಗ ಅಗ್ರಹಾರ, ಮಾಣಿಕ ದೇಶಮುಖ ನಿಂಬೂರ, ಕರಬಸಯ್ಯ ಸ್ವಾಮಿ ಸಿಂದಬAದಗಿ ತಮ್ಮ ಕ್ಷೇತ್ರದಲ್ಲಿ ಕಂಡು ನೋವು, ಕಷ್ಟ ಜೊತೆಗೆ ಪರಿಹಾರ ಸಾಧನೆ ಮಾಡಿರುವ ಬಗೆ ಎಳೆ ಎಳೆಯಾಗಿ ಬಿಚ್ಚಿಟ್ಟು ಸೂಕ್ತ ಮಾಹಿತಿ ನೀಡಿದಾಗ ಉಪಸ್ಥಿತರಿದ್ದ ೨೫೦ ರೈತರು ಚಪ್ಪಾಳೆ ತಟ್ಟಿ ತಮ್ಮ ಕೃತಜ್ಞತೆ ಸಲ್ಲಿಸಿರುವುದು ಒಂದು ಅಪರೂಪವಾಗಿತ್ತು.

ವೇದಿಕೆ ಮೇಲೆ ವಚನ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಲ್ಲಮಪ್ರಭು ನಾವದಗೇರೆ ಹಾಗೂ ವಚನ ಸೌಹಾರ್ದ ಬ್ಯಾಂಕಿನ ಅಧ್ಯಕ್ಷರಾದ ಶಿವಕುಮಾರ ಸಾಲಿ ಉಪಸ್ಥಿತರಿದ್ದರು. ಮೊದಲಿಗೆ ಡಾ. ಸಿ.ಆರ್. ಕೊಂಡಾ ಕೃಷಿ ವಿಜ್ಞಾನಿಗಳು ಸ್ವಾಗತಿಸಿದರೆ, ಡಾ ರವಿ ದೇಶಮುಖ ಹಿರಿಯ ಕೃಷಿ ವಿಜ್ಞಾನಿಗಳು ಪ್ರಾಸ್ತಾವಿಕ ಮಾತನಾಡಿ ಉಪಯುಕ್ತ ಸಲಹೆ ಜೊತೆಗೆ ಅನೇಕ ರೈತರ ಪ್ರಶ್ನೆಗಳಿಗೆ ಸಂವಾದ ನಡೆಸಿ ಪರಿಹಾರ ಸೂಚಿಸಿದರು. ಡಾ ಮಲ್ಲಿಕಾರ್ಜುನ ನಿಂಗದಳ್ಳಿ ಅಚ್ಚುಕಟ್ಟಾಗಿ ನಿರೂಪಿಸಿದರೆ, ಡಾ.ವಿ.ಆರ್.ಪಾಟೀಲ ಕಬ್ಬು ಬೆಳೆಗಾರರು ವಂದನಾರ್ಪಣೆ ಮಾಡಿದರು. ಸಂಸ್ಥೆಯ ವತಿಯಿಂದ ಮುಂಜಾನೆ ಉಪಹಾರ, ಮಧ್ಯಾಹ್ನ ಊಟ ಜೊತೆಗೆ ಚಹಾದ ವ್ಯವಸ್ಥೆ ಮಾಡಲಾಗಿತ್ತು.