Home ಜಿಲ್ಲೆ ಬೆಂಗಳೂರು ಅಂತರ್ಜಲ ನೀರು ಕಲುಷಿತ-ಆರೋಪ

ಅಂತರ್ಜಲ ನೀರು ಕಲುಷಿತ-ಆರೋಪ

ಚಿಕ್ಕಬಳ್ಳಾಪುರ.ಮಾ೧೧:ಜಿಲ್ಲೆಯಲ್ಲಿ ನೀರಿಗೆ ಆಹಾಕರ ಮುಗಿಲು ಮುಟ್ಟಿದೆ,ಬೇಸಿಗೆ ಅಂತೂ ಅಂದರೆ ಸಾಕು ಉರಿ ಬಿಸಿಲಿನಲ್ಲಿ,ನೀರಿಗಾಗಿ ಹಾತೊರೆಯುವ ಗ್ರಾಮಗಳೆಷ್ಟೋ ಜಿಲ್ಲೆಯಲ್ಲಿ ಈಗಲೂ ಸಹಾ ಇದೆ ಅಂದರೆ ಎಲ್ಲರಿಗೂ ಇದೊಂದು ನಂಬಲು ಸಾಧ್ಯವೇ,ನಂಬಲೇ ಬೇಕು ಆಂಧ್ರ ಪ್ರದೇಶದಕ್ಕೆ ಹೊಂದಿಕೊಂಡಿರುವ ಗಡಿನಾಡ ಜಿಲ್ಲೆ ನಮ್ಮದು ಅದರಲ್ಲೂ ಭಾಗ್ಯನಗರ ಗುಡಿಬಂಡೆ,ಚೇಳೂರು ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಇಂತಹ ಬಿಕರ ಪರಸ್ಥಿತಿ ಇದೆ.ಚಿಕ್ಕಬಳ್ಳಾಪುರ ಜಿಲ್ಲೆಗೆ ಊ.ಓ. ವ್ಯಾಲಿ ಏ.ಅ.ವ್ಯಾಲಿ ನೀರು ತಂದು ಅಂತರ್ಜಲ ತುಂಬಿಸುವ ಕೆಲಸ ಸರ್ಕಾರ ಮಾಡುತ್ತಿದೆ,ಆದರೆ ೩ನೇಯ ಶುದ್ಧೀಕರಣ ಮಾಡದೆ ಇದ್ದ ಕಾರಣ ಅಂತರ್ಜಲ.ಕಲುಷಿತವಾಗಿದೆ ಎಂದು ಸಮತಾ ಸೈನಿಕ ದಳ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರಮಣಪ್ಪ ತಿಳಿಸಿದರು .


ಚಿಕ್ಕಬಳ್ಳಾಪುರ ಜಿಲ್ಲೆಗೆ ಈಗ ಹರಿದು ಬರುತ್ತಿರುವ ಕಲುಷಿತ ಹೆಚ್‌ಎನ್ ವ್ಯಲಿ ನೀರು ಸರಬರಾಜು ಆಗುತ್ತಿರುವ ಕಾರಣ ಮನುಷ್ಯರ ಆರೋಗ್ಯದ ಮೇಲೆ ತೀರ್ವ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ, ಇದು ವಿಶ್ವಧನೆಯ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.


ಇದರಿಂದ ನಾವು ಕೂಡಲೇ ಎತ್ತೆಚ್ಚಿಕೊಳ್ಳಬೇಕಾದ ಪರಸ್ಥಿತಿ ಎದುರಾಗಿದೆ ಆಗಾಗಿ ನನ್ನದೊಂದು ಸರ್ಕಾರಕ್ಕೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಶಾಸಕರಿಗೆ ಸಂಸದರಿಗೆ ಸಚಿವರಿಗೆ ಮನವಿ ಏನಂದರೆ ಇದೆ ಆಂಧ್ರಪ್ರದೇಶದ ಹಿಂದೂಪುರ ಭಾಗದಲ್ಲಿ ಕೃಷ್ಣ ನದಿ ನೀರು ಕೇವಲ ೬೦ಞm ದೂರದಲ್ಲಿ ಬರುತ್ತಿದೆ,ನಿಮ್ಮ ನಿಮ್ಮ ರಾಜಕೀಯ ಪಕ್ಷಗಳ ನಡುವೆ ಏನೇ ಭಿನ್ನಾಭಿಪ್ರಾಯ ಇದ್ದರೂ ಸಹಾ ಅದು ನಿಮ್ಮ ವೈಯಕ್ತಿಕ ಆದರೆ ಸಾರ್ವಜನಿಕರ ಹಿತ ಕಾಪಾಡಲು ತಾವೆಲ್ಲರೂ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಚಂದ್ರಬಾಬು ನಾಯ್ಡು ಮತ್ತು ನೀರಾವರಿ ಸಚಿವರೊಂದಿಗೆ ಮಾತುಕತೆ ನಡೆಸಿ ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೃಷ್ಣ ನದಿ ನೀರು ತರಲು ಪ್ರಯತ್ನ ಮಾಡಿದರೆ, ನಿಮ್ಮನ್ನು ಜಿಲ್ಲೆಯ ಜನತೆ ಉಸಿರು ಇರುವ ತನಕ ಮರೆಯುದಿಲ್ಲ ಮತ್ತೆಂದೂ ಸೋಲಿಸುವುದು ಇಲ್ಲ,ಇಂತಹ ಒಂದು ಪ್ರಯತ್ನ ಮಾಡಿ ಸರ್ಕಾರ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಆಗುತ್ತೆ ಈ ನಿಟ್ಟಿನಲ್ಲಿ ಇಲ್ಲಿನ ಜನಪ್ರತಿನಿಧಿಗಳು ಕಾರ್ಯೋನ್ಮುಖವಾಗಬೇಕೆಂದು,ಇದಕ್ಕೆ ಜಿಲ್ಲೆಯ ಎಲ್ಲಾ ನಾಗರಿಕರು ಸಂಘ ಸಂಸ್ಥೆಗಳ ಮುಖಂಡರು ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಬಯಸುತ್ತೇನೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.